ಪುಳ್ಕೂರಿನ ಶ್ರೀ ಮಹಾದೇವ ದೇವಸ್ಥಾನ ಜಾತ್ರೆಯಲ್ಲಿ ಗಡಿನಾಡ ಕನ್ನಡ ಸಂಸ್ಥೆಯ 170ನೇ ಸಾಂಸ್ಕೃತಿಕ ಕಾರ್ಯಕ್ರಮ

Upayuktha
0


ಕಾಸರಗೋಡು: ಪುಳ್ಕೂರಿನ ಶ್ರೀ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಡಾ. ವಾಣಿಶ್ರೀ ಸಾರಥ್ಯ ಅವರ ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯು ತನ್ನ 170ನೇ ಸಾಂಸ್ಕೃತಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಾದರಪಡಿಸಿತು. ಜಾತ್ರಾ ಮಹೋತ್ಸವದ ಪ್ರಥಮ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸುವ ಸೌಭಾಗ್ಯ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಗೆ ಲಭಿಸಿತು.


ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದಿವಾಕರ ಕಾಸರಗೋಡು, ಮೇಘರಾಜ ಆಚಾರ್ಯ, ಶಿವಪ್ರಸಾದ ಪುತ್ತಿಗೆ ಹಾಗೂ ಮೋಹನ ಆಚಾರ್ಯ ಅವರು ಕಲಾವಿದರಾಗಿ ಭಾಗವಹಿಸಿ ಸುಶ್ರಾವ್ಯ ಗಾಯನವನ್ನು ಪ್ರಸ್ತುತಪಡಿಸಿದರು. ಅವರ ಕಲಾ ಪ್ರದರ್ಶನವು ನೆರೆದಿದ್ದ ಕಲಾಭಿಮಾನಿಗಳ ಮನಗೆದ್ದಿತು.


ಸಂಸ್ಥೆಯ ಮುಖ್ಯಸ್ಥೆ ಡಾ. ವಾಣಿಶ್ರೀ ಅವರು ಸಾಹಿತ್ಯ ಸಾದರಪಡಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ಡಾ. ವಾಣಿಶ್ರೀ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಮೋಹನ, ಸದಾಶಿವ ಶೆಟ್ಟಿ ನೀರಾಳ, ಸೀನ, ರವೀಂದ್ರ, ಬಾಲಕೃಷ್ಣ, ಕುಮಾರ ಹಾಗೂ ಅಚ್ಯುತ ಭಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಂಗೀತ ಕಲಾಚೈತ್ರರಿಗೆ ಗೌರವಧನ ಹಾಗೂ ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top