ಕಾಸರಗೋಡು: ಲಯನ್ಸ್ ಇಂಟರ್ ನೇಶನಲ್ ಕಾಸರಗೋಡು ಜಿಲ್ಲಾ ಪ್ರಥಮ ಸಮ್ಮೇಳನ ಲಯನ್ಸ್ ಕಾರ್ನಿವಲ್ ಇದರ ಅಂಗವಾಗಿ, ಪಡನ್ನಕ್ಕಾಡ್ ಬೇಕಲ್ ಕ್ಲಬ್ಬಿನ ಅಂಗಳದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಅತ್ಯಾಕರ್ಷಕ ನಿತ್ಯ ನೂತನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಡಾ. ವಾಣಿಶ್ರೀ ತಂಡದಿಂದ ಅತಿವಿಸ್ಮಯ ಡಿ.ಜೆ. ಡಾನ್ಸ್ ಧಮಾಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ, ಜಿಲ್ಲೆಯ 35 ಲಯನ್ಸ್ ಕ್ಲಬ್ ಗಳ ಪ್ರತಿನಿಧಿಗಳು ಮತ್ತು ಅವರ ಕುಟುಂಬ ಸದಸ್ಯರು ಸೇರಿದಂತೆ ಸಹಸ್ರಾರು ಜನ ಸೇರಿದ್ದರು.
ಕಾಸರಗೋಡು ಸಂಸದ ರಾಜಮೋಹನ ಉನ್ನಿತ್ತಾನ್ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕರಾದ ಇ. ಚಂದ್ರಶೇಖರ್, ಸಿ.ಎಚ್. ಕುಂಞಂಬು, ಎಂ. ರಾಜಗೋಪಾಲನ್, ಎನ್.ಎ. ನೆಲ್ಲಿಕುನ್ನು, ಮತ್ತು ಎ.ಕೆ.ಎಂ. ಅಶ್ರಫ್ ಹಾಗೂ ಚಲನಚಿತ್ರ ತಾರೆ ಟಿನಿ ಟಾಮ್ ಲಯನ್ಸ್ ಗವರ್ನರ್ ರವಿ ಗುಪ್ತಾ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕರಾದ ಅಧ್ಯಕ್ಷೆ ಡಾ. ವಾಣಿಶ್ರೀ ಹಾಗೂ ಕಲಾ ಮಾಣಿಕ್ಯಗಳಾದ ಸಾನ್ವಿ ಶೆಟ್ಟಿ, ಸಾತ್ವಿಕ, ವೈಷ್ಣವ್, ದಿಶಾ, ಸಾನ್ವಿಕ ಮುಂತಾದವರಿಗೆ ಲಯನ್ಸ್ ಸಂಸ್ಥೆಯವರು ವಿಶೇಷ ಉಡುಗೊರೆ ನೀಡಿ ಪುರಸ್ಕರಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

