ರೆಪ್ಪೆಗಳ ಮರೆಯಲ್ಲಿ ಹುದುಗಿದೆ ನೂರು ನೋವು,
ಈ ಕೆಂಪು ಕಣ್ಣಿನ ಹಿಂದೆ ಅಡಗಿದೆ ಮೌನ ಹೂವು ll೦೧ll
ಜಗತ್ತಿನ ಕ್ರೂರ ನೋಟಕ್ಕೆ ಹೆದರಿ ಮಲಗಿರುವ ಕಂದ,
ಕಣ್ಣೀರಿನ ಹನಿಗಳಲ್ಲೇ ಕಂಡಿದೆ ಅಮ್ಮನ ಪ್ರೀತಿಯ ಚಂದ ll೦೨ll
ಬಾಹ್ಯದ ಆಕ್ರೋಶದ ನಡುವೆ ನಿನ್ನದೊಂದು ಪುಟ್ಟ ಲೋಕ,
ಕಣ್ಣಿನ ಕಾವಲಲ್ಲೇ ಕರಗಲಿ ನಿನ್ನ ಮನದ ಸಕಲ ಶೋಕ ll೦೩ll
ರೆಪ್ಪೆ ಮುಚ್ಚಿದರೂ ಬಿಡದ ಈ ಕಾವಲು ಎಂದಿಗೂ ನಿನಗೆ,
ಜಗವ ಗೆಲ್ಲುವ ಧೈರ್ಯ ನೀಡಲಿ ಈ ಪ್ರೀತಿಯ ಹಣಿಗೆ ll೦೪ll
ಶರಣೆ: ಕುಮಾರಿ ರೂಪಾ ಬಿ. ನಾಟೀಕಾರ ಮುದ್ದೇಬಿಹಾಳ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


