ಕಾಸರಗೋಡು: ಡಾ. ವಾಣಿಶ್ರೀ ಕಾಸರಗೋಡು ಅವರ ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ), ಕಾಸರಗೋಡು ವತಿಯಿಂದ ಮುಳ್ಳೇರಿಯ ಬೆಂಗತಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ 157ನೇ ನಿತ್ಯನೂತನ ಸಾಹಿತ್ಯ–ಗಾನ–ನೃತ್ಯ ವೈಭವ ಕಾರ್ಯಕ್ರಮವು ಸಹಸ್ರಾರು ಪ್ರೇಕ್ಷಕರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.
ಡಾ. ವಾಣಿಶ್ರೀ ಅವರ ಸಾಹಿತ್ಯಿಕ ಪ್ರಸ್ತುತಿಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಂಸ್ಥೆಯ ಪುಟಾಣಿ ದಾಖಲೆ ಸಾಧಕಿ ರತ್ನ ಪ್ರೀತಿಕಾ ಪ್ರಸಾದ್ ಅವರ ರಿಂಗ್ ನೃತ್ಯ ವಿಶೇಷ ಆಕರ್ಷಣೆಯಾಗಿತ್ತು. ಮಾನ್ವಿ ಸಾಗರ್ ಅವರ ಯೋಗ ನೃತ್ಯ ಕಾರ್ಯಕ್ರಮಕ್ಕೆ ಹೊಸ ಆಯಾಮ ನೀಡಿದರೆ, ವಿಸ್ಮಯ ವಿನೋದ್ ಅವರ ಭರತನಾಟ್ಯ ಪ್ರಸ್ತುತಿ ಗಮನಸೆಳೆಯಿತು. ಜನಪದ ನೃತ್ಯದ ಸಂಯೋಜಕರಾದ ಶ್ರೇಯ ಸೂರ್ಯ ಮತ್ತು ಶಿವಾನಿ ಅವರ ಪ್ರದರ್ಶನಗಳು ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡವು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಕಲಾನಕ್ಷತ್ರಗಳಿಗೆ ಸಂಸ್ಥೆಯ ವತಿಯಿಂದ ಗೌರವಧನ ಸಹಿತ ಪುರಸ್ಕಾರ ನೀಡಲಾಯಿತು. ಡಾ. ವಾಣಿಶ್ರೀ ಅವರನ್ನು ಸ್ಮರಣಿಕೆ, ಶಾಲು ಹಾಗೂ ಫಲ–ಪುಷ್ಪಗಳೊಂದಿಗೆ ಗೌರವಿಸಲಾಯಿತು.
ವೇದಿಕೆಯಲ್ಲಿ ತಾರಾನಾಥ್ ಗುರುಸ್ವಾಮಿ, ಪದ್ಮಿನಿ, ಕಣ್ಣನ್, ಪುರುಷೋತ್ತಮ, ರಾಘವನ್, ಮನೀಶ್ ರಾವ್, ಮಾನು ಅಚ್ಯುತ ಭಟ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


