ಜ.11ರಂದು ಆಶಾಜ್ಯೋತಿಯಿಂದ ‘ವಿಶಿಷ್ಟರಿಗಾಗಿ ವಿಶಿಷ್ಟ ಮೇಳ–2026’

Upayuktha
0



ಮಂಗಳೂರು: ಸೇವಾಭಾರತಿ (ರಿ) ಮಂಗಳೂರು ಕಳೆದ 34 ವರ್ಷಗಳಿಂದ ದಿವ್ಯಾಂಗರ ಜೀವನಮಟ್ಟ ಸುಧಾರಣೆಗೆ ಶ್ರಮಿಸುತ್ತಿದ್ದು, ಅದರ ಅಂಗಸಂಸ್ಥೆಯಾದ ಆಶಾಜ್ಯೋತಿಯ ಮೂಲಕ ದಿವ್ಯಾಂಗರು ಹಾಗೂ ಅವರ ಪೋಷಕರಿಗೆ ಶಿಕ್ಷಣ, ತರಬೇತಿ, ಚಿಕಿತ್ಸೆ ಮತ್ತು ಮಾರ್ಗದರ್ಶನ ನೀಡುತ್ತಿದೆ. 1998ರಲ್ಲಿ ಆರಂಭವಾದ ಆಶಾಜ್ಯೋತಿಯು ದಿವ್ಯಾಂಗರಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ ಅವರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶ ಹೊಂದಿದೆ.


ಆಶಾಜ್ಯೋತಿಯು ಪ್ರತಿ ವರ್ಷ ಆಯೋಜಿಸುವ ‘ವಿಶಿಷ್ಟರಿಗಾಗಿ ವಿಶಿಷ್ಟ ಮೇಳ’ ಈ ವರ್ಷವೂ ನಡೆಯಲಿದ್ದು, ದಿನಾಂಕ 11.01.2026 ಆದಿತ್ಯವಾರ ಬೆಳಗ್ಗೆ 8.30ರಿಂದ ಸಂಜೆ 4.15ರವರೆಗೆ ಮಂಗಳೂರಿನ ಡೊಂಗರಕೇರಿಯ ಕೆನರಾ ಹೈಸ್ಕೂಲ್ ಮೈದಾನದಲ್ಲಿ ಮೇಳ ಆಯೋಜಿಸಲಾಗುವುದು. ಕೆನರಾ ಎಜುಕೇಶನಲ್ ಇನ್‌ಸ್ಟಿಟ್ಯೂಶನ್ಸ್ ಇದರ ಸಹಭಾಗಿತ್ವ ವಹಿಸಿದೆ.


ಅಂದು ಬೆಳಿಗ್ಗೆ 9.30ಕ್ಕೆ ಸಭಾಕಾರ್ಯಕ್ರಮ ಆರಂಭವಾಗಲಿದ್ದು, ಮೇಳವನ್ನು ಪ್ರೊ. ಡಾ. ಶಾಂತಾರಾಮ್ ಶೆಟ್ಟಿ, ಉಪ ಸಹ ಕುಲಪತಿ, ನಿಟ್ಟೆ ವಿಶ್ವವಿದ್ಯಾಲಯ ಹಾಗೂ ತೇಜಸ್ವಿನಿ ಆಸ್ಪತ್ರೆಯ ಸ್ಥಾಪಕರು ಉದ್ಘಾಟಿಸಲಿದ್ದಾರೆ. ಶ್ರೀ ರಾಘವೇಂದ್ರ ಎಸ್. ಭಟ್, ವ್ಯವಸ್ಥಾಪಕರು ಹಾಗೂ ಮುಖ್ಯ ಕಾರ್ಯನಿರ್ವಾಹಕರು, ಕರ್ನಾಟಕ ಬ್ಯಾಂಕ್ ಮತ್ತು ಶ್ರೀ ಕೃಷ್ಣ ಹೆಗ್ಡೆ ಸಮೂಹ ಮಹಾ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ಮೇಳದಲ್ಲಿ ದಿವ್ಯಾಂಗರಿಗಾಗಿ ಹಾಡು, ನೃತ್ಯ, ಆಟೋಟ, ಸ್ಪರ್ಧೆಗಳು, ಕುದುರೆ ಸವಾರಿ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಪೋಷಕರನ್ನೂ ಒಳಗೊಂಡ ಸ್ಪರ್ಧೆಗಳು ನಡೆಯಲಿವೆ. ಮೇಳದಲ್ಲಿ ಭಾಗವಹಿಸುವ ಎಲ್ಲ ದಿವ್ಯಾಂಗರಿಗೆ ಎಲ್ಲ ವ್ಯವಸ್ಥೆಗಳು ಉಚಿತವಾಗಿರುತ್ತವೆ. ಆರಂಭಿಕ ವರ್ಷಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸಿದ್ದ ಮೇಳವು 2025ರಲ್ಲಿ ಸುಮಾರು 1200 ದಿವ್ಯಾಂಗರು ಮತ್ತು 1800 ಪೋಷಕರು, ಹಿತೈಷಿಗಳು ಸೇರಿ 3000ಕ್ಕೂ ಹೆಚ್ಚು ಮಂದಿ ಭಾಗವಹಿಸುವ ಮೂಲಕ ಗಮನಸೆಳೆದಿತ್ತು.


