'ಮಂದಾರ ಗ್ರಾಮ ಶ್ರೀ ಸೋಮೇಶ್ವರ ಅಷ್ಟಕ'

Upayuktha
0



ವಂದಿಸುವೆ ಮೋದದಲಿ ಪರಶಿವನ ಗಣಂಗಳು

ಪೂಜಿಸುವೆ ಮಹದೇವ ಲಿಂಗಕ್ಕೆ ಭಕ್ತಿಯಲಿ

ಸತ್ಪಾತ್ರರೊಂದಾಗಿ ಸ್ಥಾಪಿಸಿದ ಲಿಂಗಕ್ಕೆ

ನಮಿಸುವೆನು ಭಕ್ತಿಯಲಿ ಶಂಕರನ ನೆನೆದು!

ಭಸ್ಮಧಾರಿಯು ಶಿವನು ನಿಜದೊಲವ ಭೂಷಣನು

ಭವರೋಗ ವೈದ್ಯನವ ಸುಪ್ರಭುವು ಈಶ್ವರನು

ದೇವಗಣದಿಂದವನು ನಿತ್ಯ ಪೂಜಿತನಿರಲು

ನಮಿಸುವೆವು ಶ್ರೀ ಸೋಮ ಈಶ್ವರಗೆ ನಾವು!         II೧II


ದಕ್ಷಿಣ ವಾಹಿನಿಯ ಭೀಮಾ ನದಿ ತೀರದಲಿ

ಮಂದಾರ ಗ್ರಾಮದಲಿ ಉದ್ಭವಿಸಿ ಪರಶಿವನು

ಶ್ರೀರಾಮಚಂದ್ರನಿರೆ ಶಿವಲಿಂಗ ಸ್ಥಾಪಕನು

ನಿತ್ಯ ಸತ್ಯದಿ ಹರಸಿ ರಾಮಲಿಂಗೇಶ್ವರನು

ಸಾಲಿಗ್ರಾಮ ಶಿಲೆಯ ಅಲಂಕೃತ ದೇವನೆನೊ

ತ್ರಿನೇತ್ರ ಜಾತ್ಯೋದ್ಭವ ಲಿಂಗಕ್ಕೆ ನಮನ!              II೨II


ನಂದೀಶನಭಿಮುಖದಿ ಶಿವಲಿಂಗವಿಲ್ಲಿಹುದು

ಸನಿಹದಲಿ ಗಜಮುಖನು ಸದಾಸೀನದಲ್ಲಿಹನು

ಶ್ರೀಚಕ್ರಧಾರಿಯೆಡೆ ಶಿಖರರೂಪಿ ಶಿವನು

ನಾಗಾಲಂಕೃತವ ಅನುದಿನವು ಸೊಬಗಿನಲಿ

ವೇದಭೂಷಿತನವನು ಭವರೋಗ ವೈದ್ಯನಿಹ

ಉಮಾಭೂಷಿತನಿಗೆ ಅನುದಿನವು ನಮನ!         II೩II


ಕಾಶೀಪುರಾಧೀಶನು ನಮ್ಮೆದೆಯ ಈಶ್ವರನು

ದಕ್ಷಿಣದ ಕಾಶಿಯೆನೊ ಮಂದಾರ ಪುರದಲ್ಲಿ

ಬಾಣಾಲಂಕೃತದ ಲಿಂಗವಿದು ನಿಜದಲ್ಲಿ

ವರಕಾಮೇಶ್ವರನ ಸರಿಸಮದಿ ಶೋಭೆಯಲಿ

ಭೀಮಾತ್ಮಜ ವಂಶಜ ಸ್ಥಾಪಿಸಿದ ಶಿವಲಿಂಗ

ವಜ್ರೇಶ್ವರನೆಂದೆನಿಸಿ ಕಂಗೊಳಿಸೆ ನಮನ!            II೪II


ಅದ್ವೈತರೆಲ್ಲರೂ ಒಂದಾಗಿ ಪ್ರತಿದಿನವೂ

ಓಂಕಾರ ಕಪಾಲ ಈಶ್ವರಗೆ ಪೂಜೆಯಲಿ

