ಕೆ.ಆರ್.ಪೇಟೆ, ಜ.18: ಆರೋಗ್ಯಕರವಾದ ದೇಹ ಮತ್ತು ಆರೋಗ್ಯಕರ ಮನಸ್ಸಿಗೆ ಕ್ರೀಡೆಗಳು ಅತಿ ಮುಖ್ಯ. ಕ್ರೀಡೆಗಳನ್ನು ಆಡುವುದರಿಂದ ಉತ್ತಮ ಮನಸ್ಸನ್ನು ಹೊಂದಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಸಮಾಜ ಸೇವಕರು ಹಾಗೂ ತಮಿಳು ಚಿತ್ರನಟ, ಬೆಂಗಳೂರು ನಿತ್ಯಾ ಆಟೋ ಮ್ಯಾಟ್ಸ್ ಕಂಪನಿಯ ಮಾಲೀಕರಾದ ಹೊಸಹೊಳಲು ನಂಜುಂಡಸ್ವಾಮಿ ಹೇಳಿದರು.
ಅವರು ತಾಲ್ಲೂಕಿನ ಕಸಬಾ ಹೋಬಳಿಯ ನಾರ್ಗೋನಹಳ್ಳಿ ಗ್ರಾಮದಲ್ಲಿ ಕನ್ನಂಬಾಡಮ್ಮ, ಶ್ರೀ ಹನುಮ ಕ್ರಿಕೆಟರ್ಸ್ ವತಿಯಿಂದ ನಾರ್ಗೋನಹಳ್ಳಿ ಪ್ರೀಮಿಯರ್ ಲೀಗ್-01 ತಾಲ್ಲೂಕು ಮಟ್ಟದ ಕ್ರಿಕೆಟ್ ಪಂದ್ಯಾವಳಿಗಳನ್ನು ಬ್ಯಾಟ್ ಹಿಡಿದು ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟನೆ ಮಾಡಿದರು.
ಕ್ರೀಡೆಗಳು ಯುವಕರನ್ನು ದುಶ್ಚಟಗಳಿಂದ ಪಾರು ಮಾಡಲು ಕ್ರೀಡೆಗಳು ಸಹಕಾರಿಯಾಗುತ್ತವೆ. ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಯುವಕರು ವೃದ್ದಿಸಿಕೊಂಡು ದೇಶದ ಉತ್ತಮ ಸತ್ಪ್ರಜೆಗಳಾಗಿ ಅಭಿವೃದ್ದಿ ಸಾಧಿಸಲು ಸಾಧ್ಯವಾಗುತ್ತದೆ. ಹಾಗಾಗಿ ಯುವಕರು ಒಂದಲ್ಲ ಒಂದು ಕ್ರೀಡೆಯನ್ನು ಆಸಕ್ತಿ ಬೆಳೆಸಿಕೊಂಡು ತಮ್ಮ ಆರೋಗ್ಯವನ್ನು ವೃದ್ದಿಸಿಕೊಳ್ಳುವ ಜೊತೆಗೆ ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಕ್ರೀಡೆಗಳು ಸಹಕಾರಿ ಯಾಗುತ್ತದೆ ಎಂದು ಸಮಾಜ ಸೇವಕರಾದ ಉದ್ಯಮಿ ಹೊಸಹೊಳಲು ನಂಜುಂಡಸ್ವಾಮಿ ಹೇಳಿದರು.
ನಮ್ಮ ನಾರ್ಗೋನಹಳ್ಳಿ ಗ್ರಾಮದ ಯುವಕರ ಬಳಗವು 3 ದಿನಗಳ ಕಾಲ ತಾಲ್ಲೂಕು ಮಟ್ಟದ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಿರುವುದು ಶ್ಲಾಘನೀಯವಾದುದು. ಅದೂ ಅಲ್ಲದೆ ಪ್ರಥಮ ಬಹುಮಾನವಾಗಿ 1 ಲಕ್ಷ ರೂ, ಎರಡನೇ ಬಹುಮಾನ 50 ಸಾವಿರ, ಮೂರನೇ ಬಹುಮಾನ 10 ಸಾವಿರ, ನಾಲ್ಕನೇ ಬಹುಮಾನ 10 ಸಾವಿರ ರೂ ನೀಡುತ್ತಿರುವುದು ಮತ್ತಷ್ಟು ಸಂತೋಷದ ವಿಚಾರವಾಗಿದೆ. ಇದೇ ರೀತಿ ತಾಲ್ಲೂಕಿನ ಯುವಕರು ಎಲ್ಲಿಯೇ ಕ್ರೀಡೆಯನ್ನು ಆಯೋಜಿಸಿದಲ್ಲಿ ನನ್ನ ಕೈಲಾದ ನೆರವು ನೀಡುವ ಮೂಲಕ ಕ್ರೀಡೆಯನ್ನು ಉಳಿಸಿ ಬೆಳೆಸಲು ಕೈಜೋಡಿಸುತ್ತೇನೆ ಎಂದು ಉದ್ಯಮಿ ನಂಜಂಡಸ್ವಾಮಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಾರ್ಗೋನಹಳ್ಳಿ ಪ್ರೀಮಿಯರ್ ಲೀಗ್-01 ಆಯೋಜಕರು, ಶ್ರೀ ಕನ್ನಂಬಾಡಮ್ಮ ಹಾಗೂ ಶ್ರೀ ಹನುಮ ಕ್ರಿಕೆಟರ‍್ಸ್ ಯುವಕರ ಸಂಘದ ಸದಸ್ಯರು ಭಾಗವಹಿಸಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


