ನೃತ್ಯ ಕಲಾರ್ಪಣ: ನವರಸ ರಂಜನಿಯ ಮನಮೋಹಕ ನೃತ್ಯ ಸಂಭ್ರಮ

Upayuktha
0



ಬೆಂಗಳೂರು : ಸಪ್ತಸ್ವರ ನೃತ್ಯಾಲಯ ಕಲ್ಚರಲ್ ಆರ್ಟ್ಸ್ ಸೆಂಟರ್ ವತಿಯಿಂದ ಜನವರಿ 10, ಶನಿವಾರ ಮಧ್ಯಾಹ್ನ 3-30ಕ್ಕೆ ನಗರದ ಮಲ್ಲತ್ತಳ್ಳಿಯ ಕಲಾಗ್ರಾಮದ ಸಮುಚ್ಛಯ ಭವನದಲ್ಲಿ "ನೃತ್ಯಾರ್ಪಣ"  ಶೀರ್ಷಿಕೆಯಲ್ಲಿ ನವರಸ ರಂಜನಿ ಮತ್ತು ಭೈರವಮ್ ಎಂಬ ವಿಶೇಷ ನೃತ್ಯ ಪ್ರದರ್ಶನವನ್ನು ಏರ್ಪಡಿಸಲಾಗಿದೆ.


ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಾಟ್ಯೇಶ್ವರ ನೃತ್ಯ ಶಾಲೆಯ ಅಧ್ಯಕ್ಷರಾದ 'ಕಲಾಯೋಗಿ' ಗುರು ಶ್ರೀ ಕೆ.ಪಿ. ಸತೀಶಬಾಬು, ಕಾರ್ಯದರ್ಶಿಯಾದ ವಿದುಷಿ ಶ್ರೀಮತಿ ವಾಣಿ ಸತೀಶಬಾಬು (ನೃತ್ಯ ದಂಪತಿಗಳು) ಮತ್ತು ನೃತ್ಯ ಲಹರಿ ಕಲಾ ಕೇಂದ್ರದ ನಿರ್ದೇಶಕರಾದ ವಿದುಷಿ ಶ್ರೀಮತಿ ರೂಪಾ ಗಿರೀಶ್ ಇವರು ಉಪಸ್ಥಿತರಿರುವರು ಎಂದು ಸಪ್ತಸ್ವರ ನೃತ್ಯಾಲಯದ ಸಂಸ್ಥಾಪಕರೂ ಗುರುಗಳೂ ಆದ ವಿದುಷಿ ಶ್ರೀಮತಿ ಮಂಜುಳಾ ಜಗದೀಶ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Post a Comment

0 Comments
Post a Comment (0)
To Top