ಮಂಗಳೂರು: "ಸಮಾಜ ಒಗ್ಗೂಡಿ ಬರುವ ಎಲ್ಲರನ್ನೂ ಸ್ವೀಕರಿಸುತ್ತದೆ. ಸಮಾಜವು ಅದನ್ನೇ ಬಯಸಿ ಸಜ್ಜನರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಬಲಿಷ್ಠವಾಗುತ್ತದೆ. ನಾವೂ ಸಮಾಜಕ್ಕಾಗಿ ದುಡಿಯು ವ ಹುಮ್ಮಸ್ಸು ಬರುತ್ತದೆ. ಬಹಳವನ್ನು ಸಮಾಜದಿಂದ ಪಡೆದು ಒಂದಂಶವನ್ನು ಸಮಾಜದ ಏಳ್ಗೆಗಾಗಿ ನೀಡುವ ಸದ್ಭುದ್ದಿ ಎಲ್ಲರಲ್ಲೂ ಮೂಡಲಿ" ಎಂದು ಖ್ಯಾತ ಉದ್ಯಮಿ ಶಿಕ್ಷಣ ತಜ್ಞ ಅನೂಪ್ ರಾವ್ ಬಾಗ್ಲೋಡಿಯವರು ನುಡಿದರು.
ಅವರು ದಶಮಾನದ ಹೊತ್ತಿನಲ್ಲಿರುವ ಕೋಡಿಕಲ್ ನ ವಿಪ್ರ ವೇದಿಕೆಯ ಅಷ್ಟಮ ಕಾರ್ಯಕ್ರವನ್ನು ಉದ್ವಾಟಿಸಿ ಮಾತನಾಡಿದರು.
ದುರ್ಗಾದಾಸ್ ಕಟೀಲ್, ವಿಶ್ವೇಶ್ವರ ಭಟ್, ವಿ.ಎಸ್. ಹೆಬ್ಬಾರ್, ಗೋಪಾಲಕೃಷ್ಣ ರಾವ್, ವಿದ್ಯಾ ಗಣೇಶ ರಾವ್, ಪ್ರಭಾವತಿ ಮಡಿ, ಉಷಾ ಎ. ಬಾಗ್ಲೋಡಿ, ಅನಂತ ಪದ್ಮನಾಭ ಉಪಾಧ್ಯಾಯ, ಉದ್ಯಮಿ ಗಿರೀಶ್ ರಾವ್, ಕೆ. ಹಾಗೂ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.
ಶ್ರೀಮತಿ ರೂಪಕಲಾ ರಾಮಚಂದ್ರ ಭಟ್ ನಿರ್ವಹಿಸಿದರೆ, ಕಿಶೋರ್ ಕೃಷ್ಣ ವಂದಿಸಿದರು. ಬಳಿಕ ಕೆ. ಗೌರವ್ ರಾವ್ ನೇತೃತ್ವದಲ್ಲಿ "ಸತ್ತ್ವಪರೀಕ್ಷೆ" ಎಂಬ ಬಯಲಾಟ ಜರಗಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


