ಮಂಗಳೂರು: ಮಂಗಳೂರಿನ ಫಿಜಾ ಬೈ ನೆಕ್ಸಸ್ ಮಾಲ್, ಫೆಬ್ರವರಿ 18 ರಿಂದ ಮಾರ್ಚ್ 20 ರವರೆಗೆ ತನ್ನ ಮುಕ್ತ ಮೈದಾನದಲ್ಲಿ ವೈವಿಧ್ಯಮಯ ಮತ್ತು ಆಕರ್ಷಕ 'ರಂಜಾನ್ ಫುಡ್ ಸ್ಟ್ರೀಟ್' ಅನ್ನು ಆಯೋಜಿಸಲು ಸಜ್ಜಾಗಿದೆ.
ಆಹಾರ, ಸಂಸ್ಕೃತಿ ಮತ್ತು ಒಗ್ಗಟ್ಟಿನ ಮೂಲಕ ರಂಜಾನ್ ಹಬ್ಬದ ಸಂಭ್ರಮವನ್ನು ಆಚರಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ವಿಶೇಷವಾಗಿ ವಿನ್ಯಾಸಗೊಳಿಸಲಾದ ಈ ರಂಜಾನ್ ಆಹಾರ ಮೇಳವು ಒಟ್ಟು 17 ಮಳಿಗೆಗಳನ್ನು ಹೊಂದಿರಲಿದ್ದು, ಇಲ್ಲಿ ವಿವಿಧ ರೀತಿಯ ಸಾಂಪ್ರದಾಯಿಕ ಹಬ್ಬದ ಖಾದ್ಯಗಳು ಮತ್ತು ಆಧುನಿಕ ಶೈಲಿಯ ತಿನಿಸುಗಳು ಲಭ್ಯವಿರಲಿವೆ.
ಇಫ್ತಾರ್ ಅವಧಿಯ ಜನಪ್ರಿಯ ಖಾದ್ಯಗಳಿಂದ ಹಿಡಿದು ವೈವಿಧ್ಯಮಯ ಸುವಾಸನೆಯ ಆಹಾರಗಳವರೆಗೆ, ಈ ಫುಡ್ ಸ್ಟ್ರೀಟ್ ಎಲ್ಲಾ ವಯೋಮಾನದ ವರಿಗೂ ಒಂದು ಅದ್ಭುತ ರುಚಿಯ ಅನುಭವವನ್ನು ನೀಡಲಿದೆ. ತಿಂಗಳ ಪೂರ್ತಿ ಕಾರ್ಯನಿರ್ವಹಿಸಲಿರುವ ಈ ಮಳಿಗೆಗಳು, ನಗರದ ಜನರಿಗೆ ಸಂಜೆಯ ಹೊತ್ತು ಕಳೆಯಲು ಒಂದು ಜೀವಂತ ಕಳೆಯಿಂದ ಕೂಡಿದ ತಾಣವಾಗಲಿದೆ.
ಸುಂದರವಾದ ರಂಜಾನ್ ಅಲಂಕಾರದೊಂದಿಗೆ, ಮಾಲ್‌ನ ಮುಕ್ತ ಮೈದಾನವು ಕುಟುಂಬಸ್ಥರು ಮತ್ತು ಸ್ನೇಹಿತರು ಒಂದೆಡೆ ಸೇರಿ ಹಬ್ಬದೂಟ ಸವಿಯಲು ಸೂಕ್ತವಾದ ಸ್ಥಳವಾಗಿ ಮಾರ್ಪಡಲಿದೆ. ರಂಜಾನ್ ಫುಡ್ ಸ್ಟ್ರೀಟ್ ಸಾರ್ವಜನಿಕರಿಗೆ ಮುಕ್ತವಾಗಿದ್ದು, ಪವಿತ್ರ ಮಾಸದ ಸಾರವನ್ನು ಸವಿಯುತ್ತಾ ಹಬ್ಬದ ವಾತಾವರಣದಲ್ಲಿ ಆಹಾರದ ಮಜಾ ಅನುಭವಿಸಲು ಇದು ಅತ್ಯುತ್ತಮ ಅವಕಾಶವಾಗಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


