ನಿಟ್ಟೆ ಮೀನಾಕ್ಷಿತಾಂತ್ರಿಕ ಮಹಾ ವಿದ್ಯಾಲಯದಲ್ಲಿ 77ನೇ ಗಣರಾಜ್ಯೋತ್ಸವ ಸಂಭ್ರಮ

Upayuktha
0


ಬೆಂಗಳೂರು: ‘ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ನಾವು ಇಡೀ ವಿಶ್ವಕ್ಕೇ ಜ್ಞಾನದ ನಿಧಿಯನ್ನು ನೀಡಿದ ನಮ್ಮ ಪುರಾತನರನ್ನು ಸ್ಮರಿಸಿ ಮುಂದಡಿಯಿಡಬೇಕು. ಏಕೆಂದರೆ ಜಗತ್ತನ್ನೇ ಬದಲಿಸಿರುವ ವಿಜ್ಞಾನ ಮತ್ತು ತಂತ್ರಜ್ಞಾನಗಳಿಗೆ ಅವಶ್ಯ ಪರಿಕಲ್ಪನೆ ನೀಡಿದವರು ನಮ್ಮ ಪುರಾತನ ಭಾರತದ ಋಷಿಗಳು. ಆದರೆ 900ವರ್ಷಗಳವಿದೇಶೀಯರ ಆಳ್ವಿಕೆಯಲ್ಲಿನಾವು ನಮ್ಮ ಚಿನ್ನ, ಮುತ್ತು, ರತ್ನ ಮಾತ್ರವಲ್ಲದೆ ನಮ್ಮಜ್ಞಾನದಭಂಡಾರವನ್ನೂ ಕಳೆದುಕೊಂಡೆವು. ಆದರೆ, ಈಗ ನಮ್ಮ ಯುವ ತಂತ್ರಜ್ಞರು ಇಡೀ ಜಗತ್ತಿಗೇ ಸಲ್ಲುವಂತಹ ವಿಶೇಷ ಜಾಣ್ಮೆ ಪ್ರದರ್ಶಿಸುತ್ತಿರುವುದು ಸಮಾಧಾನದ ಸಂಗತಿ', ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಪ್ರಸಿದ್ಧ ಭೌತವಿಜ್ಞಾನಿ ಪ್ರೊ.ಕೆ. ಸಿದ್ದಪ್ಪ ನುಡಿದರು. 


ಅವರು ಬೆಂಗಳೂರಿನ ನಿಟ್ಟೆ ಮೀನಾಕ್ಷಿತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಮಾರಂಭದಲ್ಲಿ ಸಂಸ್ಥೆಯ ಎನ್.ಸಿ.ಸಿ ಕೆಡೆಟ್‍ಗಳು ಸಾದರಪಡಿಸಿದ ಆಕರ್ಷಣೀಯ ಪಥಸಂಚಲನ ನೋಡುಗರ ಮನಸ್ಸನ್ನುಸೂರೆಗೊಂಡಿತು. ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ದೇಶದ ಶ್ರೀಮಂತ ಪರಂಪರೆಯ ಮಗ್ಗುಲುಗಳನ್ನು ಪರಿಚಯಿಸಿದವು. ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಬೆಂಗಳೂರು ಕ್ಯಾಂಪಸ್‍ ಉಪಾಧ್ಯಕ್ಷ ಪ್ರೊ.ಸಂದೀಪ್ ಶಾಸ್ತ್ರಿ, ಸಂಸ್ಥೆಯ ಪ್ರಾಂಶುಪಾಲ ಡಾ.ಹೆಚ್.ಸಿ.ನಾಗರಾಜ್, ಶೈಕ್ಷಣಿಕ ಪ್ರಮುಖ ಡಾ.ಸುಧೀರ್‍ರೆಡ್ಡಿ ಹಾಗೂ ಎನ್.ಸಿ.ಸಿ ಮುಖ್ಯಸ್ಥ ಡಾ. ರಾಜೇಶ್ ನಂದಳಿಕೆ ಉಪಸ್ಥಿತರಿದ್ದರು.



  ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top