ನಮ್ಮ ದೇಶ, ಭಾಷೆ, ಸಂಸ್ಕೃತಿಗಳ ಮೇಲೆ ಗೌರವವಿರಲಿ: ಡಾ. ಮಹೇಶ್ ಪ್ರಸನ್ನ ಕೆ.

Upayuktha
0


ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ದೀಪ ಪ್ರದಾನ ಕಾರ್ಯಕ್ರಮ

ಜಿಲ್ಲಾ, ರಾಜ್ಯಹಾಗೂ ರಾಷ್ಟ್ರಮಟ್ಟದ ಕ್ರೀಡಾಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಕಾಲೇಜಿನ ವಾರ್ಷಿಕ ಸಂಚಿಕೆ ʻಚಿಗುರುʼ ಮುಖಪುಟದ ಅನಾವರಣ


ಪುತ್ತೂರು: ಗುರು ಶಿಷ್ಯರ ಸಂಬಂಧವು ಹಳೆ ಬೇರು ಹೊಸ ಚಿಗುರು ಇದ್ದಂತೆ. ಗುರುಗಳು ನೀಡುವ ಜ್ಞಾನ ಹಾಗೂ ಮೌಲ್ಯ ವಿದ್ಯಾರ್ಥಿಗಳ ಭವಿಷ್ಯದ ಅಡಿಪಾಯವಾಗುತ್ತವೆ. ನಮ್ಮನ್ನು ಹೊತ್ತು-ಹೆತ್ತು, ಸಲಹುವ ತಂದೆ - ತಾಯಿ ಹಾಗೂ ಹಿರಿಯರು, ವಿದ್ಯೆ ಕಲಿಸುವ ಗುರುಗಳು, ನಮ್ಮದೇಶ, ಭಾಷೆ-ಸಂಸ್ಕೃತಿ ಇವುಗಳನ್ನು ಜೀವನದಲ್ಲಿ ನಾವು ಅತ್ಯಂತಗೌರವದಿಂದಕಾಣಬೇಕು. ನಂಬಿಕೆ, ವಿಧೇಯತೆ ಹಾಗೂ ಏಕಾಗ್ರತೆಯಂತಹ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಯಶಸ್ಸು ಗಳಿಸಲು ಸಾಧ್ಯ ಎಂದು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯ, ಪುತ್ತೂರು ಇಲ್ಲಿನ ಪ್ರಾಂಶುಪಾಲರಾದ ಡಾ. ಮಹೇಶ್ ಪ್ರಸನ್ನ ಕೆ. ಹೇಳಿದರು. 


ಅವರು ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ನಡೆಸಲಾದ ದೀಪ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಅಪಾರ ಜ್ಞಾನ ಪರಂಪರೆಯುಳ್ಳ ಅತ್ಯಂತ ಪ್ರಬುದ್ಧ ದೇಶ ನಮ್ಮ ಭಾರತ. ಇಂತಹ ಪುಣ್ಯ ನೆಲದಲ್ಲಿ ಹುಟ್ಟಿದ ನಾವು ಎಂದಿಗೂ ದೇಶದ ಗೌರವಕ್ಕೆ ಚ್ಯುತಿ ಬರುವಂತಹ ಕೆಲಸಗಳನ್ನು ಮಾಡಬಾರದು.  ಸುಮಾರು 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿ ಸಮಾಜದಲ್ಲಿ ಸತ್ಪ್ರಜೆಗಳಾಗಿ ಬದುಕಲು ಪ್ರೇರಣೆ ನೀಡುತ್ತಿರುವ ಈ ವಿದ್ಯಾಸಂಸ್ಥೆಗಳ ಮೇಲೆ ಗೌರವವಿರಲಿ. ಸತತ ಪ್ರಾಮಾಣಿಕ ಪ್ರಯತ್ನದಿಂದ ಜೀವನದಲ್ಲಿ ಯಶಸ್ಸು ಲಭಿಸಲಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.  


ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಭಾಗವಹಿಸಿದ ಹರಿಣಾಕ್ಷಿ ಜೆ. ಶೆಟ್ಟಿ, ಅಧ್ಯಕ್ಷರು, ಶಿಕ್ಷಕ-ರಕ್ಷಕ ಸಂಘ, ವಿವೇಕಾನಂದ ಪದವಿಪೂರ್ವ ವಿದ್ಯಾಲಯ, ಇವರು ಮಾತನಾಡುತ್ತಾ, ನಾವು ಎಷ್ಟು ಕಾಲ ಜೀವಿಸಿರುತ್ತೇವೆ ಎನ್ನುವುದು ಮುಖ್ಯವಲ್ಲ, ಇದ್ದಷ್ಟು ಸಮಯದಲ್ಲಿ ನಾವು ಏನನ್ನು ಸಾಧಿಸಿದ್ದೇವೆ ಎನ್ನುವುದು ಮುಖ್ಯ. ನಮ್ಮ ಇಂದಿನ ಪ್ರಯತ್ನಗಳೇ ಮುಂದೊಂದು ದಿನ ಭವಿಷ್ಯದಲ್ಲಿ ಉತ್ತುಂಗಕ್ಕೇರಲು ಪೂರಕವಾಗಬಲ್ಲದು ಎಂದು ಹಿತ ನುಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿ ಅಧ್ಯಕ್ಷರಾದ ರವೀಂದ್ರ ಪಿ. ವಹಿಸಿಕೊಂಡು, ನಮ್ಮನ್ನು ಜೀವನದಲ್ಲಿ ರಕ್ಷಣೆ ಮಾಡುವ ಎರಡು ಸಂಗತಿಗಳೆಂದರೆ ಆತ್ಮವಿಶ್ವಾಸ ಹಾಗೂ ಗುಣ. ಗುಣ ನಿರ್ಮಾಣವೇ ಶಿಕ್ಷಣದ ಉದ್ದೇಶ. ಎಷ್ಟೇ ಜ್ಞಾನವಿದ್ದರೂ ಆಚರಣೆಯಲ್ಲಿ ಇಲ್ಲದಿದ್ದರೆ ಅದು ವ್ಯರ್ಥ. ನಮ್ಮ ಶಕ್ತಿಯ ಮೇಲೆ ನಮಗೆ ನಂಬಿಕೆ ಇರಲಿ; ಗುಣದ ಮೇಲೆ ಶ್ರದ್ಧೆ ಇರಲಿ. ಈ ಎರಡು ವಿಷಯಗಳ ಮೇಲೆ ನಮಗೆ ಯಾವಾಗ ನಂಬಿಕೆ ಇರುತ್ತದೆಯೋ ಅಲ್ಲಿಯವರೆಗೆ ಜೀವನದಲ್ಲಿ ಸೋಲುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.  


ಕಾರ್ಯಕ್ರಮದಲ್ಲಿ 2025-26ನೇ ಸಾಲಿನ ಕಾಲೇಜಿನ ವಾರ್ಷಿಕ ಸಂಚಿಕೆ ʻಚಿಗುರುʼ ಇದರ ಮುಖಪುಟ ಅನಾವರಣ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಅಭಿನಂದಿಸಲಾಯಿತು. ಬಳಿಕ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಜ್ಞಾನದ ಸಂಕೇತವಾದ ದೀಪವನ್ನು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕರಾದ ಡಾ. ಕೆ.ಎನ್.ಸುಬ್ರಹ್ಮಣ್ಯ ಹಾಗೂ ವತ್ಸಲಾ ರಾಜ್ಞಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಭಾಗವಹಿಸಿದರು. ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ರೈ ಎಂ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಪ್ರಥಮ ಪಿಯುಸಿ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಆಂಗ್ಲ ಭಾಷೆ ವಿಭಾಗದ ಉಪನ್ಯಾಸಕಿ ಸವಿತಾ ಎಸ್. ವಂದಿಸಿದರು. ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ಅನ್ನಪೂರ್ಣಿಕ ಪ್ರಭು ಹೆಚ್. ಕಾರ್ಯಕ್ರಮವನ್ನು ನಿರೂಪಿಸಿದರು.


ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯ ಇವರು ಮಹಾರಾಷ್ಟ್ರದ ಸಂಭಾಜೀ ನಗರದಲ್ಲಿ ನಡೆಸಿದ ಪದವಿಪೂರ್ವ ವಿಭಾಗದರಾಷ್ಟ್ರಮಟ್ಟದ ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ಮಿಲನ್ ಎನ್. ಬಿ. ಭಾಗವಹಿಸಿ 8ನೇ ಸ್ಥಾನ ಪಡೆಯುವುದರ ಮೂಲಕ ಖೇಲೋ ಇಂಡಿಯ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ, ಅಭಿನಂದಿಸಲಾಯಿತು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top