ಮಂಗಳೂರು: ಜನರ ಬಳಿಗೆ ಹೋಗಿ ಅವರ ಅಗತ್ಯಕ್ಕೆ ಬೇಕಾದ ಉಳಿತಾಯ ಮಾಡಲು ಹೇಳುವ ಪ್ರತಿಯೊಬ್ಬರು ತಮ್ಮ ಒಳಗೆ ಸ್ಫಂಧನೆಯ ತುಡಿತ ಮತ್ತು ಒಳ್ಳೆಯ ಅಭಿರುಚಿಯ ನಡತೆಯನ್ನು ಹೊಂದಿರಬೇಕು ಎಂದು ಹಿರಿಯ ಪತ್ರಕರ್ತ, ಜೇಸಿಯ ಹಿರಿಯ ತರಬೇತುದಾರ ರೇಮಂಡ್ ಡಿಕೂನಾ ತಾಕೊಡೆ ನುಡಿದರು.
ಅವರು ಮಂಗಳೂರು ಪದ್ವಾ ಕಾಲೇಜಿನಲ್ಲಿ ಡಾ ಮರಿಯಾ ಪ್ರಮೀಳಾ ಅವರ ಫೈನಾನ್ಸಿಯಲ್ ಅವೇರ್‌ನೆಸ್ ತರಬೇತಿಯನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.
ನಮ್ಮ ಉಡುಗೆ ತೊಡುಗೆ, ಮಾತುಗಳ ನಯ ಜನರ ಮೇಲೆ ಪ್ರಭಾವ ಬೀರುತ್ತವೆ. ನಾವು ಸಚ್ಚಾರಿತ್ರ್ಯದಿಂದ ಇರುವುದು ಸಹ ಅಗತ್ಯ ಎಂದರು.
ತರಭೇತಿದಾರರಾದ ಡಾ ಮರಿಯಾ ಪ್ರಮೀಳಾ ಅವರು ಮಾತನಾಡಿ, ನಮ್ಮ ವಯಸ್ಸಿನ ಮೇಲೆ ನಿಗಾ ಇಡುವುದು ಅಗತ್ಯ ಅಲ್ಲ. ನಮ್ಮ ದಾರಿಯಲ್ಲಿ ಸಾಧನೆಯ ಮೈಲುಗಳು ಎಷ್ಟಿರಬೇಕು ಎಂದು ಮುಖ್ಯ ಇದಕ್ಕಾಗಿ ನಿಯಮಿತವಾಗಿ ದುಡಿದು ಸಾಧನೆ ಮಾಡಬೇಕು ಎಂದರು.
ಕಾರ್ಯಕ್ರಮ ಆಯೋಜನೆ ಮಾಡಿದ ಹಿರಿಯ ಶಿಕ್ಷಕ ಸ್ಟೇನಿ ತಾವ್ರೊ ಸ್ವಾಗತಿಸಿದರು. ಜೋನ್ ತಾವ್ರೊ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


