ಮೌನವಾಗಿ ಹರಿದು ಬಂದಿದೆ ಈ ಸುಂದರ ನಾಗರ,
ಚರ್ಮದ ಮೇಲೆ ಅಚ್ಚೊತ್ತಿದೆ ಅಚ್ಚರಿಯ ಸಾಗರ ll೦೧ll
ಗೆರೆಗಳ ನಡುವೆ ಅಡಗಿದೆ ಯಾವುದೋ ನಿಗೂಢ ಕಥೆ,
ಬಣ್ಣಗಳ ಸಂಧಿಯಲ್ಲಿ ಮಿಂಚುತ್ತಿದೆ ಬದುಕಿನ ವ್ಯಥೆ ll೦೨ll
ಕಪ್ಪು, ಕೆಂಪು, ನೇರಳೆ ಬಣ್ಣಗಳ ಈ ಅಪೂರ್ವ ಸಂಗಮ,
ತೋಳಿನ ಮೇಲೆ ಮೂಡಿಸಿದೆ ಶಕ್ತಿಯ ಪ್ರತಿಬಿಂಬದ ಸಂಭ್ರಮ ll೦೩ll
ಹೆಡೆ ಎತ್ತಿ ನಿಂತ ರೂಪದಲ್ಲಿ ಗಾಂಭೀರ್ಯದ ನೋಟವಿದೆ,
ಸುತ್ತಿ ಬೆಳೆವ ಹಾವಿನ ನಡಿಗೆಯಲ್ಲಿ ಕಾಲದ ಓಟವಿದೆ ll೦೪ll
ಹೆಸರೊಂದನ್ನು ಹೊತ್ತು ಸಾಗುವ ಈ ನಾಗನ ಪಯಣ,
ಮನಸ್ಸಿನ ಆಳದ ಪ್ರೀತಿಯನ್ನು ಸಾರುವ ಮೌನ ಸಂಚಲನ ll೦೫ll
ಹೃದಯದ ಭಾವನೆಗಳಿಗೆ ಹಚ್ಚೆಯ ರೂಪದ ಕಾವಲು,
ಈ ಚಿತ್ರವೇ ಸಾಕ್ಷಿ, ಎಂದಿಗೂ ಮರೆಯದ ನೆನಪುಗಳ ಹೂವಲು ll೦೬ll
- ಕುಮಾರಿ ರೂಪಾ ಬಿ. ನಾಟೀಕಾರ, ಮುದ್ದೇಬಿಹಾಳ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


