ಕಲಬುರಗಿ: ಪ್ರಣವಾನಂದ ಶ್ರೀಗಳವಾನಂದ ಶ್ರೀಗಳು ಈಡಿಗ, ಬಿಲ್ಲವ ಸೇರಿದಂತೆ 26 ಪಂಗಡಗಳ 18 ಬೇಡಿಕೆಗಳನ್ನು ಒತ್ತಾಯಿಸಿ ನಡೆಸುತ್ತಿರುವ 700 ಕಿಲೋಮೀಟರ್ ಉದ್ದದ ಪಾದಯಾತ್ರೆ, ನಾಲ್ಕನೇ ದಿನಕ್ಕೆ ಕಾಲಿರಿಸಿದ್ದು ವ್ಯಾಪಕ ಜನ ಬೆಂಬಲ ವ್ಯಕ್ತವಾಗುತ್ತಿದೆ.
ಕರದಾಳ, ಚಿತ್ತಾಪುರ,ರಾವೂರ, ಶಾಬಾದ್ ಜೇವರ್ಗಿ ಕ್ರಾಸ್,ಕಟ್ಟಿಸಂಗಾವಿ, ಜೇವರ್ಗಿ, ಚಿಗರಳ್ಳಿ ಕ್ರಾಸ್ ಅಂದೋಲ ಮೂಲಕ ತೆರಳಿ ಇಂದು ಜನವರಿ 9ರಂದು ಚಿಕ್ಕ ಮುಡಬಾಳದಲ್ಲಿ ವಾಸ್ತವ್ಯ ಹೂಡಲಿದೆ. ಈ ವರೆಗೆ 72 ಕೀ . ಮೀ ಪಾದಯಾತ್ರೆ ಪೂರ್ಣಗೊಂಡಿದೆ.
ಶಹಾಬಾದ ಹೊರಟ ಪಾದಯಾತ್ರೆಯಲ್ಲಿ ಕೋಲಿ ಸಮುದಾಯದ ಶ್ರೀ ಮಲ್ಲಣ್ಣ ಮುತ್ಯ , ಉಪ್ಪಾರ ಸಮುದಾಯದ ಶ್ರೀ ಭಗೀರಥಾನಂದಪುರಿ ಸ್ವಾಮೀಜಿ ಹೆಜ್ಜೆ ಹಾಕಿದರು. ಜೇವರ್ಗಿ ಪಟ್ಟಣದಲ್ಲಿ ಪಾದಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಿ ಹಲಿಗೆ ಡೊಳ್ಳು ವಾದನದೊಂದಿಗೆ ಸಜ್ಜನ ಕಲ್ಯಾಣ ಮಂಟಪಕ್ಕೆ ಕರೆದೊಯ್ಯಲಾಯಿತು. ನಂತರ ನಡೆದ ಸಮಾಜದ ಜಾಗೃತಿ ಸಭೆಯಲ್ಲಿ ತೆಲಂಗಾಣದ ರಾಜ್ಯದ ಮಾಜಿ ಸಚಿವರಾದ ವಿ ಶ್ರೀನಿವಾಸ್ ಗೌಡ, ಬಸವಕಲ್ಯಾಣದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಹಾಗೂ ಕಲಬು ರಗಿ ಜಿಲ್ಲೆಯ ಈಡಿಗ ಸಮುದಾಯದ ನಾಯಕರಾದ ಬಾಲರಾಜ್ ಗುತ್ತೇದಾರ್, ಆಳಂದದ ಸಂತೋಷ್ ಗುತ್ತೇದಾರ್, ವೆಂಕಟೇಶ್ ಕಡೇಚೂರ್, ಮಹಾದೇವ ಗುತ್ತೇದಾರ್, ಕುಪೇಂದ್ರ ಗುತ್ತೇದಾರ್ ನಾಗೂರ, ಸುರೇಶ್ ಮಟ್ಟೂರು , ಪ್ರವೀಣ್ ಗು ಜತ್ತನ್, ಅಂಬಯ್ಯ ಇಬ್ರಾಹಿಂಪುರ್, ರಾಜೇಶ್ ದತ್ತು ಗುತ್ತೇದಾರ್ ಹಾಗೂ ಜೇವರ್ಗಿ ತಾಲೂಕಿನ ಸಮುದಾಯದ ಮುಖಂಡರುಗಳು ಐತಿಹಾಸಿಕ ಪಾದಯಾತ್ರೆಗೆ ಅಭೂತಪೂರ್ವದ ಸ್ವಾಗತವನ್ನು ನೀಡಿದರು. ಫೆಬ್ರವರಿ12 ರಂದು ಫ್ರೀಡಂ ಪಾರ್ಕಿನಲ್ಲಿ ಪಾದಯಾತ್ರೆ ಸಮಾಪನಗೊಳ್ಳಲಿದ್ದು ಆ ದಿನ ಜೇವರ್ಗಿಯಿಂದ ಮೂರು ಬಸ್ಸಿನ ಮೂಲಕ ಕುಲಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಜೇವರ್ಗಿಯ ಈಡಿಗ ಸಮುದಾಯದ ಮುಖಂಡರುಗಳು ತಿಳಿಸಿದರು ಎಂದು ಮಾಧ್ಯಮ ಸಂಚಾಲಕರಾದ ಡಾ ಸದಾನಂದ ಪೆರ್ಲ ತಿಳಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


