ಹಲೋ ಹೇಗಿದ್ದೀರಾ
ಚಾಲುಕ್ಯರ ರಾಜಧಾನಿಯಾಗಿ ವಾಸ್ತು ಶಿಲ್ಪದ ತವರೂರಾದ ಬಾದಾಮಿಯಲ್ಲಿ ಈಗ ಬನಶಂಕರಿ ಜಾತ್ರೆಯ ಸಂಭ್ರಮ. ಸುಮಾರು ಒಂದು ತಿಂಗಳು ನಡೆಯುವ ಜಾತ್ರೆ ಬನಶಂಕರಿ ಶಕ್ತಿಪೀಠದ ಒಂದು ದೊಡ್ಡ ಮಹೋತ್ಸವ ಕೂಡ ಹೌದು. ಬನಶಂಕರಿ ದೇವಸ್ಥಾನ ಬಾದಾಮಿಯ ಚಾಲುಕ್ಯರ ಅಧಿದೇವತೆ ಯ ನೆನಪು ಮಾಡುವ ಒಂದು ಅದ್ಬುತ ರಚನೆ.
ನಾಡಿನಲ್ಲಿ ಬರಗಾಲ ಬಂದಾಗ ಹಣ್ಣು, ಕಾಯಿಪಲ್ಲೆ ಸೃಷ್ಟಿಸಿ,ಜನರನ್ನು ಪೊರೆದ ಬನಶಂಕರಿ ಇನ್ನೊಂದು ಹೆಸರು ಶಾಖಂಭರಿ ಕೂಡ ಹೌದು. ವನಶ್ರೀ, ಬನಶ್ರೀ, ಪ್ರತಿಮಾ, ವೈಷ್ಣವಿ, ಮತ್ತು ಜನರ ಬಾಯಲ್ಲಿ ಆತ್ಮೀಯವಾಗಿ ಶಂಕ್ರಮ್ಮ ಎಂದು ಕರೆಯಿಸಿಕೊಳ್ಳುವ ಬನಶಂಕರಿ ಉತ್ತರ ಕರ್ನಾಟಕದ ಹೆಮ್ಮೆ ಎಂದೇ ಪ್ರಸಿದ್ಧ.
ಬನದ ಹುಣ್ಣಿಮೆ ಯಿಂದ ಶುರುವಾಗಿ ಭಾರತ ಹುಣ್ಣಿಮೇತನಕ ನಡೆಯುವ ಬನಶಂಕರಿ ಜಾತ್ರೆ ನಾಡಿನ ಜೀವನಾಡಿ ಕೂಡ ಹೌದು. ಕೇವಲ 30 ರೂಪಾಯಿಗೆ ಉತ್ತರ ಕರ್ನಾಟಕದ ಊಟ ಒದಗಿಸಿ ಕೊಡುವ ಇಲ್ಲಿನ ಅನ್ನಪೂರ್ಣೇಶ್ವರಿ ಹೆಣ್ಣು ಮಕ್ಕಳ ಬಗ್ಗೆ ಡೆಕ್ಕನ್ ಹೆರಾಲ್ಡ್ ನಲ್ಲಿ ಲೇಖನ ಕೂಡ ಪ್ರಕಟವಾಗಿತ್ತು.
ಸಣ್ಣ ಸೂಜಿಯಿಂದ ಹಿಡಿದು ಟ್ರ್ಯಾಕ್ಟರ್, ಹೀರೋ ಹೊಂಡಾ ತನಕ ಎಲ್ಲ ಸಿಗುವ ಈ ಜಾತ್ರೆಯ ಬಗ್ಗೆ ದಿವಂಗತ ನಟ ರಾಜು ತಾಳಿಕೋಟೆ ಇಲ್ಲಿ ಅವ್ವ ಅಪ್ಪ ಬಿಟ್ಟು ಎಲ್ಲ ಸಿಗ್ತದ ಎನ್ನುತ್ತಿದ್ದರು. ಡಾಕ್ಟರ್ ರಾಜ್ ಕುಮಾರ್ ಯಿಂದ ಹಿಡಿದು ಈಗಿನ ಪ್ರಸಿದ್ಧ ನಿರ್ದೇಶಕ ತರುಣ್ ಸುಧೀರ್ ಎಲ್ಲರೂ ಜಾತ್ರೆಗೆ ಹಾಜರಿ ಹಾಕಿದವರೇ.
ಬನಶಂಕರಿ ಜಾತ್ರೆ ವೃತ್ತಿ ರಂಗ ಭೂಮಿಗೆ. ತನ್ನದೇ ಆದ ಕೂಡುಗೆ ನೀಡುತ್ತಿದೆ. ಒಂದು ತಿಂಗಳ ಕಾಲ ಟೆಂಟ್ ಹಾಕುವ ನಾಟಕ ಕಂಪನಿಗಳಿಗೆ ಇಲ್ಲಿ ಪ್ರಾಯೋಜಕರು ಇಲ್ಲಿ ಸಿಗುತ್ತಾರೆ. ನಾಟಕ ಕಂಪೆನಿಯವರಿಗೆ ಎಲ್ಲ ಖರ್ಚು ಕಳೆದು ಗ್ಯಾರಂಟಿ ಲಾಭ ಸಿಗುವುದರಿಂದ ಇದು ಅವರ ಪಾಲಿಗೆ ಸೇಫರ್ ಜೋನ್. ಇದ್ದ ಹಾಗೆ.
ಇಲ್ಲಿನ ಎಷ್ಟೋ ಜನ ಚಿಕ್ಕ ಚಿಕ್ಕ ವ್ಯಾಪಾರಸ್ಥರು, ಕಾರ್ಮಿಕರಿಗೆ ಮಿನಿಮಮ್ ಆರು ತಿಂಗಳ ಜೀವನ ಖುಷಿ ಮತ್ತು ಭದ್ರತೆಯ ಭಾವ ಒದಗಿಸುತ್ತದೆ.
ಬನಶಂಕರಿ ಜಾತ್ರೆ ಕೇವಲ ಭಕ್ತಿಗಷ್ಟೇ ಸೀಮಿತ ಆಗಿರದೇ ಕೋಟ್ಯಂತರ ವಹಿವಾಟು ನಡೆಸಿ, ಕೆಎಸ್ಆರ್ಟಿಸಿ ಬಸ್, ರಿಕ್ಷಾ, ಪ್ರವಾಸೋದ್ಯಮ, ಕಂದಾಯ ಇಲಾಖೆ, ಗೈಡೆಗಳಿಗೆ, ಗ್ರಾಮ ಪಂಚಾಯತಿ, ಎಲ್ಲರ ಪಾಲಿನ ಸಂಜೀವಿನಿ ಕೂಡ ಹೌದು, ಸಾವಿರಾರು ಕುಟುಂಬಗಳಿಗೆ ಬದುಕು ಕಟ್ಟಿ ಕೊಡುವ ಬನಶಂಕರಿ ಜಾತ್ರೆಗೆ ಬಂದು ಆನಂದಿಸಿ. ಏನಂತೀರಾ
- ಗಾಯತ್ರಿ ಸುಂಕದ, ಬದಾಮಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


