ಕ್ರಾಂತಿಯ ಪಥದಲಿ ಹೆದರದೆ ಬೆದರದೆ ಮುಂದಕೆ
ದೇಶದ ಹೆಮ್ಮೆಯ ಸೇನೆಯ ನಾಯಕನಾಗುತಾ
ಸ್ವಾತಂತ್ರ್ಯದ ಕಾರಣಕ್ಕಾಗಿಯೇ ದೇಶ ಸೇವೆಗೈದ ಸೇವಕ
ಶತ್ರುವು ಮೆಚ್ಚುವಂತೆ ಹೋರಾಡಿದ ಕೆಚ್ಚೆದೆಯ ನಾಯಕ
ರಾಷ್ಟ್ರ ನಿರ್ಮಾಣದ ಜವಾಬ್ದಾರಿ ಸ್ಥಾನದಿ
ರಾಷ್ಟ್ರ ಹಿತಕ್ಕೆ ಧಕ್ಕೆಯಾಗದ ರೀತಿಯಲ್ಲಿ ಮುನ್ನಡೆಯುತಾ
ದುರ್ಬಲ ನೀತಿ ಹೊಂದಿರಬಾರದೆOಬ ದಿಟ್ಟ ನಿಲುವಿನಲಿ
ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದ ನಾಯಕ
ಕ್ರಾಂತಿ ಪಥಕ್ಕೆ ಎಂದೂ ರಾಜಿ ಮಾಡಿಕೊಳ್ಳದ ಶೂರ
ಸ್ವರಾಜ್ಯ ಹೋರಾಟದ ಧ್ವನಿಗೆ ತೀವ್ರತೆ ಕೊಟ್ಟ ಧೀರ
ನನಗೆ ರಕ್ತ ಕೊಡಿ ಸ್ವಾತಂತ್ರ್ಯ ಕೊಡಿಸುತ್ತೇನೆ ಅನ್ನೊ ವೀರ
ನೆಲೆಸಿದೆ ನೇತಾಜಿ ನೀನು ಚರಿತ್ರೆಯಲ್ಲಿ ಅಜರಾಮರ
- ಡಾ. ವಾಣಿಶ್ರೀ ಕಾಸರಗೋಡು
ಗಡಿನಾಡ ಕನ್ನಡತಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



