ಮಣಿಪಾಲ: ಇತ್ತೀಚೆಗೆ ಸರಿಗಮ ಭಾರತಿ, ಪರ್ಕಳ ಸಂಗೀತ ವಿದ್ಯಾಲಯದ ಆಶ್ರಯದಲ್ಲಿ ಬೆಂಗಳೂರಿನ ವಿದುಷಿ ತೇಜಸ್ವಿನಿ ಎಂ.ಕೆ. ಇವರು ನಡೆಸಿಕೊಟ್ಟ ಸಂಗೀತ ಕಾರ್ಯಾಗಾರದಲ್ಲಿ ಅಪರೂಪದ ಕೃತಿಗಳು ಮನೋಧರ್ಮ ಸಂಗೀತ ಕಲಿಸಿಕೊಟ್ಟು ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನು ಸರಿಗಮ ಭಾರತಿಯ ಸಂಗೀತ ವಿದ್ಯಾಲಯದ ನಿರ್ದೇಶಕ ಡಾ. ಉದಯಶಂಕರ್ ಇವರು ನಡೆಸಿಕೊಟ್ಟರೆ, ಸುಮಂತ ಹಾಗೂ ಹರ್ಷಿತ ಶಿಬಿರದಲ್ಲಿ ತಮಗಾದ ಪ್ರಯೋಜನವನ್ನು ಹಂಚಿಕೊಂಡರು. ಆರಂಭದಲ್ಲಿ ಕಲಿಸಿಕೊಟ್ಟ ಗುರುವನ್ನು ಯಾವತ್ತೂ ಮರೆಯಬಾರದು, ನಿರಂತರ ಸಾಧನೆ, ಸತತ ಅಭ್ಯಾಸ ಬಹಳ ಮುಖ್ಯ ಎಂದು ಸಂಪನ್ಮೂಲ ವ್ಯಕ್ತಿಗಳಾಗಿ ಬಂದಂತಹ ತೇಜಸ್ವಿನಿ ಎಂ.ಕೆ. ನುಡಿದರು.
ದೂರದ ಬೆಂಗಳೂರಿನಿಂದ ಸರಿಗಮ ಭಾರತಿಗೆ ಬಂದು ಗುರು ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಮತ್ತು ಮನೋಧರ್ಮ ಸಂಗೀತ, ಅಪರೂಪದ ಕೃತಿಗಳನ್ನು ತುಂಬಾ ಅಚ್ಚುಕಟ್ಟಾಗಿ ಹೇಳಿಕೊಟ್ಟವರು ತೇಜಸ್ವಿನಿ ಎಂ.ಕೆ ಎಂದು ರಾಗ ಧನ ಸಂಸ್ಥೆಯ ಅಧ್ಯಕ್ಷ ಡಾ. ಕಿರಣ್ ಹೆಬ್ಬಾರ್ ಇವರು ನುಡಿದರು. ಶಿಬಿರಾರ್ಥಿಯಾಗಿ ಸುರೇಖ ತಮ್ಮ ಅನಿಸಿಕೆಯನ್ನು ತಿಳಿಸಿದರು. ಡಾ ಗಣಪತಿ ಜೋಯಿಸರು ಪ್ರತಿದಿನ ಅಭ್ಯಾಸ ಮುಖ್ಯ ಎಂದರು. ಡಾ. ಸುದರ್ಶನ ಪರ್ಲತ್ತಾಯ ಭಾರತೀಯ ಉಪಸ್ಥಿತರಿದ್ದರು. ಷಣ್ಮುಖ ರಾಜ ಇವರು ಧನ್ಯವಾದ ಸಮರ್ಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


