ಫೆ.22: ಕಾಸರಗೋಡಿನಲ್ಲಿ ಕರ್ನಾಟಕ–ಕೇರಳ ಚುಟುಕು ಸಾಹಿತ್ಯ ಸಮ್ಮೇಳನ–2026

Upayuktha
0

ನುಳ್ಳಿಪ್ಪಾಡಿ ಕನ್ನಡ ಭವನದಲ್ಲಿ ವಿವಿಧ ಸಾಹಿತ್ಯ–ಸಾಂಸ್ಕೃತಿಕ ಕಾರ್ಯಕ್ರಮಗಳು




ಕಾಸರಗೋಡು: ಕೇರಳ ರಾಜ್ಯ–ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವಾರ್ಷಿಕೋತ್ಸವದ ಅಂಗವಾಗಿ ಕಾಸರಗೋಡು–ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ–2026 ಅನ್ನು ಫೆಬ್ರವರಿ 22, 2026 (ಭಾನುವಾರ) ರಂದು ಕಾಸರಗೋಡು ತಾಲ್ಲೂಕಿನ ನುಳ್ಳಿಪ್ಪಾಡಿಯ ಕನ್ನಡ ಭವನದ ಸಭಾಂಗಣದಲ್ಲಿ ಆಯೋಜಿಸಲಾಗುತ್ತಿದೆ. “ಚುಟುಕು ಯುಗಾಚಾರ್ಯ ಡಾ| ಎಂ.ಜಿ.ಆರ್. ಅರಸ್” ವೇದಿಕೆಯಲ್ಲಿ ಸಮ್ಮೇಳನ ನಡೆಯಲಿದೆ.


ಡಾ| ವಾಮನ್ ರಾವ್ ಬೇಕಲ್–ಸಂಧ್ಯಾರಾಣಿ ಟೀಚರ್ ಅವರ ಸಾರಥ್ಯದ “ಸೀತಮ್ಮ ಪುರುಷ ನಾಯಕ ಸ್ಮಾರಕ” ಕನ್ನಡ ಭವನ ಗ್ರಂಥಾಲಯ (ನೋಂದಣಿ ಸಂಖ್ಯೆ 223/2008) ಇದರ ಅಂಗ ಸಂಸ್ಥೆಯಾದ ಕೇರಳ ರಾಜ್ಯ–ಕನ್ನಡ ಚುಟುಕು ಸಾಹಿತ್ಯ ಪರಿಷತ್ತನ್ನು ಡಾ| ಮಾನಸ, ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರಿಂದ ಫೆಬ್ರವರಿ 2, 2025 ರಂದು ಉದ್ಘಾಟಿಸಲಾಗಿತ್ತು.


ಸಮ್ಮೇಳನದ ಅಂಗವಾಗಿ ಕವಿಗೋಷ್ಠಿ, ಯುವಕವಿಗೋಷ್ಠಿ, ವಿಚಾರಗೋಷ್ಠಿ, “ಕವಿ ಕಾವ್ಯವಿಭೂಷಣ” ಹಾಗೂ “ಕವಿ ಕಾವ್ಯ ಕಂಠೀರವ” ಪ್ರಶಸ್ತಿ ಪ್ರದಾನ ಸಮಾರಂಭ, ಸಮ್ಮೇಳನ ಸರ್ವಾಧ್ಯಕ್ಷರ ಅದ್ಧೂರಿ ಮೆರವಣಿಗೆ, ಸಾಂಸ್ಕೃತಿಕ ಕಲಾ ವೈಭವ, ಯಕ್ಷಗಾನ ಬಯಲಾಟ, 101 ಮಂದಿಯಿಂದ ಪ್ರಾತಃಕಾಲ ಭಜನೆ ಸೇರಿದಂತೆ ಸನಾತನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ಕನ್ನಡ ಭವನದ ಸ್ಥಾಪಕರೂ ಹಾಗೂ ಕೇರಳ ರಾಜ್ಯ- ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರೂ ಆದ ಡಾ| ವಾಮನ್ ರಾವ್ ಬೇಕಲ್ ತಿಳಿಸಿದ್ದಾರೆ.


ಚುಟುಕು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸ್ವರಚಿತ ಚುಟುಕು ಕವಿಗಳು “ಕವಿ ಕಾವ್ಯವಿಭೂಷಣ” ಹಾಗೂ “ಕವಿ ಕಾವ್ಯ ಕಂಠೀರವ” ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ವಾಟ್ಸಪ್ ಮೂಲಕ ಮೊಬೈಲ್ ಸಂಖ್ಯೆ 9037173400 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top