ವಡಗೆರೆಹಳ್ಳಿ ನಿವಾಸಿಗಳ ಒಕ್ಕೂಟದ ವಾರ್ಷಿಕೋತ್ಸವ: ಶ್ರೀ ಹೃದ್ಯಾ ಅಕಾಡೆಮಿ ತಂಡದಿಂದ ವಿಶೇಷ ನೃತ್ಯ ಪ್ರದರ್ಶನ

Upayuktha
0



ಬೆಂಗಳೂರು: ಕೆಂಗೇರಿ ಉಪನಗರದ ವಡಗೆರೆಹಳ್ಳಿ ನಿವಾಸಿಗಳ ಒಕ್ಕೂಟ (VRF) ವತಿಯಿಂದ ಆಯೋಜಿಸಲಾದ ವಾರ್ಷಿಕೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ದಿನಾಂಕ 17.01.2026ರಂದು ಸಂಜೆ 5.30ರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಹೃದ್ಯಾ ಅಕಾಡೆಮಿ (ರಿ.) ತಂಡದ ವಿದ್ಯಾರ್ಥಿನಿಯರು ವಿಶೇಷ ನೃತ್ಯ ಪ್ರದರ್ಶನ ನೀಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.


ವಿದುಷಿ ಶ್ರೀಮತಿ ರೂಪಶ್ರೀ ಕೆ. ಎಸ್. ಅವರ ನಿರ್ದೇಶನದಲ್ಲಿ ಕುಮಾರಿ ಹೃದ್ಯಾ ಭಟ್ ಕೆ., ಪ್ರಣವಿ ಭಟ್, ತಾನ್ಯಾ ಎ. ಕುಮಾರ್, ಅಶ್ವತೀ ಎಸ್. ಮಹೇಶ್, ಶ್ರದ್ಧಾ ಹೆಚ್. ಎಸ್., ಜಿನೋವಿಯಾ ಪಿ., ನಮಿತಾ ಎಂ., ಅವನಿ ಹೆಗಡೆ, ಪ್ರಣಮ್ಯ ಹೆಗಡೆ, ಪ್ರಣಮ್ಯ ಎಸ್., ಅಭಿಶೃತ ಗಣೇಶ್, ಎ. ಕೆ. ವಿಶೃತಿ, ತನ್ವಿಕಾ ಸಿ., ಸಾಯಿ ಹಾರಿಕ ಎಸ್., ಕಲಾಮತಿ ನಾಗಾಂಜನ ತನ್ವಿ, ಅಹನ ಎಸ್. ಪಂಡಿತ್, ಯುಕ್ತಶ್ರೀ ಕೊಗರ, ಹಂಸ ಗೌಡ, ಇಶಿತ ಗೌಡ, ಕೇಸರ್ ಸಿಂಗ್, ಇಶಾನ ಶಿವಪ್ರಸಾದ್, ಪ್ರಾಚಿ ಆರ್. ಕುಲಕರ್ಣಿ, ನಿವಿಶ ವಿನೋದ್, ಪ್ರಣತಿ ಜಿ. ಎಸ್., ಹಾಗೂ ವೃಶಾಲಿ ಶ್ರೀನಿವಾಸ್ ಅವರು ತಮ್ಮ ಗುರುಗಳೊಂದಿಗೆ ವಿವಿಧ ಕನ್ನಡ ನೃತ್ಯ ರೂಪಗಳನ್ನು ಮನಮುಟ್ಟುವಂತೆ ಪ್ರದರ್ಶಿಸಿದರು.


ಕನ್ನಡದ ಕಂಪು ಹರಡುವ ವಿಶಿಷ್ಟ ನೃತ್ಯ ಸಂಯೋಜನೆಗಳು ನೆರೆದಿದ್ದ ಪ್ರೇಕ್ಷಕರಿಂದ ಭಾರೀ ಪ್ರಶಂಸೆ ಪಡೆದವು. ಈ ವೈಶಿಷ್ಟ್ಯಪೂರ್ಣ ನೃತ್ಯ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದ ಶ್ರೀ ಹೃದ್ಯಾ ಅಕಾಡೆಮಿ (ರಿ.) ತಂಡದ ನಿರ್ದೇಶಕಿ ವಿದುಷಿ ಶ್ರೀಮತಿ ರೂಪಶ್ರೀ ಕೆ. ಎಸ್. ಅವರನ್ನು ವಡಗೆರೆಹಳ್ಳಿ ನಿವಾಸಿಗಳ ಒಕ್ಕೂಟದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.


ಒಕ್ಕೂಟದ ಅಧ್ಯಕ್ಷರಾದ ಎಂ. ಕರದಪ್ಪ ಅವರು ಎಲ್ಲಾ ವಿದ್ಯಾರ್ಥಿನಿಯರಿಗೆ ಪ್ರಮಾಣಪತ್ರಗಳನ್ನು ವಿತರಿಸಿ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಒಕ್ಕೂಟದ ಸದಸ್ಯರಾದ ಶ್ರೀಮತಿ ಅಕ್ಷತಾ ಭಿಡೆ ಅವರು ನಿರ್ವಹಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top