ಕಾರಿಂಜ ಶ್ರೀ ಮಹಾದೇವ ಶಾಸ್ತಾರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಆಚರಣೆ

Upayuktha
0


ಕಾಸರಗೋಡು: ಕಾರಿಂಜ ಶ್ರೀ ಮಹಾದೇವ ಶಾಸ್ತಾರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಹಬ್ಬವು ಭಕ್ತಿಭಾವ ಮತ್ತು ವೈಭವದಿಂದ ಜರುಗಿತು. ಅನೇಕ ಭಕ್ತರು ಶ್ರೀ ದೇವರ ದರ್ಶನ ಪಡೆದು ಅನ್ನಪ್ರಸಾದ ಸ್ವೀಕರಿಸಿದರು.


ಹಬ್ಬದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ವರಗಾನ ಸಂಗೀತ ಬಳಗ, ಕಾಸರಗೋಡು ಇವರಿಂದ ಗಾನಸುಧಾ ಸಂಗೀತ ಕಾರ್ಯಕ್ರಮ ನಡೆಯಿತು. ಗುರುರಾಜ್ ಕಾಸರಗೋಡು ಅವರ ಸಂಯೋಜನೆ ಹಾಗೂ ಗಾಯನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗಾಯಕಿ ವರ್ಷಾ ಶೆಟ್ಟಿ, ಉಷಾ ಸುಧಾಕರನ್, ಗಾಯಕ ಹರೀಶ್ ಪಂಜಿಕಲ್ಲು ಹಾಗೂ ರವಿ ಪಾಂಬಾರ್ ಸೇರಿದಂತೆ ಸಂಸ್ಥೆಯ ಕಲಾವಿದರು ಮನಮೋಹಕ ಗಾಯನ ನೀಡಿದರು.


ಕಾರ್ಯಕ್ರಮದ ಅಂತ್ಯದಲ್ಲಿ ಭಾಗವಹಿಸಿದ ಕಲಾವಿದರಿಗೆ ಶಾಲು ಮತ್ತು ಗೌರವ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಗಣೇಶ್, ಮೋಹನ್ ಶೆಟ್ಟಿ ಮತ್ತು ಶ್ರೀಮತಿ ವನಜ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top