ಮಂಗಳೂರು: "ಇಂದು ನಮ್ಮ ಮಧ್ಯೆ ಬೆಳೆದು- ಬೆಳಗಿ ನಿಂತ ಅದಮ್ಯ ಬೇತನ ಡಾ. ವಿನಯ ಹೆಗ್ಡೆಯವರು. ಲಘು ಉದ್ಯಮದಿಂದಾರಂಭಿಸಿ, ವಿಶ್ವವನ್ನೇ ತನ್ನ ಶಿಕ್ಷಣ ತೆಕ್ಕೆಗೆ ತೆಗೆದುಕೊಂಡ ಮಹಾನ್ ಸಾಧಕ. ಸುಲಭ-ಸರಳ ವ್ಯಕ್ತಿತ್ವವನ್ನು ಹೊಂದಿ ಸರ್ವ ಜನಪ್ರಿಯ ವ್ಯಕ್ತಿಯಾಗಿದ್ದರು. ಅಯೋಧ್ಯೆಯ ರಾಮ ಲಲ್ಲಾನ ದರ್ಶನ ಭಾಗ್ಯವನ್ನು ಹೊಂದಿ ವೈಕುಂಠ ಪದ ಸೇರಿದ ದಿವ್ಯಾತ್ಮರು ಅವರು. ವಯೋಸಹಜ ಅಗಲುವಿಕೆಯಾದರೂ ಅವರು ನಿರ್ಗಮಿಸಿಲ್ಲ. ನಮ್ಮನ್ನು ರಾಷ್ಟ್ರೀಯತೆಯ ಸಾಧನಾ ಪಥಕ್ಕೆ ಒಯ್ಯಬಲ್ಲ ಜ್ಞಾನಶಕ್ತಿ. ನಮ್ಮ 83 ವರ್ಷಗಳ ಶಿಕ್ಷಣ ಸೇವೆಯಲ್ಲಿ ಹೆಗ್ಡೆಯವರ ಪಾತ್ರ ಅವರ್ಣನೀಯ ಹಾಗೂ ಅವಿಸ್ಮರಣೀಯ ಎಂದು ನವ ಭಾರತ ಎಜ್ಯುಕೇಶನ್ ಸೊಸೈಟಿ (ರಿ) ಅಧ್ಯಕ್ಷ, ಜನಪ್ರಿಯ ವೈದ್ಯರೂ ಆದ ಡಾ.ಪಿ.ವಾಮನ್ ಶೆಣೈ ಹೇಳಿದರು.
ಅವರು ನವಭಾರತ ರಾತ್ರಿ ಪ್ರೌಢಶಾಲೆಯಲ್ಲಿ ಜರಗಿದ ಡಾ. ವಿನಯ ಹೆಗ್ಡೆಯವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿದರು. ಸಂಸ್ಥೆಯ ಇತರ ಪದಾಧಿಕಾರಿಗಳಾದ ಮಧುಸೂದನ ಅಯಾರ್, ಫಕ್ರುದ್ದೀನ್ ಆಲಿ, ಜಯಧರ್ , ಕ್ಷೇಮದ ಮನೋಶಾಸ್ತ್ರ ವೈದ್ಯರಾದ ಡಾ. ಸತೀಶ್ ರಾವ್, ಗಣೇಶ್ ರಾವ್, ಶಾಲಾ ಮುಖ್ಯ ಶಿಕ್ಷಕ ವರ್ಕಾಡಿ ರವಿ ಅಲೆವೂರಾಯ, ಆನಂದ ಕೋಡಿಕಲ್, ಬಿ. ದಿನೇಶ್ ಕುಮಾರ್ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


