ನೀರ್ಚಾಲು: ಮಾನ್ಯ- ಕಾರ್ಮಾರ್ ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಭಕ್ತಿಭಾವ ಹಾಗೂ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು. ಮಹೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು ಶ್ರೀ ದೇವರ ದರ್ಶನ ಪಡೆದು ಅನ್ನ ಪ್ರಸಾದ ಸ್ವೀಕರಿಸಿ ಪಾವನರಾದರು.
ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ.), ಕಾಸರಗೋಡು ಸಂಸ್ಥೆಯ ಸಾಂಸ್ಕೃತಿಕ ಕಲಾ ವೈಭವವು ವರ್ಣರಂಜಿತವಾಗಿ ಮೂಡಿಬಂದು ಜನಮನ್ನಣೆ ಗಳಿಸಿತು. ಗುರುರಾಜ್ ಕಾಸರಗೋಡು ಅವರ ಆಯೋಜನೆ ಮತ್ತು ನಿರೂಪಣೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವರ್ಷಾ ಶೆಟ್ಟಿ, ಸುತನಿಧಿ, ಭವಿಷ್ಯ ಪೂಜಾರಿ, ತೃಪ್ತಿ ವೈ. ಶೆಟ್ಟಿ, ಪ್ರತೀಕಾ ಎಂ. ಶೆಟ್ಟಿ, ಹೃತಿಕಾ, ಆಧ್ಯಾ ಎಂ. ಶೆಟ್ಟಿ, ತನುಶ್ರೀ, ವೈಷ್ಣವಿ, ಸನುಷಾ ಸುಧಾಕರನ್, ಅಶ್ವಿತಾ, ಆರಾಧ್ಯ ಪೂಜಾರಿ, ತನುಜಾ ಕಡಿಯವರ್, ಧೀಕ್ಷಾ ಕುಲಾಲ್, ಇಶಾನ್ ಎಂ. ಶೆಟ್ಟಿ, ಪ್ರತೀಕ್ ಪೂಜಾರಿ ಸೇರಿದಂತೆ ಸಂಸ್ಥೆಯ ಕಲಾವಿದರು ಯಶಸ್ವಿ ಕಲಾ ಪ್ರದರ್ಶನ ನೀಡಿದರು.
ಕಾರ್ಯಕ್ರಮದ ಕೊನೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಮುಖ್ಯಸ್ಥ ಮಹೇಶ್ ವಳಕುಂಜ ಅವರ ಉಪಸ್ಥಿತಿಯಲ್ಲಿ ಭಾಗವಹಿಸಿದ ಕಲಾವಿದರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


