ಕಾಸರಗೋಡು: ಇಲ್ಲಿನ ಪ್ರಖ್ಯಾತ ಸ್ವರ್ಣ ಆಭರಣ ಮಳಿಗೆ ಬಿಂದು ಜ್ಯುವೆಲ್ಲರಿಯಲ್ಲಿ ವರ್ಣೋತ್ಸವ ಕಾರ್ಯಕ್ರಮದ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಕಾಸರಗೋಡು ವತಿಯಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ಹಲವಾರು ಗಣ್ಯರಿಗೆ ಈ ಕಾರ್ಯಕ್ರಮದಲ್ಲಿ ಗೌರವ ಪುರಸ್ಕಾರ ನೀಡಲಾಯಿತು. ಬಿಂದು ಜ್ಯುವೆಲ್ಲರಿಯ ಶ್ರೀಜು ಸ್ವಾಗತಿಸಿದರು. ಸಂಸ್ಥೆಯ ಗಾನಸಾಮ್ರಾಟ್ ಮನೋಜ್ ಅವರು ಹೆಣ್ಣಿನ ಧ್ವನಿಯಲ್ಲಿ ಹಾಡಿ ವಿಶೇಷ ಆಕರ್ಷಣೆಯಾದರು. ದಿವಾಕರ ಕಾಸರಗೋಡು ಗಾನ ವೈಭವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮಕ್ಕೆ ಸ್ವರ ನೀಡಿದರು. ಪ್ರೀತಿಕಾ ಪ್ರಸಾದ್ ಅವರ ರಿಂಗ್ ನೃತ್ಯ ಸ್ವರ್ಣದಂತೆ ಆಕರ್ಷಿಸಿತು. ಮೋಕ್ಷ ಹಾಗೂ ಮುಕ್ತಿ ಅವರ ಜೋಡಿ ಯೋಗ ನೃತ್ಯ ಕಾರ್ಯಕ್ರಮಕ್ಕೆ ಹುರುಪು ಕೊಟ್ಟಿತು.
ಬಿಂದು ಜ್ಯುವೆಲ್ಲರಿಯ 40 ನೇ ವರ್ಷಾಚರಣೆಯ ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಲಾವಿದರಾದ ಪೂಜಾಶ್ರೀ, ಸನುಷ ಸುನಿಲ್, ಶ್ರೀಶ ಸುನಿಲ್, ಅಹನಾ, ಯೆಶಿಕಾ ಸಂದೀಪ್, ಖುಷಿ, ಜಿಯಾ, ಶ್ರೇಯ, ನವ್ಯಶ್ರೀ, ಶಿವಾನಿ, ಲಕ್ಷ್ಮಿಪ್ರಿಯಾ, ಹರ್ಷಿಕ, ಪ್ರಿತ್ವಿಕಾ, ಹಂಶಿಕ, ಪ್ರಜ್ಞಾ ಇನ್ನಿತರ ಕಲಾವಿದರು ಸ್ಯಾಂಡಲ್ ವುಡ್ ಶೈಲಿಯ ಸಿನಿಮೀಯ ನೃತ್ಯ ಪ್ರಸ್ತುತಿ ನೀಡಿ ಕಾರ್ಯಕ್ರಮಕ್ಕೆ ಹೊಸ ಕಳೆ ಕೊಟ್ಟರು.
ಸಂಸ್ಥೆಯ ಸೀತಾಂಗೋಳಿ ವಿಭಾಗದ ಕಲಾಮಾಣಿಕ್ಯಗಳು ನಾಟ್ಯ ಗುರುಗಳಾದ ಸಚಿನ್ ಅವರ ಶಿಷ್ಯರು ಟ್ರಿಕಿ ಜೇಸ್ಟರ್ಸ ನಲ್ಲಿ ನೃತ್ಯ ತರಬೇತಿ ಪಡೆಯುತ್ತಿರುವ ನಂದನ, ರಾಹುಲ್, ಧನುಶ್ರೀ, ವಿಶ್ಮಿತಾ, ಉನ್ನಿಮಯ, ವಿಲಾಸಿನಿ, ಅಕ್ಷಿತಾ, ಸಾನ್ವಿ ಶೆಟ್ಟಿ, ಸಾತ್ವಿ ಶೆಟ್ಟಿ, ಭುವಿಶ, ಅವಿನಾಶ್, ಹೃದಯ್ ಮುರಳಿ, ಪ್ರಜ್ವಲ್ ಮುಂತಾದ ಕಲಾವಿದರು ಪಾಶ್ಚಿಮಾತ್ಯ ಹಾಗೂ ಬಾಲಿವುಡ್ ಶೈಲಿಯಲ್ಲಿ ನರ್ತಿಸಿ ಕಲಾಭಿಮಾನಿಗಳನ್ನು ಮಂತ್ರ ಮುಗ್ದಗೊಳಿಸಿದರು.
ಬಿಂದು ಜ್ಯುವೆಲ್ಲರ್ಸ್ ನಡೆಸಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸತತ ಮೂರನೇ ಬಾರಿಗೆ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಡಾ. ವಾಣಿಶ್ರೀ ಸಾರಥ್ಯದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯು ಪಾತ್ರವಾಯಿತು.
ಸಂಸ್ಥೆಯ ಅಧ್ಯಕ್ಷರು ಡಾ. ವಾಣಿಶ್ರೀ ಕಾಸರಗೋಡು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಬಿಂದು ಜ್ಯುವೆಲ್ಲರಿ ವತಿಯಿಂದ ಗೌರವ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು. ಅಪಾರ ಜನ ಸಾಗರವಿದ್ದ ಈ ಸ್ವರ್ಣ ಕಾರ್ಯಕ್ರಮದಲ್ಲಿ ಗಣ್ಯರಾದ ಶ್ರೀಜಿ, ಅಚ್ಯುತ್ ಭಟ್, ಗುರುಪ್ರಸಾದ, ಅಶ್ವಿನಿ, ವನಿತಾ, ರೇಖಾ, ಮೋಹಿನಿ, ಶಶಿಕಲಾ, ಸುನಿಲ್, ಶಾಂತ, ಅಕ್ಷತಾ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

