ಜಾಗೃತ ಸಮಾಜದ ನಿರ್ಮಾಣ ನಮ್ಮ ಹೊಣೆ: ಡಾ. ವಿಜಯ ಸರಸ್ವತಿ ಬಿ.

Upayuktha
0

ಪುತ್ತೂರು: ಯಾವುದೇ ಒಂದು ಆಚರಣೆ ಮಾಡಬೇಕಾದರೆ ಅದರ ಹಿನ್ನೆಲೆಯನ್ನು ತಿಳಿದಿರಬೇಕು. ಹುಟ್ಟಿ ಬೆಳೆದು ಮಣ್ಣಾಗುವಂತಹ ಈ ನಾಡಿನಲ್ಲಿ ಯಾವ ರೀತಿಯ ರಾಷ್ಟ್ರ ಭಕ್ತಿನಮ್ಮ ಮೂಲಕ ಜಾಗೃತವಾಗಬೇಕು ಎನ್ನುವ ಒಟ್ಟು ಯೋಚನೆ ಮಾಡುವಂತಹ ಮೂಲ ಆಶಯ ಹಾಗೂ ಉದ್ದೇಶವನ್ನು ಇರಿಸಿಕೊಂಡು ಹಿರಿಯರು ನಡೆಸಿಕೊಂಡು ಬಂದಂತಹ ಈ ಕಾರ್ಯಕ್ರಮ  ನಮ್ಮ ಹಾಗೂ ತಾಯ್ನಾಡಿನ ಸಂಬಂಧವನ್ನು ಬೆಸೆಯುವ ಅತ್ಯಂತ ವಿಶಿಷ್ಟವಾದ ಪದ್ಧತಿಯಾಗಿದೆ, ಎಂದು ಸ್ನಾತಕೋತ್ತರ ಅಧ್ಯಯನ ಕೇಂದ್ರ, ವಿವೇಕಾನಂದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ ಪುತ್ತೂರು,ಇದರ ಮುಖ್ಯಸ್ಥರಾದ ಡಾ. ವಿಜಯ ಸರಸ್ವತಿ ಬಿ. ನುಡಿದರು.


ಅವರು ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ನಡೆದ ಭಾರತ ಮಾತಾ ಪೂಜನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಮನುಷ್ಯ ಸಂಘಜೀವಿ ಹಾಗೂ ಸಮಾಜದ ಭಾಗವಾಗಿರುವುದರಿಂದ ಸಜ್ಜನರ ಸಂಘವನ್ನು ಮಾಡಬೇಕು. ಅಂತೆಯೇ ತಾಯಿ ಭಾರತಮಾತೆಯ ಸೇವೆ ಮಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಬೇಕು. ಉಸಿರನ್ನು ನೀಡಿದ ತಾಯಿ ಹಾಗೂ ಬದುಕಲು ಅವಕಾಶ ಮಾಡಿಕೊಟ್ಟಂತಹ ಈ ಭೂಮಿ ಎರಡೂ ಸ್ವರ್ಗಕ್ಕಿಂತಲೂ ಮಿಗಿಲು ಎಂದು ಹೇಳಿದರು.


ಆ ಬಳಿಕ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಾಂಶುಪಾಲರಾದ ದೇವಿಚರಣ್ ರೈ ಎಂ.  ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಹಂಸಿನಿ ವೈಯಕ್ತಿಕ ಗೀತೆಯನ್ನು ಹಾಡಿ, ಕನ್ನಡ ವಿಭಾಗದ ಉಪನ್ಯಾಸಕಿ ಪುಷ್ಪಲತಾ  ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.



  ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top