ಕಾಲೇಜು ವಿದ್ಯಾರ್ಥಿನಿಯರಿಗೆ ಸ್ತನ ಕ್ಯಾನ್ಸರ್ ಜಾಗೃತಿ

Upayuktha
0


ಮಂಗಳೂರು: ದೇಶದ ಪ್ರಮುಖ ಖಾಸಗಿ ಜೀವ ವಿಮೆ ಕಂಪನಿಗಳಲ್ಲಿ ಒಂದಾಗಿರುವ ಬಿಐ ಲೈಫ್ ಇನ್ಶೂರನ್ಸ್ ವತಿಯಿಂದ ನಗರದ ಸೆಂಟ್ ಆಗ್ನೇಸ್ ಕಾಲೇಜಿನಲ್ಲಿ ಸ್ತನ ಕ್ಯಾನ್ಸರ್ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿನಿಯರ ಜತೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜೀವ ರಕ್ಷಣೆ ಮತ್ತು ಸಬಲೀಕರಣದ ಉದ್ದೇಶದ 'ಥ್ಯಾಂಕ್ಸ್ ಎ ಡಾಟ್' ಅಭಿಯಾನ ಅಂಗವಾಗಿ ಈ ಸಂವಾದ ಹಮ್ಮಿಕೊಳ್ಳಲಾಗಿತ್ತು.


ಈ ಉಪಕ್ರಮದಡಿ ದೇಶದಾದ್ಯಂತದ ಕಾಲೇಜು ವಿದ್ಯಾರ್ಥಿನಿಯರಿಗೆ ತಿಳಿವಳಿಕೆ ಮೂಡಿಸಲಾಗುತ್ತದೆ. ಸ್ತನ ಆರೋಗ್ಯವನ್ನು ಮನೆ- ಮನೆಗಳಲ್ಲಿ ಸಹಜ ರೀತಿಯಲ್ಲಿ ಚರ್ಚಿಸುವ ವಿಷಯವನ್ನಾಗಿ ಬದಲಾಯಿಸಲು ಮತ್ತು ಸ್ತನ ಕ್ಯಾನ್ಸರ್ ತಡೆಗಟ್ಟುವ ಆರೈಕೆಯ ಕುರಿತು ಪೂರ್ವಭಾವಿ ಚರ್ಚೆ ನಡೆಸುವುದನ್ನು ಪ್ರೋತ್ಸಾಹಿಸಲು ಈ ಉಪಕ್ರಮವು ಉದ್ದೇಶಿಸಿದೆ.


ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ಸುಮಾರು 250 ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆದರು. ಎಸ್‍ಬಿಐ ಲೈಫ್‍ನ ಬ್ರ್ಯಾಂಡ್, ಕಾಪೆರ್Çರೇಟ್ ಸಂವಹನ ಮತ್ತು ಸಿಎಸ್‍ಆರ್ ಮುಖ್ಯಸ್ಥ ರವೀಂದ್ರ ಶರ್ಮಾ ಮತ್ತು ಮಂಗಳೂರಿನ ಕ್ಯಾನ್‍ಕ್ಯೂರ್ ಆಂಕೊಲಾಜಿ ಕ್ಲಿನಿಕ್‍ನ ಕ್ಯಾನ್ಸರ್‍ತಜ್ಞ ಡಾ. ವಿನಯ್ ಕುಮಾರ್ ರಾಜೇಂದ್ರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಆರಂಭಿಕ ಹಂತದಲ್ಲಿಯೇ ಸ್ತನ ಕ್ಯಾನ್ಸರ್ ಪತ್ತೆ ಹಚ್ಚುವ ಸರಳ ವಿಧಾನದ ಮಾಹಿತಿ ನೀಡಿದರು. ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುವ ಮುಂಚಿನ ಎಚ್ಚರಿಕೆ ಚಿಹ್ನೆಗಳನ್ನು ಗುರುತಿಸುವುದು, ಸಾಮಾಜಿಕ ನಿಷೇಧಗಳನ್ನು ಉಲ್ಲಂಘಿಸುವುದು ಮತ್ತು ಆರೋಗ್ಯ ರಕ್ಷಣೆಯ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಒಳನೋಟ ನೀಡಿದ ಅರ್ಥಪೂರ್ಣ ಚರ್ಚೆಯಲ್ಲಿ ಭಾಗವಹಿಸಿದ್ದರು. ಕಾಲೇಜು ಪ್ರಾಂಶುಪಾಲರಾದ ಸಿಸ್ಟರ್  ಡಾ. ಎಂ. ವೆನಿಸ್ಸಾ ಎ ಸಿ ಉಪಸ್ಥಿತರಿದ್ದರು.


ಸ್ತನ ಕ್ಯಾನ್ಸರ್‍ಗೆ ಸಂಬಂಧಿಸಿದಂತೆ ಹಿಂಜರಿಕೆ ಮತ್ತು ಕಳಂಕ ಹೋಗಲಾಡಿಸಲು ನೆರವಾಗುವ ರೀತಿಯಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಈ ಉಪಕ್ರಮವು, ಭಯವಿಲ್ಲದೆ ಜಾಗೃತಿ ಮೂಡಿಸಲಿದೆ, ಯುವತಿಯರನ್ನು ಜೀವ ಉಳಿಸುವ ಕೌಶಲದಿಂದ ಸಜ್ಜುಗೊಳಿಸಲಿದೆ. ಸ್ತನ ಕ್ಯಾನ್ಸರ್ ಬಗ್ಗೆ ಸಹಜ ರೀತಿಯಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳಲು ಕಾಲೇಜ್ ವಿದ್ಯಾರ್ಥಿನಿಯರಿಗೆ ಪ್ರೇರಣೆ ನೀಡಲಿದೆ ಎಂದು ಪ್ರಕಟಣೆ ಹೇಳಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top