ಮಹಿಳಾ ಕ್ರಿಕೆಟ್ ಗೆ ಹೊಸ ಭಾಷ್ಯ ಬರೆದ ಡಬ್ಲ್ಯುಪಿಎಲ್

Upayuktha
0


"ಕ್ರಿಕೆಟ್ ಎಂದರೆ ಅದು ಹುಡುಗರ ಆಟ. ಹುಡುಗಿಯರಿಗಲ್ಲ. ಈ ಆಟದಲ್ಲಿ ಸೂಕ್ತ ಭವಿಷ್ಯವಿಲ್ಲ"

ಎಂಬ ಮಾತು ಹಿಂದೆ ಇತ್ತು. ಆದರೆ ಇತ್ತೀಚೆಗೆ ಈ ಮಾತು  ಹಾಗೂ ಮಹಿಳಾ ಕ್ರಿಕೆಟ್ ಬಗ್ಗೆ ಇದ್ದ ಅಭಿಪ್ರಾಯ  ಬದಲಾಗಲು ಮುಖ್ಯ ಕಾರಣ  ಡಬ್ಲ್ಯುಪಿಎಲ್  ಹಾಗೂ ಕಳೆದ  ವರ್ಷ ಭಾರತದ ವೀರ ಮಹಿಳೆಯರು ವಿಶ್ವಕಪ್ ಗೆದ್ದು ಇತಿಹಾಸ ಬರೆದ ಕ್ಷಣ.


ಭಾರತದಲ್ಲಿ ಪುರುಷರ ಕ್ರಿಕೆಟ್ ಗೆ ಇರುವಷ್ಟು ಪ್ರೋತ್ಸಾಹ, ಸೌಲಭ್ಯ, ಕ್ರೇಜ್ , ಅಭಿಮಾನಿ ಬಳಗ ಮಹಿಳಾ ಕ್ರಿಕೆಟ್ ಗೆ ಇಲ್ಲ ಎಂಬ ಕೂಗು ಅನೇಕ ದಶಕಗಳಿಂದ ಇತ್ತು. ಆದರೆ ಇದಕ್ಕೆ ಉತ್ತರವಾಗಿ 2023 ರಲ್ಲಿ  ಆರಂಭವಾದ ಡಬ್ಲ್ಯುಪಿಎಲ್ ನಿರೀಕ್ಷೆಗಳನ್ನೂ ಮೀರಿ ಅಮೋಘವಾದ ಯಶಸ್ಸನ್ನು ಕಂಡು ಮುನ್ನಡೆಯುತ್ತಿದೆ. ಇದೀಗ ನಾಲ್ಕನೇ ಆವೃತ್ತಿಯು ಭರ್ಜರಿಯಾಗಿ ಆರಂಭವಾಗಲಿರುವುದು ಬಹು  ಸಂತಸದ ಸುದ್ದಿ. 


ಡಬ್ಲ್ಯುಪಿಎಲ್ ಕೂಡ ಐಪಿಎಲ್ ನಂತೆ ಜನರ ಮನವನ್ನು ಗೆದ್ದಿದೆ. ಮನರಂಜನೆಯ ರಸದೌತಣವನ್ನು ನೀಡುತ್ತಿದೆ. ಇಲ್ಲಿಯೂ ಪ್ರತಿ ಆವೃತ್ತಿಯಲ್ಲಿ ಹೊಸ ಹೊಸ  ದಾಖಲೆಗಳು ನಿರ್ಮಾಣವಾಗುತ್ತಿದೆ, ರೋಚಕ ಪಂದ್ಯಗಳಿಗೆ ಸಾಕ್ಷಿಯಾಗುತ್ತಿದೆ. 

"ಹಳೆ ಬೇರು ಹೊಸ ಚಿಗುರು ಕೂಡಿರಲು ಮರಸೊಬಗು" ಎಂಬ ಮಾತಿನಂತೆ ಹಿರಿಯ ಅನುಭವಿ ಆಟಗಾರ್ತಿಯರೊಂದಿಗೆ ಹೊಸ ಆಟಗಾರ್ತಿಯರು ಮಿಂಚಿ ಭರವಸೆ ಸೃಷ್ಟಿಸುತ್ತಿರುವುದು ಈ ಲೀಗ್ ನ ವಿಶೇಷತೆ.


