ನಗರ ಮೂಲ ಸೌಕರ್ಯಗಳಿಗೆ ಉತ್ತೇಜನ ಸ್ವಾಗತಾರ್ಹ

Upayuktha
0


ನಗರ ಪ್ರದೇಶಗಳ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ನೀಡಿರುವುದು ಸ್ವಾಗತಾರ್ಹ. ಹೈಸ್ಪೀಡ್ ರೈಲ್ವೆ ಕಾರಿಡಾರ್ ಬೆಂಗಳೂರಿಗೂ ವಿಸ್ತರಣೆ ಮಾಡಿರುವುದು ಶ್ಲಾಘನೀಯ. ಟ್ಯೂರಿಸಂ ಬೆಳವಣಿಗೆಗೆ ಪೂರಕವಾಗಿ ಮೆಡಿಕಲ್‌ ಟೂರಿಸಂ ಹೆಸರಿನಲ್ಲಿ ಐದು ಪ್ರದೇಶದಲ್ಲಿ ಮೆಡಿಕಲ್‌ ಹಬ್  ಸ್ಥಾಪನೆಗೆ ಮುಂದಾಗಿರುವುದು ಉದ್ಯೋಗ ಸೃಷ್ಟಿಗೆ ಸಹಾಯಕವಾಗ ಬಹುದು ಅನ್ನುವುದು ಸರ್ಕಾರದ ನಿರೀಕ್ಷೆ. ಪಶುವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಹೆಚ್ಚಿನ ಅನುದಾನದ ಭರವಸೆ ಆಶಾದಾಯಕ. ಸಣ್ಣ ಕೈಗಾರಿಕೆ ಮತ್ತು ಖಾದಿ ಗುಡಿಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚಿನ ಉತ್ತೇಜನ ಕ್ರಮ ಸ್ವಾಗತಾರ್ಹ.


ಕರಾವಳಿಯ ಪ್ರದೇಶದ ಮೀನುಗಾರರ ಸಹಕಾರಿ ಸಂಸ್ಥೆ ಸ್ಥಾಪನೆ ಬಗ್ಗೆ ಬಜೆಟ್‌ನಲ್ಲಿ ಒತ್ತು ನೀಡಿರುವುದು ಬಜೆಟ್‌ನಲ್ಲಿ ಕಾಣುವ ಉತ್ತಮ ಅಂಶ. ಜಿಎಸ್‌ಟಿ ಸರಳೀಕೃತ ನಿರ್ಧಾರ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಸಮಾಧಾನಕರ ಬಜೆಟ್. ಕ್ಯಾನ್ಸರ್‌ ನಂತಹ ಪ್ರಮುಖ ಖಾಯಿಲೆಗಳ ಔಷಧಿಗಳಿಗೆ ತೆರಿಗೆ ವಿನಾಯಿತಿ ತೇೂರಿರುವುದು ಬಜೆಟ್‌ನಲ್ಲಿ ಕಾಣುವ ಇನ್ನೊಂದು ಪ್ರಮುಖ ಅಂಶ. 2047 ತನಕ ಭಾರತದಲ್ಲಿ ವಿದೇಶಿ ಕಂಪನಿಗಳ ಬಂಡವಾಳ ಹೂಡಿಕೆಗೆ ತೆರಿಗೆ ವಿನಾಯಿತಿ ನೀಡಿರುವುದರಿಂದ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡ ಬಹುದು.


ಒಟ್ಟಿನಲ್ಲಿ ವಿತ್ತ ಸಚಿವರು ಮಂಡಿಸಿದ ಬಜೆಟ್ ಅಭಿವೃದ್ಧಿ ಜನಪರ ಯೇೂಗ ಕ್ಷೇಮದ ದೃಷ್ಟಿಯಿಂದ ಹೊಸದೊಂದು ಕನಸು ಮೂಡಿಸಿದೆ. ಆದರೆ ಜನಸಾಮಾನ್ಯರ ಮುಂದಿರುವ ಬಹು ದೊಡ್ಡ ಪ್ರಶ್ನೆ ಅಂದರೆ ಕಳೆದ ಆಥಿ೯ಕ ವರುಷದಲ್ಲಿ ಮಂಡಿಸಿದ ಬಜೆಟ್ ಎಷ್ಟರ ಮಟ್ಟಿಗೆ ಅನುಷ್ಠಾನ ಗೊಂಡಿದೆ ಅನ್ನುವ ಲೆಕ್ಕಾಚಾರ ಪ್ರಸ್ತುತ ಬಜೆಟ್ ನಲ್ಲಿ ಎಲ್ಲಿಯೂ ಉಲ್ಲೇಖಿಸದೇ ಇರುವುದು ವಿಷಾದನೀಯ. ಜನಸಾಮಾನ್ಯರಿಗೆ ಯಾವುದೇ ಬಜೆಟ್ ಮೇಲೆ ವಿಶ್ವಾಸಾರ್ಹತೆ ಮೂಡಿಬರ ಬೇಕಾದರೆ ಹಿಂದಿನ ಬಜೆಟ್ ಮೇಲಿನ ಪ್ರಗತಿಯ ಕುರಿತಾಗಿ ಸದನಕ್ಕೆ ಮಾಹಿತಿ ನೀಡುವ ಕಾರ್ಯ ನಡೆಯಲೇಬೇಕು ಅನ್ನುವುದು ನನ್ನ ಸ್ವಷ್ಟ ಅಭಿಪ್ರಾಯ.



- ಪ್ರೊ. ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ, ಉಡುಪಿ

ನಿವೃತ್ತ ರಾಜ್ಯ ಶಾಸ್ತ್ರ ಪ್ರಾಧ್ಯಾಪಕ


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top