ಶತಮಾನಕ್ಕೆ ಸಾಕ್ಷಿಯಾದ ಸ್ವದೇಶಿ ಔಷಧ ಭಂಡಾರ ಕುಂಜಾಲು: ಸಂಸದ ಕೋಟ ಶ್ರೀನಿವಾಸ ಪೂಜಾರಿ

Upayuktha
0


ಕುಂಜಾಲು–ಉಡುಪಿ: ಮಣಿಪಾಲ ಸಮೀಪದ ಕುಂಜಾಲಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವದೇಶಿ ಔಷಧ ಭಂಡಾರ ಕುಂಜಾಲು ಘಟಕದ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು.


ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಅತ್ಯಂತ ಗ್ರಾಮೀಣ ಪ್ರದೇಶವಾಗಿದ್ದ ಕುಂಜಾಲಿನಲ್ಲಿ, ಅಂದಿನ ಆಯುರ್ವೇದ ಪಂಡಿತರಾದ ರಘುನಾಥ್ ಪ್ರಭು ಅವರ ಪರಿಶ್ರಮದಿಂದ ಸ್ವದೇಶಿ ಔಷಧ ತಯಾರಿಕಾ ಕೇಂದ್ರ ಸ್ಥಾಪನೆಯಾದುದು ಐತಿಹಾಸಿಕ ದಾಖಲೆ ಎಂದು ಅವರು ಹೇಳಿದರು. ಇಂದು ಆಯುರ್ವೇದ ಮತ್ತು ಯೋಗ ಪದ್ಧತಿಗಳು ಜಗತ್ತಿನಾದ್ಯಂತ ಪ್ರಸಿದ್ಧಿಯಾಗಿವೆ. ಭಾರತೀಯ ಆಯುರ್ವೇದ ಪದ್ಧತಿಯನ್ನು ಇನ್ನಷ್ಟು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿ, ಅದರ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.


ಉಡುಪಿ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ವಹಿಸಿದ್ದರು. ಉದ್ಘಾಟನಾ ಸಮಾರಂಭದಲ್ಲಿ ನಿಕಟಪೂರ್ವ ಶಾಸಕರಾದ ಕೆ. ರಘಪತಿ ಭಟ್, ಆಯುರ್ವೇದ ತಜ್ಞ ವೈದ್ಯ ಡಾ. ತನ್ಮಯ ಗೋಸ್ವಾಮಿ, ಹೆರ್ಗ ದಿನಕರ ಶೆಟ್ಟಿ (ಮಾಜಿ ಉಡುಪಿ ನಗರಸಭಾಧ್ಯಕ್ಷ), ಮಹೇಶ್ ಠಾಕೂರ್ (ಉಪಾಧ್ಯಕ್ಷರು, ರಾಜ್ಯ ಅಥ್ಲೆಟಿಕ್ ಸಂಸ್ಥೆ ಉಡುಪಿ), ಪ್ರಸಾದ್ ಕುಮಾರ್ ಶೆಟ್ಟಿ (ನ್ಯಾಯವಾದಿ, ಉಡುಪಿ), ಹಿರಿಯ ವೈದ್ಯ ಡಾ. ಬಿ.ಆರ್. ಅಂಬರೀಶ್, ಶ್ರೀ ಧನ್ವಂತರಿ ಔಷಧಾಲಯ ಭಂಡಿಗಡಿ, ಸ್ವದೇಶಿ ಔಷಧ ಭಂಡಾರ ಕುಂಜಾಲು ಸಂಸ್ಥೆಯ ಹಿರಿಯ ಸದಸ್ಯ ಕೀರ್ತಿ ವಿ. ಪ್ರಭು ಹಾಗೂ ದತ್ತಾತ್ರೇಯ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಂಸ್ಥೆಯ ಮಾಲೀಕರಾದ ನಯನದಾಸ್ ಪ್ರಭು ಮತ್ತು ಸಾವಿತ್ರಿ ಪ್ರಭು (ಹಿರಿಯ ಸಂಶೋಧನಾ ವಿದ್ಯಾರ್ಥಿನಿ) ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಸಂಸ್ಥಾಪಕರ ಸಂಸ್ಮರಣೆಯನ್ನು ಡಾ. ರೇಷ್ಮಾ ಗುರುಪ್ರಸಾದ್ ನಡೆಸಿಕೊಟ್ಟರು. ಮಮತಾ ನಯನದಾಸ್ ಪ್ರಭು ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಪ್ರೊ. ಕೊಕ್ಕಣೆ ಸುರೇಂದ್ರನಾಥ ಶೆಟ್ಟಿ ನೆರವೇರಿಸಿದರು.


ಮಧ್ಯಾಹ್ನದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top