ಅನುಭವದ ಶೃಂಗಾರದಿಂದ ಕವಿತೆ ಸೃಷ್ಟಿ: ರೇಮಂಡ್ ಡಿಕೂನಾ ತಾಕೊಡೆ

Upayuktha
0


ಮಂಗಳೂರು: ಜಾನಪದದ ಜೋಗುಳ, ಸ್ವಾತಂತ್ರ್ಯ ಹೋರಾಟದ ಪ್ರೇರಣೆ, ಹಾಗೂ ಇನ್ನಿತರ ಸಾಮಾಜಿಕ ಭದ್ದತೆಯ ವಿವಿಧ  ವಿಷಯಗಳ ಜೊತೆಗಿನ ಕವಿಯ ಅನುಭವದ ಅಂಶಗಳನ್ನು ಹೊತ್ತುಕೊಂಡು ಕವಿತೆಗಳು ರೂಪುಗೊಳ್ಳುತ್ತವೆ. ಎಂದು ರೇಮಂಡ್ ಡಿಕೂನಾ ತಾಕೊಡೆ ನುಡಿದರು.


ಅವರು ಶ್ರೀ ಸೋಮೇಶ್ವರ ದೇವಸ್ಥಾನ ಸೋಮೇಶ್ವರ ಇಲ್ಲಿ ಮಹಾ ಶಿವರಾತ್ರಿ ಪ್ರಯುಕ್ತದ ಆಯ್ದ ಹಿರಿಯ ಕವಿಗಳ ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.


ಮಹಾ ಶಿವರಾತ್ರಿ ಪ್ರಯುಕ್ತ ದೇವಳಕ್ಕೆ ನೂರಾರು ಭಕ್ತರ ಭೇಟಿಯ ಸಮಯದಲ್ಲಿ ಈ‌ ಕವಿಗೋಷ್ಟಿ ನಡೆಯಿತು.


ಮೊದಲಿಗೆ ಅರ್ಚಕರಾದ ಶ್ರೀಶ ಅವರು ದೀಪ ಬೆಳಗಿಸಿದರು. ಸೋಮೇಶ್ವರ ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ರವಿಶಂಕರ್ ಸೋಮೇಶ್ವರ ಅವರು,ನಾಯ್ಗರು ಸಮಾಜದ ಮುಖಂಡರಾದ ಹರಿಶ್ಚಂದ್ರ ಗಟ್ಟಿ ವೇದಿಕೆಯಲ್ಲಿ ಇದ್ದರು.


ಮೊದಲಿಗೆ ಕವಿಗೋಷ್ಟಿ ಸಂಯೋಜಕ ಆದ  ಎಂ ಎಸ್ ವೆಂಕಟೇಶ ಗಟ್ಟಿ ಸ್ವಾಗತಿಸಿದರು.


ಕವಿಗೋಷ್ಟಿಯ ಚಾಲನಾ ಕವಿತೆ ಗಝಲ್ ಓದಿ ಡಾ ಸುರೇಶ್ ನೆಗಳಗುಳಿ ಮಾಡಿದರು.


ಕವಿಗಳಾದ  ವಿಜಯಲಕ್ಷ್ಮಿ ಕಟೀಲ್,ಅನಾರ್ಕಲಿ  ಸಲಿಂ,ಸುಮಂಗಲ ದಿನೇಶ್, ಗಣೇಶ್ ಪ್ರಸಾದ್ ಜಿ,ಹರಿ ಪ್ರಸಾದ್ ಶೆಟ್ಟಿ ಗಾರ್, ವೆಂಕಟೇಶ ಗಟ್ಟಿ, ರಶ್ಮಿ ಸನಿಲ್, ರೇಮಂಡ್ ಡಿಕೂನಾ ತಾಕೊಡೆ ಕವಿಗಳು ಸಾಧರ ಪಡಿಸಿದರು.


ಮೊದಲಿಗೆ ಸಂಯೋಜಕ ಎಂಎಸ್ ವೆಂಕಟೇಶ ಗಟ್ಟಿ ಸ್ವಾಗತಿಸಿದರು, ರಶ್ಮಿ ಸನಿಲ್ ನಿರೂಪಿಸಿ ವಂದಿಸಿದರು.



  ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top