ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆ

Upayuktha
0


ಕಾಸರಗೋಡು: ದೇಲಂಪಾಡಿ ಗ್ರಾಮ ಪಂಚಾಯತಿನ ಅಡೂರು ಗ್ರಾಮದ ಕೊರತಿಮೂಲೆ ಕೃಷ್ಣನಿವಾಸದ ಅಡೂರು ಬಾಲಕೃಷ್ಣ ತಂತ್ರಿಗಳ ಸ್ಮರಣಾರ್ಥವಾಗಿ ನೀಡುವ 2024-25ರ ಸಾಲಿನ ವಿದ್ಯಾರ್ಥಿ ವೇತನ ಸಹಿತ ಬಹುಮುಖಿ ಪ್ರತಿಭಾ ಪುರಸ್ಕಾರಕ್ಕೆ ಕೆ. ಶಾಶ್ವತ್ ಆಯ್ಕೆಯಾಗಿದ್ದಾರೆ. ಇವರು ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ 9ನೇ ತರಗತಿಯ ವಿದ್ಯಾರ್ಥಿ. ಇವರು ಡಾ. ಕೆ. ಸುರೇಶ್ ಕುಮಾರ್- ರೂಪಶ್ರೀ ಕೆ ದಂಪತಿಯ ಪುತ್ರ.


ಇವರು ಗಣಿತ, ವಿಜ್ಞಾನ, ಚದುರಂಗ ಮತ್ತು ಕರಾಟೆಯಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಚದುರಂಗ ಸ್ಪರ್ಧೆ, ಗಣಿತ ಹಾಗೂ ವಿಜ್ಞಾನ ಮೇಳಗಳಲ್ಲಿ ಉಪಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಿದ್ದರು. ಸಾಹಿತ್ಯ ಕ್ಷೇತ್ರದಲ್ಲೂ ಕ್ರಿಯಾಶೀಲರಾಗಿದ್ದಾರೆ. ಕರಾಟೆ ವಿಭಾಗದಲ್ಲಿ ಬ್ಲೂ ಬೆಲ್ಟ್ ಪಡೆದಿದ್ದು, ಮಾಹಿತಿ ತಂತ್ರಜ್ಞಾನ ವಿಭಾಗದಲ್ಲೂ ಉತ್ತಮ ಸಾಧನೆ ತೋರಿದ್ದಾರೆ. ಇವರಿಗೆ ಇದೇ ಜನವರಿ 24ರಂದು ನಡೆಯಲಿರುವ ಶಾಲೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪುರಸ್ಕಾರ ಪ್ರದಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top