ಕಾರ್ಮಾರು ಜಾತ್ರಾ ಮಹೋತ್ಸವ: ಗಡಿನಾಡ ಕನ್ನಡ ಸಂಸ್ಥೆಯ ಸಾಂಸ್ಕೃತಿಕ ವೈಭವ

Upayuktha
0


ಕಾಸರಗೋಡು: ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, ಡಾ. ವಾಣಿಶ್ರೀ ಕಾಸರಗೋಡು ಅವರ ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ), ಕಾಸರಗೋಡು ಮೊದಲ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿತು.


ಸಂಸ್ಥೆಯ 164ನೇ ಕಾರ್ಯಕ್ರಮದ ಅಂಗವಾಗಿ ಶ್ರೀ ಮಹಾವಿಷ್ಣು ದೇವರ ಕುರಿತ ಸಾಹಿತ್ಯ ಪ್ರಸ್ತುತಿಯನ್ನು ಸಂಘಟಕಿ ಡಾ. ವಾಣಿಶ್ರೀ ಅವರು ನಡೆಸಿದರು. ದಾಖಲೆ ರಿಂಗ್ ನೃತ್ಯ ಸಾಧಕಿ ಪ್ರೀತಿಕಾ ಪ್ರಸಾದ್ ಅವರು ಎರಡು ರಿಂಗ್‌ಗಳೊಂದಿಗೆ ವಿವಿಧ ಭಂಗಿಗಳಲ್ಲಿ ನೃತ್ಯ ಪ್ರದರ್ಶಿಸಿ ವಿಶೇಷ ಗಮನ ಸೆಳೆದರು. ವಿಸ್ಮಯ ವಿನೋದ್ ಅವರ ಅರೆ ಶಾಸ್ತ್ರೀಯ ನೃತ್ಯ ಕಾರ್ಯಕ್ರಮಕ್ಕೆ ಶುಭಾರಂಭ ನೀಡಿತು. ಶ್ರೇಯ ಸೂರ್ಯ ಹಾಗೂ ಶಿವಾನಿ ಅವರ ಜನಪದ ನೃತ್ಯಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.


ಸಂಘಟಕರಾದ ಸುಂದರ ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿ ಧನ್ಯವಾದ ಸಮರ್ಪಿಸಿದರು. ಡಾ. ವಾಣಿಶ್ರೀ ಅವರಿಗೆ ದೇವರ ಪ್ರಸಾದ ಹಾಗೂ ಫಲಪುಷ್ಪಗಳನ್ನು ನೀಡಿ ಸನ್ಮಾನಿಸಲಾಯಿತು.


ಎಲ್ಲಾ ಕಲಾವಿದರಿಗೆ ಸಂಸ್ಥೆಯ ವತಿಯಿಂದ ಗೌರವಧನ ಹಾಗೂ “ರಾಣಿ ಅಬ್ಬಕ್ಕ ಜೊತೆ ಪಯಣ” ಪುಸ್ತಕ ನೀಡಿ ಪುರಸ್ಕರಿಸಲಾಯಿತು. ಶಶಿಕಲಾ ಮತ್ತು ಅಚ್ಯುತ ಭಟ್ ಅವರಿಗೆ ಗೌರವ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.


ಕಾರ್ಯಕ್ರಮದಲ್ಲಿ ರಾಜೇಶ್, ಮಹೇಶ್, ಕೃಷ್ಣಮೂರ್ತಿ, ಕೃಷ್ಣಪ್ರಸಾದ ಮತ್ತು ಸುಂದರ ಶೆಟ್ಟಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top