ಚಂದಿರನ ಮಡಿಲಲ್ಲಿ ...

Upayuktha
0




ಬೆಳ್ಳಿಯ ಚಂದಿರ ಬಾನಿನ ಅಂಗಳದಿ ಇಂದು ಹಗುರಾಗಿ ಬಾಗಿಹನು,

ಕನಸುಗಳ ಹೊತ್ತು ತಂದ ಕನ್ನಿಕೆಯ ಮೃದುವಾಗಿ ಸಲಹಿಹನು ll೦೧ll 


ತಂಪಾದ ಗಾಳಿಯಲಿ ತೇಲಿ ಬಂದ ಆಕೆಯ ನೆನಪುಗಳ ಮೆರವಣಿಗೆ,

ಬಾನಿನ ಹನಿಗಳು ಸಾಲಾಗಿ ನಿಂತಿವೆ ಆಕೆಯ ಚೆಲುವಿನ ಅಂದಕ್ಕೆ ll೦೨ll 


ಮನದ ಮೌನವು ಈ ತಂಪು ಬೆಳದಿಂಗಳಲಿ ಕವಿತೆಯಾಗಿ ಹರಿಯುತ್ತಿದೆ,

ಸಾವಿರ ಮಾತುಗಳ ಬದಲು ಕಣ್ಣಿನ ನೋಟವೇ ಕಥೆಯನು ಹೇಳುತ್ತಿದೆ ll೦೩ll 


ಸುತ್ತಲು ಪಸರಿಸಿದ ಆ ಹೂಬಳ್ಳಿಗಳ ನವಿರಾದ ನಗುವಿನ ನವ ನರ್ತನ,

ಶಾಂತಿಯ ಸಾಗರದಿ ತೇಲುತಿದೆ ಇಂದು ಈ ಮಧುರವಾದ ಕ್ಷಣ ll೦೪ll 


ಭೂಮಿಯ ಗೋಜು-ಗದ್ದಲ ಮರೆತು ಇಲ್ಲಿ ಏಕಾಂತದ ಸಂಭ್ರಮವಿದೆ,

ಹೃದಯದ ಭಾವಕ್ಕೆ ಸಾಟಿಯಿಲ್ಲದ ಅದ್ಭುತ ಲೋಕವೊಂದು ತೆರೆದಿದೆ ll೦೫ll 


ಜಗವನ್ನೇ ಮರೆತು ಚಂದಿರನ ಮಡಿಲಲ್ಲಿ ಈಕೆ ಅರಸಿಯಂತೆ ಕುಳಿತಿರುವಳು,

ನಕ್ಷತ್ರಗಳ ನಡುವೆ ತನ್ನದೇ ಆದ ಹೊಸ ಲೋಕವನು ಸೃಷ್ಟಿಸಿರುವಳು ll೦೬ll


- ಕುಮಾರಿ ರೂಪಾ ಬಿ. ನಾಟೀಕಾರ ಮುದ್ದೇಬಿಹಾಳ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)
To Top