ಸುರತ್ಕಲ್: ಹೊನ್ನೆಕಟ್ಟೆ ಫ್ರೆಂಡ್ಸ್ ಸರ್ಕಲ್ ಕುಳಾಯಿ ಇದರ 39ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಕಾರ್ಯಕ್ರಮವು ಜ.25ರ ಭಾನುವಾರ ಕುಳಾಯಿ ಮಹಿಳಾ ಮಂಡಲದ ಹಿಂಭಾಗದ ಮೈದಾನದಲ್ಲಿ ಶ್ರೀ ಸದಾಶಿವ ಮಯ್ಯ ರವರ ಪೌರೋಹಿತ್ಯದಲ್ಲಿ ಜರಗಲಿದೆ.
ಭಜನಾ ಕಾರ್ಯಕ್ರಮವನ್ನು ಶ್ರೀಮತಿ ರಮಾ ವೆಂಕಟ್ರಾವ್ ಉದ್ಘಾಟನೆ ಮಾಡಲಿದ್ದು ಶ್ರೀಮಾತಾ ಮಹಿಳಾ ಭಜನಾ ಮಂಡಳಿ ಕುಳಾಯಿ ಹೊಸಬೆಟ್ಟು ಮತ್ತು ಮಯೂರಿ ತಂಡದವರಿಂದ ಭಜನೆ- ಗೀತಾ ಗಾಯನ ಜರಗಲಿದೆ. ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಶ್ರೀ ಸುರೇಶ ಕೊಟ್ಟಾರಿ ರವರು ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಶ್ರೀ ಅಜಿತ್ ಮೈರ್ಪಾಡಿ ಮುಂಬಯಿ, ಶ್ರೀ ಪದ್ಮನಾಭ ಎಸ್ ಕರ್ಕೇರ, ಡಾ ಜಗದೀಶ ರಾವ್, ಡಾ ಅಪರ್ಣಾ ರಾವ್, ಶ್ರೀಮತಿ ವಿನಯ ವಿಠ್ಠಲ್ ಸಾಲ್ಯಾನ್ ಭಾಗವಹಿಸಲಿದ್ದಾರೆ.
ಶ್ರೀ ಪಟೇಲ್ ಶಂಕರ ರೈ ಗುತ್ತಿನಾರ್, ಶ್ರೀಮತಿ ಪೂರ್ಣಿಮಾ ಯುತೀಶ್ ರೈ, ಶ್ರೀಮತಿ ರಾಧಮ್ಮ ಪೂಜಾರಿ ಹೊಸಬೆಟ್ಟು, ಶ್ರೀ ಸದಾನಂದ ಯಚ್ ದೇವಾಡಿಗ, ಕುಮಾರಿ ಧನಲಕ್ಷ್ಮೀ ಪೂಜಾರಿ ಇಡ್ಯಾ, ಶ್ರೀ ಹರ್ಷಿತ್ ಕುಳಾಯಿ, ಶ್ರೀಮತಿ ಅಶ್ವಿನಿ ಐತಾಳ್ ರವರುಗಳನ್ನು ಅಭಿನಂದಿಸಲಾಗುವುದು.
ಮಹಾಪೂಜೆಯ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ಇದ್ದು ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕುಮಾರಿ ಶ್ರದ್ಧಾ ಮೈರ್ಪಾಡಿ ರವರಿಂದ ಭರತನಾಟ್ಯ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ತೆಲಿಕೆದ ಬೊಳ್ಳಿ ಡಾ ದೇವದಾಸ ಕಾಪಿಕಾಡ್ ನಿರ್ದೇಶನದ ಚಾ ಪರ್ಕ ಕಲಾವಿದೆರ್ ಕುಡ್ಲ ದವರಿಂದ ಎನ್ನನೇ ಕಥೆ ತುಳು ಹಾಸ್ಯಮಯ ನಾಟಕ ಪ್ರದರ್ಶನ ಜರಗಲಿದೆ ಎಂದು ಸಂಘದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

