ಹಾಸ್ಯಗಾರ ಮಹೇಶ್ ಮಣಿಯಾಣಿಗೆ ವನಜ–ಸುಜನಾ ರಂಗಮನೆ ಪ್ರಶಸ್ತಿ

Upayuktha
0


ಸುಳ್ಯ: ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ (ರಿ.), ಸುಳ್ಯ ಇದರ ಆಶ್ರಯದಲ್ಲಿ, ರಂಗನಿರ್ದೇಶಕ ಡಾ. ಜೀವನ್ ರಾಂ ಸುಳ್ಯ ಅವರ ಮಾತಾಪಿತೃಗಳ ಸ್ಮರಣಾರ್ಥ ನೀಡಲಾಗುವ 2026ನೇ ಸಾಲಿನ ವನಜ–ಸುಜನಾ ರಂಗಮನೆ ಪ್ರಶಸ್ತಿಗೆ ಶ್ರೀ ಧರ್ಮಸ್ಥಳ ಯಕ್ಷಗಾನ ಮೇಳದ ಪ್ರಸಿದ್ಧ ಹಾಸ್ಯಗಾರ ಮಹೇಶ್ ಮಣಿಯಾಣಿ ಅವರನ್ನು ಆಯ್ಕೆ ಮಾಡಲಾಗಿದೆ.


ಸುಳ್ಯ ತಾಲೂಕಿನ ದೊಡ್ಡತೋಟದವರಾದ ಮಹೇಶ್ ಮಣಿಯಾಣಿ ಅವರು ಯಕ್ಷಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಹಾಗೂ ಉಬರಡ್ಕ ಉಮೇಶ್ ಶೆಟ್ಟಿ ಅವರ ಬಳಿ ಹೆಜ್ಜೆಗಾರಿಕೆ ಕಲಿತು ಯಕ್ಷಗಾನ ಕ್ಷೇತ್ರಕ್ಕೆ ಪ್ರವೇಶಿಸಿದರು. ಹಿರಿಯ ಯಕ್ಷಗಾನ ಕಲಾವಿದ ರೆಂಜಾಳ ರಾಮಕೃಷ್ಣರಾವ್ ಅವರ ಮಾರ್ಗದರ್ಶನದಲ್ಲಿ ಕಟೀಲು ಮೇಳ ಸೇರಿ, ಆರಂಭದಲ್ಲಿ ಬಪ್ಪನಾಡು ಮೇಳದಲ್ಲಿ, ನಂತರ ಧರ್ಮಸ್ಥಳ ಮೇಳದಲ್ಲಿ ಸೇವೆ ಸಲ್ಲಿಸಿದರು.


ಸ್ತ್ರೀವೇಷ, ಪುಂಡುವೇಷಗಳಲ್ಲಿ ತೊಡಗಿಸಿಕೊಂಡು ಬಳಿಕ ಪೂರ್ಣಪ್ರಮಾಣದ ಹಾಸ್ಯಗಾರರಾಗಿ ರೂಪುಗೊಂಡ ಮಹೇಶ್ ಮಣಿಯಾಣಿ ಅವರು ಒಟ್ಟು 37 ವರ್ಷಗಳ ಯಕ್ಷಗಾನ ಸೇವೆ ಸಲ್ಲಿಸಿದ್ದಾರೆ. ಕಳೆದ ಏಳು ವರ್ಷಗಳಿಂದ ಮಳೆಗಾಲದ ತಿರುಗಾಟದ ಸಂದರ್ಭದಲ್ಲಿ ಮಹಿಳಾ ಕಲಾವಿದೆ ವಿದ್ಯಾ ಕೋಳೂರು ಹಾಗೂ ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರ ತಂಡದೊಂದಿಗೆ ಅಮೇರಿಕಾ ಮತ್ತು ಯುರೋಪ್ ದೇಶಗಳಲ್ಲಿ ನಡೆಯುವ ಯಕ್ಷಗಾನ ಪ್ರವಾಸಗಳ ಖಾಯಂ ಕಲಾವಿದರಾಗಿದ್ದಾರೆ.


ಬಾಹುಕ, ರಕ್ಕಸ ದೂತ, ನಾರದ, ಮಕರಂದ, ವಿಜಯ, ಶ್ರೀನಿವಾಸ ಕಲ್ಯಾಣದ ಸಖ, ಮಹಾಕಾಳಿಯ ಮಗದೇೇಂದ್ರದ ಜಗಜಟ್ಟಿ, ಕೃಷ್ಣ ಲೀಲೆಯ ಮಂತ್ರವಾದಿ, ದಾರುಕ, ಸಮುದ್ರ ಮಥನದ ಮೂಕಾಸುರ ಮೊದಲಾದ ವೇಷಗಳು ಇವರ ಜನಮೆಚ್ಚುಗೆಯ ಪ್ರಮುಖ ಪಾತ್ರಗಳಾಗಿವೆ.


ಸಂಕ್ಷಿಪ್ತ ಸಾರಾಂಶ

37 ವರ್ಷಗಳ ಯಕ್ಷಗಾನ ಸೇವೆ ಸಲ್ಲಿಸಿರುವ ಧರ್ಮಸ್ಥಳ ಮೇಳದ ಖ್ಯಾತ ಹಾಸ್ಯಗಾರ ಮಹೇಶ್ ಮಣಿಯಾಣಿ ಅವರಿಗೆ 2026ನೇ ಸಾಲಿನ ವನಜ–ಸುಜನಾ ರಂಗಮನೆ ಪ್ರಶಸ್ತಿ ಘೋಷಿಸಲಾಗಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top