ಮಹಾ ಶಿವರಾತ್ರಿ ಪ್ರಯುಕ್ತ ರಾಜ್ಯಮಟ್ಟದ ಉಚಿತ ‘ಅಂಚೆ ಕುಂಚ’ ಚಿತ್ರಕಲೆ ಸ್ಪರ್ಧೆ

Upayuktha
0

 



ದಾವಣಗೆರೆ: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮಹಾ ಶಿವರಾತ್ರಿ ಪ್ರಯುಕ್ತ ರಾಜ್ಯಮಟ್ಟದ ಉಚಿತ “ಅಂಚೆ ಕುಂಚ” ಚಿತ್ರಕಲೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. 50 ಪೈಸೆ ಅಂಚೆ ಕಾರ್ಡಿನಲ್ಲಿ ಈಶ್ವರನ ಚಿತ್ರವನ್ನು ಬಿಡಿಸುವ ಈ ಸ್ಪರ್ಧೆ ಫೆಬ್ರವರಿ 15, 2026 ರೊಳಗೆ ನಡೆಯಲಿದೆ ಎಂದು ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಅವರು ತಿಳಿಸಿದ್ದಾರೆ.


ಸ್ಪರ್ಧೆಯನ್ನು ಭಾಗವಹಿಸುವವರ ವಯೋಮಾನದ ಆಧಾರದಲ್ಲಿ ವಿವಿಧ ವಿಭಾಗಗಳಾಗಿ ವಿಂಗಡಿಸಲಾಗುವುದು. ಸ್ಪರ್ಧಾರ್ಥಿಗಳು ತಮ್ಮ ಚಿತ್ರಗಳನ್ನು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, “ಕನ್ನಡ ಕೃಪಾ”, ಕುವೆಂಪು ರಸ್ತೆ, ಕೆ.ಬಿ. ಬಡಾವಣೆ, ದಾವಣಗೆರೆ – 577002 ಈ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು.


ಅಂಚೆ ಕಾರ್ಡಿನಲ್ಲಿ ಶಿವನ ಚಿತ್ರ ಬಿಡಿಸುವ ಸ್ಪರ್ಧಾರ್ಥಿಗಳು ತಮ್ಮ ವಿಳಾಸ, ವಯಸ್ಸು ಹಾಗೂ ವ್ಯಾಟ್ಸಪ್ ಸಂಖ್ಯೆಯನ್ನು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ನಮೂದಿಸಬೇಕು. ಆಂಗ್ಲ ಭಾಷೆಯಲ್ಲಿರುವ ವಿಳಾಸಗಳನ್ನು ಸ್ವೀಕರಿಸಲಾಗುವುದಿಲ್ಲ. ಯಾವುದೇ ಸಭೆ ಅಥವಾ ಸಮಾರಂಭವನ್ನು ಆಯೋಜಿಸದೆ, ಬಹುಮಾನ ವಿಜೇತರ ಫಲಿತಾಂಶ ಹಾಗೂ ಅಭಿನಂದನಾ ಪತ್ರವನ್ನು ಅವರವರ ವ್ಯಾಟ್ಸಪ್ ಸಂಖ್ಯೆಗೆ ಕಳುಹಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.


ಹೆಚ್ಚಿನ ಮಾಹಿತಿಗಾಗಿ 9538732777 ಸಂಖ್ಯೆಯನ್ನು ಸಂಪರ್ಕಿಸಬಹುದು. ಹಿರಿಯ ಹಾಗೂ ಕಿರಿಯ ಚಿತ್ರಕಲಾವಿದರು ಈ ಮುಕ್ತ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಗಳನ್ನು ಕಳುಹಿಸಬೇಕಾಗಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ಉಮೇಶ್ ಅವರು ವಿನಂತಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top