ಈ ಬಾರಿಯ ಮೇಳದಲ್ಲಿ 18 ವರ್ಷ ಮೇಲ್ಪಟ್ಟ ಸ್ವಲೀನತೆ (Autism), ಸೆರೆಬ್ರಲ್ ಪಾಲ್ಸಿ, ಮಾನಸಿಕ ಕುಂಠಿತ ದಿವ್ಯಾಂಗರಿಗೆ ಕಾನೂನುಬದ್ಧ ಪೋಷಕತ್ವ ಪ್ರಮಾಣ ಪತ್ರ (Legal Guardianship Certificate) ಹಾಗೂ ನಿರಾಮಯ ಆರೋಗ್ಯ ಕಾರ್ಡ್ ಕುರಿತು ಸಂಪೂರ್ಣ ಮಾಹಿತಿ ನೀಡಲಾಗುವುದು. ಜೊತೆಗೆ ಸಕ್ಷಮ ಸಂಸ್ಥೆ ವತಿಯಿಂದ ದಿವ್ಯಾಂಗರ ಸಬಲೀಕರಣ ಹಾಗೂ ನೇತ್ರದಾನ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಲಿದೆ. ವಿಶೇಷ ಸಾಧನೆ ಮಾಡಿದ 7 ಮಂದಿ ದಿವ್ಯಾಂಗ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಗುವುದು.


ಇದಕ್ಕೂ ಮುನ್ನ ಆಶಾಜ್ಯೋತಿ ವತಿಯಿಂದ ದಿನಾಂಕ 21.12.2025ರಂದು ದಿವ್ಯಾಂಗರು, ಪೋಷಕರು ಹಾಗೂ ಶಿಕ್ಷಕರಿಗಾಗಿ ಪ್ರವಾಸವನ್ನು ಆಯೋಜಿಸಲಾಗಿದ್ದು, ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ ಹಾಗೂ ಮೊಂಟೆಪದವು ಮಾಧವ ವನದ ಕ್ಯಾಂಪಸ್‌ಗೆ ಭೇಟಿ ನೀಡಲಾಗಿತ್ತು. ಈ ಪ್ರವಾಸದಲ್ಲಿ 190 ಮಂದಿ ಭಾಗವಹಿಸಿದ್ದರು.


ದಿವ್ಯಾಂಗರ ಸಬಲೀಕರಣ ಹಾಗೂ ಸಮಾಜದಲ್ಲಿ ಅವರ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಲಾದ ಈ ಮೇಳಕ್ಕೆ ಸಾರ್ವಜನಿಕರು ಹಾಗೂ ಸರ್ಕಾರಿ–ಅರೆ ಸರ್ಕಾರಿ ಸಂಸ್ಥೆಗಳ ಆರ್ಥಿಕ ಸಹಕಾರ ಅಗತ್ಯವಾಗಿದೆ ಎಂದು ಆಶಾಜ್ಯೋತಿ ತಿಳಿಸಿದೆ.


ಪತ್ರಿಕಾಗೋಷ್ಠಿಯಲ್ಲಿ ಆಶಾಜ್ಯೋತಿಯ ಅಧ್ಯಕ್ಷೆ ಶ್ರೀಮತಿ ಗೀತಾ ಲಕ್ಷ್ಮೀಶ್, ಜೊತೆ ಕಾರ್ಯದರ್ಶಿ ಶ್ರೀ ಗಣರಾಜ ವೈ, ಖಜಾಂಚಿ ಶ್ರೀ ಕೆ. ವಿಶ್ವನಾಥ ಪೈ, ಜೊತೆ ಕಾರ್ಯದರ್ಶಿ ಶ್ರೀ ಫಣೀಂದ್ರ, ಸೇವಾಭಾರತಿ (ರಿ) ಮಂಗಳೂರು ಗೌರವ ಕಾರ್ಯದರ್ಶಿ ಶ್ರೀ ಹೆಚ್. ನಾಗರಾಜ ಭಟ್ ಹಾಗೂ ಖಜಾಂಚಿ ಶ್ರೀ ಪಿ. ವಿನೋದ್ ಶೆಣೈ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top