ಪದೇ ಪದೇ ನೆನಪಾಗುವ ಶಾಸ್ತ್ರಿ ಮಾಸ್ತರು

Upayuktha
0



ನೆನಪುಗಳೇ ಮಧುರ. ಅದರಲ್ಲೂ ಹೈಸ್ಕೂಲ ನೆನಪುಗಳಂತೂ ಸದಾ ಹಸಿರು. ನಾನು ಹೈಸ್ಕೂಲ್‌ಗೆ ಹೋಗುವಾಗ ಶಾಸ್ತ್ರಿ ಮಾಸ್ತರ ಎನ್ನುವವರಿದ್ದರು. ವಿದ್ಯಾರ್ಥಿಗಳ ಜೊತೆ ತಮಾಷೆಯಾಗಿ, ಆತ್ಮೀಯವಾಗಿ ವ್ಯವಹರಿಸುತ್ತಿದ್ದರು. ಒಮ್ಮೆ ಮಹರ್ಷಿ ಅರವಿಂದರ ಕುರಿತು  ಕಾರ್ಯಕ್ರಮವಿತ್ತು. ಅರವಿಂದರ ಕುರಿತು ವಿದ್ಯಾರ್ಥಿಗಳು ಮಾತಾಡಬೇಕಿತ್ತು. ನನ್ನನ್ನುಕರೆದು  ಹೆಸರು ಕೊಡಲು ಸೂಚಿಸಿದರು. ಆಗೆಲ್ಲಾ ಶಿಕ್ಷಕರ ಜೊತೆ ಮಾತಾಡುವದೆಂದರೆ ಒಂಥರಾ ಭಯ, ಸಂಕೋಚ. ಹೆಸರು ಕೊಟ್ಟಿಲ್ಲ ಎಂದಾಗ ಅವರಿಗೆ ಬೇಸರ ಜೊತೆಗೆ ಸಿಟ್ಟೂ ಬಂತು.


ಆ ಕಾಲದಲ್ಲಿ ವಿದ್ವಾನರಾಗಿ, ಲೇಖಕರಾಗಿ, ಉತ್ತಮ ವಾಗ್ಮಿಯಾಗಿ ನನ್ನ ತಂದೆಯವರು ಹೆಸರಿತ್ತು. ಅವರು ಹೈಸ್ಕೂಲಿನ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಅಂಥ ತಂದೆಯವರ ಮಗಳಾಗಿ ಭಾಗವಹಿಸುವುದಿಲ್ಲ ಎಂದರೆ ಹೇಗೆ.. ನಾಚಿಕೆಯಾಗುವುದಿಲ್ಲವೇ ಎಂದಾಗ ಅಧೈರ್ಯದಿಂದಲೇ ಹೆಸರು ಕೊಟ್ಟೆ. ಸಾಹಿತ್ಯದ ಮನೆಯಾದ್ದರಿಂದ ಅರವಿಂದರ ಪುಸ್ತಕವೂ ದೊರಕಿತು. ಸರಿಯಾಗಿ ತಯಾರಿ ಮಾಡಿಕೊಂಡು ಎಲ್ಲರಿಗೂ ಮೆಚ್ಚುಗೆಯಾಗುವಂತೆ ಮಾತನಾಡಿದೆ. ಮೆಚ್ಚುಗೆಯೂ ಆಯ್ತು. ಇದು ನನ್ನ ಸಾಹಿತ್ಯಕ, ಇನ್ನಿತರ ಸೃಜನಾತ್ಮಕ ಚಟುವಟಿಗೆಗಳಿಗೆ ನಾಂದಿಯಾಯಿತು.


ನಂತರದ ದಿನಗಳಿಂದ ಇಂದಿನವರೆಗೂ ಲೇಖಕಿಯಾಗಿ, ನಿರೂಪಕಿಯಾಗಿ, ಸಂಘಟಕಿಯಾಗಿ ಗುರುತಿಸಿಕೊಂಡಿರುವೆ. ಇವೆಲ್ಲವನ್ನೂ ಸಾಧ್ಯವಾಗಿಸಿದ್ದು ಶಾಸ್ತ್ರಿ ಮಾಸ್ತರರ ಆ ಮಾತುಗಳು. ಹೋದ ವರ್ಷ ಗುರು ಪೂರ್ಣಿಮೆಯ ದಿನ ತುಂಬಾ ನೆನಪಾಗಿ ಮಾತಾಡಬೇಕೆನಿಸಿ ಅವರ ಬಂಧುಗಳಲ್ಲಿ ಫೋನ್ ನಂಬರ್ ಕೇಳಿದಾಗ ನಿಧನರಾಗಿ ಎರಡು ವರ್ಷವಾಯಿತು ಎಂದರು. ದುಃಖವಾಯಿತು. ಇಂದಿಗೂ ವೇದಿಕೆ ಏರುವ ಮುನ್ನ, ಬರೆಯಲು ಪೆನ್ ಹಿಡಿದಾಗ ಶಾಸ್ತ್ರಿ ಮಾಸ್ತರ ನೆನಪಾಗುತ್ತಾರೆ.


-ತಾರಾ ಹೆಗಡೆ ಸಿರಸಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top