ನಡೆನುಡಿಗಳ ಮೂಲಕ ಪಾಲಕರು ಮಾದರಿಯಾಗಬೇಕು: ಡಾ. ಸಂತೋಷ್ ಕುಮಾರ್ ಆಳ್ವ

Upayuktha
0


ಸುರತ್ಕಲ್‌: ತಮ್ಮ ಮಕ್ಕಳನ್ನು ಪೋಷಕರು ಮನೆಯಲ್ಲಿ ವಾತ್ಸಲ್ಯದಿಂದ ಕಂಡು ಆತ್ಮೀಯ ಪರಿಸರವನ್ನು ರೂಪಿಸಬೇಕು. ಮಕ್ಕಳು ನೋಡಿ ಕಲಿಯುವುದರಿಂದ ತಮ್ಮ ನಡೆ ನುಡಿಗಳ ಮೂಲಕ ಮಾದರಿಯಾಗಬೇಕು. ಮಕ್ಕಳ ಕಲಿಕೆಯ ಕುರಿತು ಆಸಕ್ತಿಯುಳ್ಳವರಾಗಿ ಶಿಕ್ಷಕರ ಜೊತೆಗೆ ನಿರಂತರ ಸಂಪರ್ಕದಲ್ಲಿ ಇರಬೇಕು ಎಂದು ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಸಂತೋಷ್ ಕುಮಾರ್ ಆಳ್ವ ನುಡಿದರು.


ಅವರು ಚಿತ್ರಾಪುರ ಕುಳಾಯಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿ ಮತ್ತು ಹಳೆ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ಶಿಕ್ಷಕ ರಕ್ಷಕ ಸಭೆಯಲ್ಲಿ ಆಯೋಜಿಸಿದ್ದ 'ಪರಿಣಾಮಕಾರಿ ಪೋಷಕತ್ವ'ದ ಕುರಿತು ನಡೆದ ವಿಶೇಷ ಉಪನ್ಯಾಸದಲ್ಲಿ ಮಾತನಾಡುತ್ತಿದ್ದರು.


ಶಿಕ್ಷಣವೆಂಬುದು ಸಕಾರಾತ್ಮಕ ಬದಲಾವಣೆಯ ಪ್ರಮುಖ ಮಾಧ್ಯಮವಾಗಿದ್ದು ಉನ್ನತ ಶಿಕ್ಷಣದ ಗುರಿಯನ್ನು ಇರಿಸಿಕೊಳ್ಳಬೇಕು ಎಂದು ಅವರು ನುಡಿದರು.


ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಇಂದು ವಿವಿಧ ಸೌಲಭ್ಯಗಳೊಂದಿಗೆ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಅವಶ್ಯಕವಾದ ಉತ್ತಮ ಗುಣಮಟ್ಟದ ಶಿಕ್ಷಣ ಲಭ್ಯವಾಗುತ್ತಿದೆ. ಪೋಷಕರು ಶಾಲೆಗೆ ಭೇಟಿ ನೀಡಿ ತಮ್ಮ ಮಕ್ಕಳ ಕಲಿಕಾ ಪ್ರಗತಿಯ ಕುರಿತು ತಿಳಿದುಕೊಳ್ಳಬೇಕು ಎಂದರು.


ಮುಖ್ಯ ಶಿಕ್ಷಕಿ ಶೋಭಾ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನು ನುಡಿದರು. ಶಾಲಾಭಿವೃದ್ಧಿ ಸಮಿತಿಯ ಸದಸ್ಯೆ ಶಶಿಕಲಾ, ಶಿಕ್ಷಕಿಯರಾದ ಸುಕೇಶಿನಿ, ಸಿಂತಿಯ, ನೀತಾ ತಂತ್ರಿ, ರೂಪ ಉಪಸ್ಥಿತರಿದ್ದರು. ಮಹಿಳಾ ಶಿಕ್ಷಣದ ಪ್ರವರ್ತಕಿ ಸಾವಿತ್ರಿಭಾಯಿ ಪುಲೆ ಅವರ ಕಾರ್ಯ ಸಾಧನೆಗಳನ್ನು ಸ್ಮರಿಸಿ ಗೌರವ ನಮನ ಸಲ್ಲಿಸಲಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top