ಪಂಚಾಕ್ಷರಿ ಮಂತ್ರ ಪ್ರಾಣ ಜೀವಾಳವಿರೆ

ನಮೋನಮೋ ಎನುತ ಭೀಮಾಶಂಕರನಿಗೆ

ದೇವರೊಡನೆ ಯತಿಗಳೂ ಸರ್ವಶ್ರೇಷ್ಠರು ಎನಿಸಿ

ಯೋಗೇಶ್ವರ ನೀನೆಂದು ಜಪಿಸುತಲಿ ನಮನ!      II೫II


ತ್ರಿನೇತ್ರ ವರನನೇ ತ್ರಿಪುಂಡಧಾರಿಯೇ

ಅನುದಿನವು ತ್ರಯಂಬಕ ಈಶ್ವರನು ಎನಿಸುತಲಿ

ನೆಲೆಸು ನೀ ಗುರುವಾಗಿ ನಮ್ಮೊಡನೆ ಪ್ರೀತಿಯಲಿ

ವಿಶ್ವೇಶ್ವರ ನೀನು ನಮ್ಮೆಲ್ಲರೆದೆ ದೈವ

ರೋಗಿಯಾಗಿರೆ ನಾನು ನೀನೆನಗೆ ಭವವೈದ್ಯ

ವೈದ್ಯೇಶ್ವರ ನಿನಗೆ ಒಲವೆದೆಯ ನಮನ!        II೬II


ಭೂತನಾಥನು ನೀನು ಸರ್ವರಧಿಪತಿಯಿರಲು

ನಮ್ಮೆದುರು ಪ್ರತ್ಯಕ್ಷ ಭೂತನಾಥೇಶ್ವರ

ಮಂದಾರ ಗ್ರಾಮದಿಹ ನಿನಗೆನ್ನ ವಂದನೆಯು

ಸುರೇಶ್ವರನು ನೀನು ಯತಿಗಳಿಗೆ ಗುರುವು!         II೭II


ಮೋಕ್ಷದಾರಿಯ ತೋರೋ ವರಬಿಲ್ವವೃಕ್ಷನಿರೆ

ಒಲವಿನಲಿ ಪೂಜಿತನು ಭಕ್ತವೃಂದದಿ ನಿತ್ಯ

ಬಗೆಬಗೆಯ ಮಂತ್ರಗಳ ತಂತ್ರಗಳ ಸಹಿತದಲಿ

ಲಕ್ಷ ಬಿಲ್ವಾರ್ಚನೆಯ ಗೈದಿರುವ ನಮ್ಮನ್ನು

ಉದ್ಧರಿಸು ಶಶಿ ಶೇಖರ ದೇವನೆ ಎಂದೆಲ್ಲ

ಬೇಡುವರು ವಂದಿಸುತ ಶಶಿಪತಿಗೆ ಮುದದಿ!     II೮II


ಪರಶಿವನೆ ನನ್ನೆದೆಯ ಅಜ್ಞಾನ ಕಳೆಯುತಲಿ

ಕರುಣಿಸುತ ನೀನೆನಗೆ ಸುಜ್ಞಾನ ಅನುದಿನವು

ದೇವದೇವನು ನೀನು ಶೀವೋಹಂ ಎನ್ನುತಲಿ

ದಾರಿದ್ರ್ಯ ಕಳೆಯುತಿರೆ ಸದಾಶಿವನೆಂದಾಗಿ

ಸನ್ಮಂಗಲ ನೀಡೆನಗೆ ದೊರೆ ಸೋಮೇಶ್ವರನೆ!    II೯II


- ಶ್ರೀನಿವಾಸ ಜಾಲವಾದಿ

ಸುರಪುರ, 9886563179


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

إرسال تعليق

0 تعليقات
إرسال تعليق (0)
To Top