ಹೃದಯದಿ ಚಿಗುರಿದ ಲತೆಯಲಿ ಅರಳಿದ ಸುಮವು ನೀನು
ಹೂವಿನ ಮಕರಂದವ ಸವಿಯ ಬಂದ ದುಂಬಿಯು ನಾನು
ಜೀವನದಿ ಹೊಸತನ ಹುರುಪು ತುಂಬಲು ಸಾಕ್ಷಿಯು ನೀನು
ಹುರುಪಲಿ ಬೆರೆತು ಜೊತೆ ಸಾಗಲು ಅಣಿಯಾಗಿರುವೆ ನಾನು
ಜೀವದೊಡಲಿನ ಆದಿಯಲಿ ಕಲೆತು ಉಸಿರಾಗಿರುವೆ ನೀನು
ಉಸಿರಿನೊಳಗೆ ಬೆರೆತು ನಿನ್ನ ಜೀವ ಸೆಲೆಯಾಗಿರುವೆ ನಾನು
ನೋಡಿದ ಕಣ್ಣ ನೋಟದಲಿ ಸೆರೆಯಾಗಿ ಸೆಳೆದಿರುವೆ ನೀನು
ಕೂಡಿದ ನಯನಗಳು ಸೇರಿ ಮಿನುಗುತಾ ಕರೆದಿರುವೆ ನಾನು
ಪ್ರೀತಿಯ ಮಾತುಗಳಿಂದ ಮೋಡಿಯ ಮಾಡಿರುವೆ ನೀನು
ತೋರಿದ ಅಕ್ಕರೆಗೆ ಹೃದಯದಲಿ ಮಂದಿರ ಕಟ್ಟಿರುವೆ ನಾನು
ಬದುಕಿನ ಪಯಣದಲಿ ಭರವಸೆಯ ಬೆಳಕಾಗಿರುವೆ ನೀನು
ಜೊತೆಗೂಡಿ ಜೀವನದಲಿ ಬಾಳುತಾ ನೆರಳಾಗಿರುವೆ ನಾನು
- ಡಾ. ವಾಣಿಶ್ರೀ ಕಾಸರಗೋಡು
ಗಡಿನಾಡ ಕನ್ನಡತಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


