ಮಂಗಳೂರು: ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಶನ್ ದ.ಕ ಜಿಲ್ಲಾ ಘಟಕ, ಮಂಗಳೂರು ಮತ್ತು ಶ್ರೀನಿವಾಸ ಇನ್ಸ್‍ಸ್ಟಿಟ್ಯೂಟ್ ಮೆಡಿಕಲ್ ಸೈನ್ಸಸ್ & ರಿಸರ್ಚ್ ಸೆಂಟರ್, ಮುಕ್ಕ ಸುರತ್ಕಲ್ ಇವರ ಸಹಯೋಗದೊಂದಿಗೆ ಶ್ರೀನಿವಾಸ ಔಷಧೀಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಮಂಗಳೂರು ವಳಚ್ಚಿಲ್‍ನಲ್ಲಿ ರಾಷ್ಟ್ರೀಯ ಫಾರ್ಮಸಿ ಸಪ್ತಾಹದ ಅಂಗವಾಗಿ ಉಚಿತ ಆರೋಗ್ಯ ಶಿಬಿರವನ್ನು ದಿನಾಂಕ 23.01.2026ರಂದು ಕಾಲೇಜಿನ ಕ್ಯಾಂಪಸ್‍ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಶಿಬಿರವನ್ನು ಡಾ.ನವೀನ್, ಜನರಲ್ ಮೆಡಿಸಿನ್ ವಿಭಾಗ, ಶ್ರೀನಿವಾಸ ಇನ್ಸ್‍ಸ್ಟಿಟ್ಯೂಟ್ ಮೆಡಿಕಲ್ ಸೈನ್ಸಸ್ & ರಿಸರ್ಚ್ ಸೆಂಟರ್, ಮುಕ್ಕ ಸುರತ್ಕಲ್ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಈ ಶಿಬಿರವು ಸಮಾಜದ ಅರೋಗ್ಯ ಜಾಗೃತಿ ಮತ್ತು ಉಚಿತ ತಪಾಸಣೆಗಾಗಿ ಅತ್ಯುತ್ತಮ ವೇದಿಕೆಯಾಗಿದ್ದು ಸಾಮಾನ್ಯ ರೋಗಗಳ ಬಗ್ಗೆ ಅರಿವು ಮೂಡಿಸಲು ಮತ್ತು ಆರೋಗ್ಯಕರ ಜೀವನ ಶೈಲಿಯನ್ನು ಪ್ರೋತ್ಸಾಹಿಸಲು ಸಹಾಯ ಮಾಡುತ್ತದೆ ಎಂದು ಕರೆಯಿತ್ತರು.
ಕಾರ್ಯಕ್ರಮದ ರಾಷ್ಟ್ರೀಯ ಫಾರ್ಮಸಿ ಸಪ್ತಾಹದ ಸಂಯೋಜಕರಾದ ಡಾ.ಎ.ಆರ್ ಶಬರಾಯ, ಪ್ರಾಂಶುಪಾಲರು, ಶ್ರೀನಿವಾಸ ಔಷಧೀಯ ಮಹಾವಿದ್ಯಾಲಯ, ವಳಚ್ಚಿಲ್, ಇವರ ನಿರಂತರ ಮಾರ್ಗದರ್ಶನದಿಂದ ಕಾರ್ಯಕ್ರಮ ಯಶಸ್ವಿಗೊಂಡಿತು.
ಮುಖ್ಯ ಅತಿಥಿಗಳಾದ ಡಾ.ನಿಹಾಲ್, ಡರ್ಮಟಾಲಜಿ ವಿಭಾಗ ಮತ್ತು ಡಾ.ಶ್ರೀಕೃತಿ, ಅಪ್ತಾಲ್‍ಮಾಲಜಿ ವಿಭಾಗ, ಶ್ರೀನಿವಾಸ ಇನ್ಸ್‍ಸ್ಟಿಟ್ಯೂಟ್ ಮೆಡಿಕಲ್ ಸೈನ್ಸಸ್ & ರಿಸರ್ಚ್ ಸೆಂಟರ್, ಮುಕ್ಕ ಸುರತ್ಕಲ್ ಉಪಸ್ಥಿತರಿದ್ದರು. ಡಾ. ಕುಮಾರ ಪ್ರಸಾದ್ ಎಸ್.ಎ, ಪ್ರೊಫೆಸರ್, ಮತ್ತು ಉಪಾಧ್ಯಕ್ಷರು, ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಶನ್ ದ.ಕ ಜಿಲ್ಲಾ ಘಟಕ, ಡಾ. ಪದ್ಮಾವತಿ ಪಿ ಪ್ರಭು, ಪ್ರೊಫೆಸರ್ ಮತ್ತು ರಾಷ್ಟ್ರೀಯ ಫಾರ್ಮಸಿ ಸಪ್ತಾಹದ ಸಂಯೋಜಕರು, ಡಾ. ಶ್ರೀಪತಿ ಡಿ., ಪೊಫೆಸರ್ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರವiದ ಅಧಿಕಾರಿ ಅತಿಥಿಗಳನ್ನು ಸ್ವಾಗತಿಸಿ ಅರೋಗ್ಯ ಶಿಬಿರದ ಬಗ್ಗೆ ಮಾಹಿತಿ ನೀಡಿದರು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಯೋಜಕರು ಈ ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.
ಕುಮಾರಿ ವಂದಿತ, ಅಸಿಸ್ಟೆಂಟ್ ಪ್ರೊಫೆಸರ್, ಇವರು ಕಾರ್ಯಕ್ರಮವನ್ನು ನಿರೂಪಿಸಿ ವಂದನಾರ್ಪಣೆಗೆೃದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


