ವಿಶ್ವ ಪ್ರವಾಸೋದ್ಯಮ ದಿನಾಚರಣೆ

Upayuktha
0


ಹಲೋ, ಹೇಗಿದ್ದೀರಾ?

ಅತಿಥಿ ದೇವೋ ಭವ- ಇದು ನಮಗೆ ಚಿಕ್ಕಂದಿನಿಂದ ಪರಂಪರಾನುಗತವಾಗಿ ಬಂದ ಸಂಸ್ಕಾರ, ನಮ್ಮ ಮನೆಗೆ ಬಂದ ಅತಿಥಿಗಳನ್ನು ಹೇಗೆ ಗೌರವಿಸುತ್ತವೆಯೋ ಹಾಗೆ ನಮ್ಮ ದೇಶಕ್ಕೆ ಬಂದ ವಿದೇಶಿಗರನ್ನು ಚೆನ್ನಾಗಿ ನೋಡಿ ಕೊಳ್ಳುವುದು ನಮ್ಮ ಸಂಸ್ಕೃತಿಯ ಒಂದು. ಭಾಗ. ಅದನ್ನು ರೂಢಿಸಲು ನಾವು ಪ್ರತಿ ವರ್ಷ ಜನವರಿ 9ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆ ಆಚರಿಸಲಾಗುತ್ತಿದೆ.


ಬಹಳ ಹಿಂದಿನಿಂದ ಕೂಡ ನಮ್ಮಲ್ಲಿ ಅತಿಥಿ ಸತ್ಕಾರ ಪ್ರಸಿದ್ಧವಾಗಿದೆ. ಹುಯನ್ ತ್ಸಂಗ್, ಸುಲೇಮಾನ್ ಮುಂತಾದ ವಿದೇಶಿ ಯಾತ್ರಿಕರು ನಮ್ಮ ಅತಿಥಿ ಸತ್ಕಾರದ ಬಗ್ಗೆ ಬರೆದು ಇಟ್ಟಿದ್ದಾರೆ.


ಈಗ ವಿದೇಶಿ ಯಾತ್ರಿಕರು, ಪ್ರವಾಸಿಗರು ನಮ್ಮ ದೇಶಕ್ಕೆ ಬಂದಾಗ ಕೇವಲ ನಮ್ಮ ದೇಶದ ಫೋಟೋಗಳನ್ನು ಅಷ್ಟೇ ಅಲ್ಲ, ನಮ್ಮ ಸಂಸ್ಕೃತಿಯ ನೆನಪುಗಳನ್ನು ಕೊಂಡೊಯ್ಯುತ್ತಾರೆ.


ಭಾರತೀಯ ಸಂಸ್ಕೃತಿ, ಉತ್ತಮ ಸಂಪ್ರದಾಯ, ಆಹಾರ, ಉಡುಗೆ ತೊಡುಗೆ, ಭಾಷೆಗೆ ಪ್ರಸಿದ್ಧವಾಗಿದ್ದು ಇಲ್ಲಿ ಬಂದಾಗ ಇಲ್ಲಿಯ ಆಭರಣ ತೊಟ್ಟು ಸೀರೆ ಉಟ್ಟುಕೊಂಡು. ಫೋಟೋ ತೆಗೆಸಿ ಕೊಳ್ಳುವ ಎಷ್ಟೋ ವಿದೇಶಿಗರು ಸಿಗುತ್ತಾರೆ. ಅವರು ನಮ್ಮ ಆರ್ಥಿಕ ಅಭಿವೃದ್ಧಿಗೆ ಕೂಡ ಕೊಡುಗೆ ನೀಡುತ್ತಾರೆ. ನಮ್ಮಲ್ಲಿಯ ಹೋಟೆಲ್, ಗೈಡ್‌ಗಳು, ಟ್ಯಾಕ್ಸಿ, ಅಂಗಡಿಗಳು, ಇವರೆಲ್ಲರ ಆರ್ಥಿಕ ಪ್ರಗತಿಯ ಸೇತುವೆ ಆಗುತ್ತಾರೆ.


ಈಗ ಪ್ರವಾಸೋದ್ಯಮ ಇಲಾಖೆ ವಿದೇಶಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಮಾಹಿತಿ, ಗೈಡ್‌ಗಳು, ಹೋಟೆಲ್ ವ್ಯವಸ್ಥೆ ಮುಖಾಂತರ ನಮ್ಮ ದೇಶದ ಅತಿಥಿಗಳ ಸತ್ಕಾರದ ಕೊಂಡಿ ಆಗಿದ್ದಾರೆ.


ನಮ್ಮ ದೇಶದ ಸಂಸ್ಕೃತಿಯನ್ನು ಎಲ್ಲ ಕಡೆಗೆ ಪಸರಿಸುವ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಮೂಲಕ ಉತ್ತಮ ಸೇತುವೆ ಕಟ್ಟೋಣ. ಏನಂತೀರಾ?


-ಗಾಯತ್ರಿ ಸುಂಕದ, ಬದಾಮಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top