ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಸಮಾರೋಪ

Upayuktha
0


ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಪುತ್ತೂರು ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ 2025-26 “ಡಿಜಿಟಲ್ ಸಾಕ್ಷರತೆಗಾಗಿ ಯುವಜನತೆ - ನನ್ನ ಭಾರತಕ್ಕಾಗಿ ಯುವಜನತೆ” ಎಂಬ ಧ್ಯೇಯ ವಾಕ್ಯದಡಿಯಲ್ಲಿ 03-02-2026 ರಿಂದ 09-02-2026 ರವರೆಗೆ ಸರಕಾರಿ ಪ್ರೌಢ ಶಾಲೆ ಪಾಪೆಮಜಲು ಅರಿಯಡ್ಕ ಇಲ್ಲಿ ನಡೆಯುತ್ತಿದ್ದು ಇದರ ಸಮಾರೋಪ ಸಮಾರಂಭವು 09-02-2026 ರಂದು ನಡೆಯಿತು. 


ಈ ಕಾರ್ಯಕ್ರಮದಲ್ಲಿ ಅತಿ ವಂದನೀಯ ಲಾರೆನ್ಸ್ ಮಸ್ಕರೇನಸ್ ಸಂಚಾಲಕರು, ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಪುತ್ತೂರು, ಡಾ. ಶೇಷಾಪ್ಪ ಸಂಯೋಜನಾಧಿಕಾರಿಗಳು, ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾನಿಲಯ, ಡಾ. ವಿಜಯ ಕುಮಾರ್ ಮೊಳೆಯಾರ್ ಉಪಪ್ರಾಂಶುಪಾಲರು, ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರು, ಮೀನಾಕ್ಷಿ ಪಾಪೆಮಜಲು,  ಶ್ರೀಧರ ಪೂಜಾರಿ,  ಸಚಿನ್ ಪಾಪೆಮಜಲು, ಮಲ್ಲಿಕಾ ಜೆ ರೈ, ಡಾ ಹಾಜಿ. ಎಸ್ ಅಬೂಬಕ್ಕರ್ ಆರ್ಲಪದವು ಶಶಿಕಲಾ, ಪ್ರವೀಣಾ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡಾ ಶೇಷಾಪ್ಪ ಕೆ ಇವರು ಸಮಾರೋಪ ಭಾಷಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ, ಉಪಯೋಗ ಹಾಗೂ ಶಿಬಿರದಿಂದ ಕಲಿಯುವ ಮೌಲ್ಯಗಳನ್ನು ಶಿಬಿರಾರ್ಥಿಗಳಿಗೆ ತಿಳಿಸಿಕೊಟ್ಟರು. 


ನಂತರ ವೇದಿಕೆಯಲ್ಲಿದ್ದ ಗಣ್ಯ ವ್ಯಕ್ತಿಗಳು ಹಿತನುಡಿಗಳನ್ನಾಡಿ ಶುಭ ಹಾರೈಸಿದರು. ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ವಿಶೇಷ ಸಾಧನೆ ಗೈದ ಸ್ವಯಂಸೇವಕರನ್ನು ಗಣ್ಯರು ಗೌರವಿಸಿದರು. ನಂತರ ಶೈಕ್ಷಣಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಮತ್ತು ಉತ್ತಮ ವರದಿ ಬರವಣಿಗೆಗೆ ಬಹುಮಾನ ನೀಡಲಾಯಿತು. ವರದಿ ಬರವಣಿಗೆಯ ಬಹುಮಾನವನ್ನು ದ್ವಿತಿ, ಸ್ಪಂದನ, ಕೀರ್ತನಾ ,ಅಶ್ವಿನಿ ಇವರು ಪಡೆದುಕೊಂಡರು. 


ನಂತರ ದಾನಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು ಹಾಗೂ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಸರ್ಕಾರಿ ಪ್ರೌಢಶಾಲೆ ಪಾಪೆಮಜಲು ಅರಿಯಡ್ಕ ಇವರಿಗೆ ನೆನಪಿನ ಕಾಣಿಕೆಯಾಗಿ ಕುರ್ಚಿ ನೀಡಲಾಯಿತು. ಸಂಚಾಲಕರಾದ ಅತಿ ವಂದನೀಯ ಲಾರೆನ್ಸ್ ಮಸ್ಕರೇನಸ್ ಇವರು ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದ ಸ್ವಾಗತ ಭಾಷಣ ಹಾಗೂ ಧನ್ಯವಾದಗಳನ್ನು ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಪುಷ್ಪ ಎನ್ ಹಾಗೂ ಡಾ. ಕೆ. ಚಂದ್ರಶೇಖರ್ ಇವರು ನಡೆಸಿಕೊಟ್ಟರು.


ಶಿಬಿರದ ವರದಿಯನ್ನು ಗೀತಾ ಕೆ. ಬಿ ಮತ್ತು ರತನ್ ಇವರು ವಾಚಿಸಿದರು. ತಮ್ಮ ಅನುಭವಗಳನ್ನು ಮುಕ್ತವಾಗಿ ತಅಪರ್ಣ ಎಸ್, ಸುಷ್ಮಾ, ರಿಷಿಕಾ, ಮನೀಷ್,ಆಕಾಶ್ ರೈ ರವರು ತಿಳಿಸಿದರು. ವಿಶೇಷ ಸಾಧನೆ ಮಾಡಿದವರ ವರದಿಯನ್ನು ಅಶ್ವಿನಿ ಮತ್ತು ಬಹುಮಾನ ವಿತರಣಾ ಪಟ್ಟಿಯನ್ನು ವಿಷ್ಣುಜೀತ್ ರವರು ವಾಚಿಸಿದರು, ಕಾರ್ಯಕ್ರಮವನ್ನು ಸ್ಪಂದನಾ ರವರು ನಿರೂಪಿಸಿದರು.


  ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top