ಹಸಿರು ನಾಶ ತಡೆ ಬಗ್ಗೆ ಎಚ್ಚೆತ್ತುಕೊಳ್ಳಬೇಕು: ಟಿ.ಎನ್. ಸೀತಾರಾಮ್

Upayuktha
0


ಉಡುಪಿ: ಪ್ರಪಂಚದಾದ್ಯಂತ ಪ್ರತೀ ನಿಮಿಷಕ್ಕೂ ಆಮ್ಲಜನಕ ಕಡಿಮೆಯಾಗುತ್ತಿದೆ. ಹಸಿರು ಸಾಯುವಂತಹ ಪರಿಸ್ಥಿತಿ ಇಂದು ಎದುರಾಗಿದೆ. ಇಂದು ಪಶ್ಚಿಮ ಘಟ್ಟಗಳಿಗೂ ಅಪಾಯ ಎದುರಾಗಿದ್ದು ನಾವು ಎಚ್ಚೆತ್ತುಕೊಳ್ಳಬೇಕಿದೆ ಎಂದು ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಮ್ ಅಭಿಪ್ರಾಯಪಟ್ಟರು.


ಸಂಸ್ಕ್ರತಿ ವಿಶ್ವ ಪ್ರತಿಷ್ಠಾನದ ವತಿಯಿಂದ ಭಾನುವಾರ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆದ ಸಂಸ್ಕೃತಿ ಉತ್ಸವದಲ್ಲಿ, ಪಂಚಮಿ ಟ್ರಸ್ಟ್ ಕೊಡಮಾಡುವ ಪಂಚಮಿ ಪುರಸ್ಕಾರ ಸ್ವೀಕರಿಸಿ ಅವರು ಮಾತನಾಡಿದರು.


ಪ್ರಸ್ತುತ ಎಐ ಹೇಳಿದಂತೆ ಜಗತ್ತು ನಡೆಯುವಂತಾಗಿದ್ದು, ಈಗಾಗಲೇ ಇದರಿಂದಾಗಿ ಹಲವಾರು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಮಕ್ಕಳ ಸೃಷ್ಟಿಶೀಲ ಮನಸ್ಸನ್ನು ಇದು ಭಸ್ಮ ಮಾಡುವ ಕೆಲಸ ಮಾಡುತ್ತಿದೆ. ಸಂಸ್ಕೃತಿ, ಸಂಸ್ಕಾರಕ್ಕೆ ಎಐ ಕಾಲಿಟ್ಟರೆ ಅದರಿಂದ ಬಹುದೊಡ್ಡ ನಷ್ಟ ಉಂಟಾಗಲಿದೆ ಎಂದರು. ಎಐ ಎಂಬುದು  ಹೃದಯದ ಕಣ್ಣೀರು ಅರ್ಥ ಮಾಡುವುದಿಲ್ಲ. ಇದರಿಂದಾಗಿ ಉಂಟಾದ ನಿರುದ್ಯೋಗಿಗಳ ಸಂಖ್ಯೆ ಕೋಟಿ ದಾಟಬಹುದು ಎಂದು ಅವರು ತಿಳಿಸಿದರು. ಉಡುಪಿ ಭಾಗದ ಗೋಪಾಲಕೃಷ್ಣ ಅಡಿಗ, ಬಿ. ಶಿವರಾಮ ಕಾರಂತರು ನನ್ನ ಮೇಲೆ ಪ್ರಭಾವ ಬೀರಿದ್ದಾರೆ ಎಂದರು.


ಈ ವೇಳೆ ಹಿರಿಯ ವಿದ್ವಾಂಸ ನಾಡೋಜ ಪ್ರೊ। ಕೆ.ಪಿ.ರಾವ್, ಕಾರ್ಕಳ ಯಕ್ಷ ರಂಗಾಯಣದ ನಿರ್ದೇಶಕ ಬಿ.ಆರ್. ವೆಂಕಟರಮಣ ಐತಾಳ್, ಪಂಚಮಿ ಟ್ರಸ್ಟ್ ಸಂಸ್ಥಾಪಕ ಡಾ। ಎಂ. ಹರೀಶ್ಚಂದ್ರ, ಸಾಹಿತಿ ಡಾ। ಕಾತ್ಯಾಯಿನಿ ಕುಂಜಿಬೆಟ್ಟು, ಮಣಿಪಾಲದ ಶಂಕರ್ ರೂಫಿಂಗ್ ಸಿಸ್ಟಮ್ ವ್ಯವಸ್ಥಾಪಕಿ ಸುಗುಣಾ ಸುವರ್ಣ, ಕಲಾಪೋಷಕ ಭುವನ ಪ್ರಸಾದ್ ಹೆಗ್ಡೆ, ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ। ಶಂಕರ್ ಉಪಸ್ಥಿತರಿದ್ದರು.


ವಿದ್ಯಾಶ್ಯಾಂ ಸುಂದರ್ ಸಮ್ಮಾನ ಪತ್ರ ವಾಚಿಸಿದರು. ರವಿರಾಜ್ ಎಚ್.ಪಿ.ಪ್ರಸ್ತಾವನೆಗೈದರು. ಆಸ್ಟ್ರೋ ಮೋಹನ್ ಸ್ವಾಗತಿಸಿದರು. ಜನಾರ್ದನ ಕೊಡವೂರು ವಂದಿಸಿದರು. ಪೂರ್ಣಿಮಾ ಜನಾರ್ದನ ಕೊಡವೂರು ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top