ಪರ್ಕಳದಲ್ಲಿ ಬೃಹತ್ ಉಚಿತ ನೇತ್ರ ತಪಾಸಣಾ ಶಿಬಿರ

Upayuktha
0

JCI ಪರ್ಕಳ, ಮಂಗಳ ಕಲಾ ಸಾಹಿತ್ಯ ವೇದಿಕೆ ಪರ್ಕಳ, ನೇತ್ರಜ್ಯೋತಿ ಸಹಯೋಗದಲ್ಲಿ ಆಯೋಜನೆ




ಪರ್ಕಳ: ಚ್ಯಾರಿಟೇಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹಿರೇಬೆಟ್ಟು ಹಾಗೂ ಶ್ರೀ ವಿಘ್ನೇಶ್ವರ ಸಭಾಭವನ, ಪರ್ಕಳ ಅವರ ಸಹಯೋಗದಲ್ಲಿ ಬ್ರಹತ್ ಉಚಿತ ನೇತ್ರ ತಪಾಸಣಾ ಶಿಬಿರವನ್ನು 26 ಜನವರಿ 2026 ರಂದು ಪರ್ಕಳದ ಶ್ರೀ ವಿಘ್ನೇಶ್ವರ ಸಭಾಭವನದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲು ಇವರು ನೆರವೇರಿಸಿ ಕಣ್ಣಿನ ಆರೋಗ್ಯದ ಮಹತ್ವದ ಬಗ್ಗೆ ಮಾತನಾಡಿದರು.


ಸಮಾರಂಭದ ಅಧ್ಯಕ್ಷತೆಯನ್ನು ಜೇಸಿಐ ಪರ್ಕಳದ ಅಧ್ಯಕ್ಷ Jc HGF ಭರತ್ ಕೆ ಕುಲಾಲ್ ವಹಿಸಿದರು. ಮಂಗಳ ಕಲಾಸಾಹಿತ್ಯ ವೇದಿಕೆಯ ಅಧ್ಯಕ್ಷರು ಶ್ರೀ ನಟರಾಜ್ ಪರ್ಕಳ, ವಿಘ್ನೇಶ್ವರ ಸಭಾಭವನದ ಸಚ್ಚಿದಾನಂದ ನಾಯಕ್ ಪ್ರಾಥಮಿಕ ಆರೋಗ್ಯ ಕೇಂದ್ರ ಇದರ ವೈದ್ಯಾಧಿಕಾರಿ ಡಾ. ನರಸಿಂಹ ನಾಯಕ್ ಜೆ ಸಿ ಐ ಇಂಡಿಯಾ, ಜೋನ್ ಡೈರೆಕ್ಟರ್- ಕಮ್ಯುನಿಟಿ ಡೆವಲಪ್ಮೆಂಟ್, ಜೋನ್ 15, JFA ವಿಘ್ನೇಶ್ ರಾವ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಸಮುದಾಯದ ಅಭಿವೃದ್ಧಿಗೆ ಮಹತ್ವಪೂರ್ಣವಾಗಿದ್ದು, ಜೇಸಿಐ ಪರ್ಕಳ ಇನ್ಮುಂದೆ ಕೂಡ ಹೆಚ್ಚಿನ ಕಾರ್ಯಕ್ರಮಗಳನ್ನು ನಡೆಸಬೇಕೆಂದು ಹೇಳಿದರು.


ಶಿಬಿರದಲ್ಲಿ 150 ಜನರ ನೇತ್ರ ತಪಾಸಣೆ ನಡೆಯಿತು. ಅವರಲ್ಲಿ 88 ಜನರಿಗೆ ಉಚಿತ ಕನ್ನಡಕ ಹಾಗೆಯೇ, 16 ಜನರಿಗೆ ದೃಷ್ಟಿ ಸುಧಾರಣೆಗೆ ಉಚಿತ ಕಣ್ಣಿನ ಪೊರೆ ಕಳಚುವ ಶಸ್ತ್ರಚಿಕಿತ್ಸೆಯ ದಿನಾಂಕ ನಿಗದಿ ಮಾಡಲಾಯಿತು.


ಶಿಬಿರದಲ್ಲಿ ಭಾಗಿಯಾದ ಪರ್ಕಳ ಮತ್ತು ಆಸುಪಾಸಿನ ಅನೇಕ ಜನರು ಈ ಸೇವೆಯ ಪ್ರಯೋಜನವನ್ನು ಪಡೆದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top