ನಮ್ಮ ಜೀವನದಲ್ಲಿ ತಾಯಿಯ ಪಾತ್ರವನ್ನು ಶಬ್ದಗಳಲ್ಲಿ ವಿವರಿಸುವುದು ಬಹಳ ಕಷ್ಟ . ತಾಯಿ ಎನ್ನುವ ಶಬ್ದದಲ್ಲೇ ಪ್ರೀತಿ,ತ್ಯಾಗ, ಮತ್ತು ಕರುಣೆ ಸಹಾನುಭೂತಿ, ದಯೆ,ತಾಳ್ಮೆ. ಮಗು ಜನಿಸುವ ಕ್ಷಣದಿಂದಲೇ ತನ್ನ ಕನಸು ಆಸೆಗಳನ್ನು ಮಗುವಿಗೆ ನೀಡುತ್ತಾಳೆ. ಹಾಗೆಯೇ ತನ್ನ ಜೀವನದ ಬಗ್ಗೆ ಅರಿವು ಇರುವುದಿಲ್ಲ. ಎಲ್ಲಾ ಮಗು ಸಂಸಾರದಲ್ಲಿ ಅವಳ ಜೀವನವನ್ನು ಸಾಗಿಸುತ್ತಾಳೆ. ಮದುವೆಯಾದ ನಂತರ ಗಂಡ ಅತ್ತೆ ಮಾವ ಹೇಳಿದ ಮಾತು ಬಿಟ್ಟು ತನ್ನ ನಿರ್ಧಾರ ಇರುವುದಿಲ್ಲ.
ಹಾಗೆಯೇ ತಾಯಿಯಾದ ಬಳಿಕ ತನ್ನ ಹೊಟ್ಟೆಯಲ್ಲಿ 9 ತಿಂಗಳು ಇಟ್ಟುಕೊಂಡು ತನ್ನ ನೋವನ್ನು ಸಹಿಸಿಕೊಂಡು ನಮಗೆ ಮರುಜನ್ಮ ನೀಡುತ್ತಾಳೆ. ಸಂಸಾರದಲ್ಲಿ ತಾಯಿ ಇಲ್ಲದಿದ್ದರೆ ಅವರ ಜೀವನ ತುಂಬಾ ಕಷ್ಟಕರವಾಗುತ್ತದೆ . ಗಂಡನ ಮನೆಯಲ್ಲಿ ಹಿಂಸೆ ಇದ್ದರು ತಾಯಿಯ ಹತ್ತಿರ ಏನು ಹೇಳಿಕೊಳ್ಳುವುದಿಲ್ಲ. ಏಕೆಂದರೆ ಅವಳಿಗೆ ಮದುವೆಯಾದ ನಂತರ ಗಂಡನ ಮನೆಯಲ್ಲಿ ಏನೇ ಆದರೂ ಸಹಿಸಿಕೊಂಡು ಹೋಗುವಷ್ಟು ತಾಳ್ಮೆ ಹಾಗೆಯೇ ತವರಿನ ಮೇಲೆ ಪ್ರೀತಿ ಹಾಗೆಯೇ ಗಂಡನ ಮರ್ಯಾದೆ ಹೋಗುತ್ತದೆ ಎಂದು ಸುಮ್ಮನೆ ಇದ್ದುಬಿಡುತ್ತಾಳೆ. ಇಂದಿನ ಯುಗದಲ್ಲಿ ಅಂದರೆ ಕಾಲದಲ್ಲಿ ತಾಯಿಯ ತ್ಯಾಗವನ್ನು ಮರೆಯುತ್ತಾರೆ.
ಅನೇಕ ಮಕ್ಕಳು ತಮ್ಮ ತಾಯಂದಿರನ್ನು ವೃದ್ಧಾಶ್ರಮಗಳಿಗೆ ಕಳುಹಿಸುತ್ತಿರುವ ದೃಶ್ಯಗಳು ಮನಸ್ಸಿಗೆ ನೋವುಂಟು ಮಾಡುತ್ತದೆ. ತನ್ನ ಬದುಕಿನ ಪ್ರತಿಯೊಂದು ಕ್ಷಣವನ್ನು ಮಕ್ಕಳಿಗಾಗಿ ಅರ್ಪಿಸಿದ ತಾಯಿ, ವಯಸ್ಸಾದ ಮೇಲೆ ಒಂಟಿತನವನ್ನು ಅನುಭವಿಸಬೇಕಾದ ಪರಿಸ್ಥಿತಿಯಾಗಿದೆ. ತನ್ನ ಜೀವನದ ಬಗ್ಗೆ ಯಾವುದೇ ಆಸೆ ಇಲ್ಲದೆ ತನ್ನ ಮಕ್ಕಳಿಗೆ ಖುಷಿ,ಸಂತೋಷ, ನೆಮ್ಮದಿ,ಒಳ್ಳೆ ವಿದ್ಯಾಭ್ಯಾಸ ಸಿಗಬೇಕೆಂದು ತನ್ನ ಮಕ್ಕಳನ್ನು ಸಂತೋಷದಿಂದ ನೋಡಿಕೊಳ್ಳುತ್ತಾರೆ. ತನಗೆ ಊಟ ಇಲ್ಲದಿದ್ದರೂ ತನ್ನ ಮಕ್ಕಳಿಗೆ ಉಣಿಸುವ ಗುಣವುಳ್ಳವಳು . ಅದೇ ಅಲ್ಲವೇ ತಾಯಿ ತ್ಯಾಗ,ಮಹತ್ವ,ತಾಯಿ ಇಲ್ಲದ ಜೀವನ ಶೂನ್ಯ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