ಇನ್ನು ದಾಖಲೆಗಳ ಕಡೆ ಗಮನ ಹರಿಸುವುದಾದರೆ ಲೀಗ್ ನಲ್ಲಿ ಅತಿ ಹೆಚ್ಚು ರನ್ ಗಳನ್ನು ಸಿಡಿಸಿದ ಕೀರ್ತಿ ವೆಸ್ಟ್ ಇಂಡೀಸ್ ನ ಹೇಲಿ ಮ್ಯಾಥ್ಯೂಸ್ ( 41) ಅವರದಾದರೆ , ಹೆಚ್ಚು ವಿಕೆಟ್ ಗಳನ್ನು ಉರುಳಿಸಿದ ದಾಖಲೆ ಇಂಗ್ಲೆಂಡ್ ನ್ಯಾಟ್ ಸ್ಕೀವರ್ ಬ್ರಂಟ್ ( 1027 ) ಅವರಿಗೆ ಸೇರುತ್ತದೆ. ಇನ್ನು ಕಪ್ ವಿಚಾರದಲ್ಲಿ ಮುಂಬೈ ಇಂಡಿಯನ್ಸ್ ತಂಡ ಎರಡು ಬಾರಿ ಹಾಗೂ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಂದು ಬಾರಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.


ಈ ಬಾರಿಯ ಮೆಗಾ ಹರಾಜಿನ ಬಳಿಕ ಹೆಚ್ಚಿನ ಎಲ್ಲಾ ಆಟಗಾರ್ತಿಯರು ಆಡುವ ತಂಡಗಳು ಬದಲಾಗಿವೆ. ಹಾಗೂ ಕೆಲವು ತಂಡಗಳ ತರಬೇತಿ ಬಳಗ, ನಾಯಕಿಯರ ಪಟ್ಟವೂ ಬದಲಾಗಿದೆ. ಆದ್ದರಿಂದ  ಎಲ್ಲಾ 5 ತಂಡಗಳು ಹೊಸ ಹುರುಪಿನೊಂದಿಗೆ ಟ್ರೋಫಿಯನ್ನು ಎತ್ತಿ ಹಿಡಿಯಲು  ಬರುತ್ತಿದೆ.


ನಮ್ಮ ಆರ್ ಸಿಬಿ ತಂಡ  ಹಿಂದಿನ ಆವೃತ್ತಿಗಿಂತ ಈ ಬಾರಿ ಹೆಚ್ಚು ಸಮತೋಲಿತವಾಗಿ ಕಾಣುತ್ತಿದೆ. ಗ್ರೇಸ್ ಹ್ಯಾರೀಸ್, ಜಾರ್ಜಿಯ ವಾಲ್, ಲಾರೆನ್ ಬೆಲ್ , ನಡೀನ್ ಡಿ ಕ್ಲರ್ಕ್ ಅವರಂತಹ ವಿದೇಶಿ ಬಲಿಷ್ಠ ಸ್ಟಾರ್ ಆಟಗಾರ್ತಿಯರ ಬಲ ಹಾಗೂ ಅರುಂಧತಿ ರೆಡ್ಡಿ, ರಾಧಾ ಯಾದವ್, ಸ್ಮೃತಿ ಮಂದನಾ, ರಿಚಾ ಘೋಷ್ ಅವರಂತಹ ಭರವಸೆಯ ಭಾರತೀಯ ಆಟಗಾರ್ತಿಯರು ಹಾಗೂ ಕೆಲವು ಹೊಸ ಯುವ ಆಟಗಾರ್ತಿಯರು ತಂಡದಲ್ಲಿರುವುದು  ಪ್ಲಸ್ ಪಾಯಿಂಟ್. 


ಈ ಬಾರಿಯಲ್ಲಿ ಲೀಗ್ ಟಿ 20 ವಿಶ್ವಕಪ್ ಗೆ ಉತ್ತಮ ತಯಾರಿ ಎಂದರೂ ತಪ್ಪಲ್ಲ. ಹೊಸ ಆಟಗಾರ್ತಿಯರು ಮಿಂಚಲಿ, ಪ್ರೇಕ್ಷಕರ ಬೆಂಬಲ ಹೀಗೆ ಮುಂದುವರೆಯಲಿ , ಲೀಗ್ ಯಶಸ್ವಿಯಾಗಿ ಸಾಗಲಿ.


- ವರುಣ ಕೃಷ್ಣ. ಬಿ.

ಪತ್ರಿಕೋದ್ಯಮ ವಿದ್ಯಾರ್ಥಿ 

ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top