ಡಯಾಲಿಸಿಸ್ ಅಂತಿಮವಲ್ಲ: ಮೃತ ದಾನಿದಾರ ಕಿಡ್ನಿಯಿಂದ ರೋಗಿಗೆ ಹೊಸ ಬದುಕು

Upayuktha
0


ಬೆಂಗಳೂರು, ವೈಟ್‌ಫೀಲ್ದ್‌: 48 ವರ್ಷದ ಉನ್ನಿಕೃಷ್ಣನ್ ಅವರ ಜೀವನ ಹಲವು ವರ್ಷಗಳಿಂದ ಡಯಾಲಿಸಿಸ್‌, ಔಷಧ ಮತ್ತು ಬದುಕುವ ನಿರೀಕ್ಷೆಯಲ್ಲೇ ಸಾಗುತ್ತಿತ್ತು. 2022ರಲ್ಲಿ ಕೊನೆ ಹಂತದ ಕಿಡ್ನಿ ವೈಫಲ್ಯ ದೃಢಪಟ್ಟ ಬಳಿಕ ಭರವಸೆಯನ್ನು ಕಳೆದುಕೊಂಡಿದ್ದು, ಅವರಿಗೆ ನಿಯಮಿತ ಡಯಾಲಿಸಿಸ್ ಆರಂಭಿಸಲಾಯಿತು. ಕುಟುಂಬದಲ್ಲಿ ಸೂಕ್ತ ದಾನಿದಾರರಿಲ್ಲದೇ ಮೃತ ದಾನಿದಾರರ ಕಿಡ್ನಿ ಕಸಿ ನಿರೀಕ್ಷಾ ಪಟ್ಟಿಯಲ್ಲಿ ಸೇರಿದರು.


36 ತಿಂಗಳ ಡಯಾಲಿಸಿಸ್ ಇತಿಹಾಸ, ನಿಯಂತ್ರಣದಲ್ಲಿರದ ರಕ್ತದೊತ್ತಡ ಹಾಗೂ 2024ರಲ್ಲಿ ಸಂಭವಿಸಿದ ಹೈಪರ್‌ಟೆನ್ಷನ್‌ ಸ್ಟ್ರೋಕ್‌ನಂತಹ ಆರೋಗ್ಯ ಸವಾಲುಗಳ ನಡುವೆಯೂ ಅವರು ಚಿಕಿತ್ಸೆ ಪಾಲನೆ, ನಿಯಮಿತ ಡಯಾಲಿಸಿಸ್‌ ಮತ್ತು ಶಿಸ್ತಿನಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡರು.


ಸುಮಾರು ಮೂರು ವರ್ಷಗಳ ಕಾಯುವಿಕೆಯ ನಂತರ, ರಸ್ತೆ ಅಪಘಾತದಲ್ಲಿ ಮೃತಪಟ್ಟ 18 ವರ್ಷದ ಯುವಕನ ಮೃತ ದಾನಿದಾರ ಕಿಡ್ನಿ ಲಭ್ಯವಾಯಿತು. ದಾನಿದಾರ ಕಿಡ್ನಿಯ ಕಾರ್ಯಕ್ಷಮತೆ ಉತ್ತಮವಾಗಿದ್ದು, ಕಸಿಗೆ ಸೂಕ್ತವಾಗಿತ್ತು.


ನೆಫ್ರಾಲಜಿಸ್ಟ್ ಡಾ. ನಿಶ್ಚಯ್ ಬಿ, ಹಾಗೂ ಟ್ರಾನ್ಸ್‌ಪ್ಲಾಂಟ್ ಶಸ್ತ್ರಚಿಕಿತ್ಸಕರಾದ ಡಾ. ಪ್ರಮೋದ್ ಎಸ್ ಮತ್ತು ಡಾ. ದಿಲೀಪ್ ಎಂ ರವರ ವೈದ್ಯರ ತಂಡದೊಂದಿಗೆ ನೇತೃತ್ವದಲ್ಲಿ ಕಿಡ್ನಿ ಕಸಿ ಯಶಸ್ವಿಯಾಗಿ ನೆರವೇರಿತು. ತಜ್ಞರ ನಿಗಾ ಮತ್ತು ಸೂಕ್ತ ಚಿಕಿತ್ಸೆಯಿಂದ ಕಿಡ್ನಿಯ ಕಾರ್ಯಕ್ಷಮತೆ ಕ್ರಮೇಣ ಸುಧಾರಿಸಿತು.


ಇಂದು ಉನ್ನಿಕೃಷ್ಣನ್ ಡಯಾಲಿಸಿಸ್‌ನಿಂದ ಮುಕ್ತರಾಗಿ, ಉತ್ತಮ ಕಿಡ್ನಿ ಕಾರ್ಯಕ್ಷಮತೆಯೊಂದಿಗೆ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ.


“ಕಿಡ್ನಿ ಕಸಿ ಪಡೆಯಲು ಅರ್ಹರಾದ ರೋಗಿಗಳಿಗೆ ಡಯಾಲಿಸಿಸ್ ಅಂತಿಮ ಆಯ್ಕೆಯಲ್ಲ. ಸೂಕ್ತ ಪರಿಶೀಲನೆ ಮತ್ತು ತನಿಖೆಗಳ ನಂತರ ಇಂತಹ ರೋಗಿಗಳನ್ನು ಮೃತ ದಾನಿದಾರ ಕಿಡ್ನಿ ಕಸಿ ನಿರೀಕ್ಷಾ ಪಟ್ಟಿಯಲ್ಲಿ ಸೇರಿಸಿ, ಡಯಾಲಿಸಿಸ್ ಮುಂದುವರೆಸಬಹುದು. ಶಿಸ್ತು, ನಿಯಮಿತ ಫಾಲೋ-ಅಪ್ ಮತ್ತು ಸಮಯೋಚಿತ ಚಿಕಿತ್ಸೆ ಇದ್ದರೆ ಯಶಸ್ವಿ ಕಿಡ್ನಿ ಕಸಿ ಸಂಪೂರ್ಣ ಸಾಧ್ಯ,” ಎಂದು ಡಾ. ನಿಶ್ಚಯ್ ಹೇಳಿದರು.


ಡಯಾಲಿಸಿಸ್ ಜೀವನಪೂರ್ತಿ ಎನ್ನುವ ತಪ್ಪು ಕಲ್ಪನೆಯಿಂದ ಅನೇಕರು ನಿರಾಶರಾಗುತ್ತಾರೆ. ಆದರೆ ಮೃತ ಅಂಗದಾನದ ಮೂಲಕ ಕಿಡ್ನಿ ಕಸಿ ಸಾವಿರಾರು ರೋಗಿಗಳಿಗೆ ಹೊಸ ಬದುಕಿನ ಅವಕಾಶ ನೀಡುತ್ತಿದೆ ಎಂದು ವೈದ್ಯರು ತಿಳಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top