ನಾವು ರಾಜಕೀಯ ವಿಚಾರದಲ್ಲಿ ಜಾಗೃತ ನಾಗರಿಕರಾಗಬೇಕು. ಕೆಲವರು ಯಾವ ಯೋಚನೆಯೂ ಇಲ್ಲದೆ ಪಕ್ಷಗಳನ್ನು, ರಾಜಕಾರಣಿಗಳನ್ನು ಮಾತ್ರ ಅನುಸರಿಸುತ್ತಾರೆ. ಈ ವರ್ಷ ನಾವು ನಮ್ಮ ಚಿಂತನೆಯ ದಿಕ್ಕನ್ನು ಬದಲಿಸೋ ಸಮಯ ಬಂದಿದೆ.
ನಾವು ನಾಯಕರನ್ನು ಬೆಂಬಲಿಸುವಾಗ ಅಥವಾ ಹಿಂಬಾಲಿಸುವ ನಿರ್ಧಾರ ತೆಗೆದುಕೊಳ್ಳುವಾಗ ಸತ್ಯವ ವಿಚಾರಗಳನ್ನು ತಿಳಿದುಕೊಳ್ಳಬೇಕು. ಸುಳ್ಳು ಪ್ರಚಾರ ಅಥವಾ ಭಾವನಾತ್ಮಕ ಮಾತುಗಳಿಗೆ ಬೆಂಬಲ ನೀಡಬಾರದು.
ನಾವು ಯೋಚಿಸಬೇಕು, ಪ್ರಶ್ನೆ ಕೇಳಬೇಕು, ಹೊಸ ಯೋಜನೆಗಳು ಜನರಿಗೆ ಸಹಾಯ ಮಾಡುತ್ತವೆಯೇ? ತೆರಿಗೆ ಹಣ ಸರಿಯಾಗಿ ಬಳಸಲಾಗುತ್ತಿದೆಯೇ? ಬೆಳವಣಿಗೆ ನಿಜವಾಗಿ ಆಗುತ್ತಿದೆಯೇ ಇಲ್ಲವೇ ಎನ್ನುವ ಪ್ರಶ್ನೆಗಳನ್ನು ಕೇಳಿ ಆ ಬಳಿಕ ನಿರ್ಧಾರ ತೆಗೆದುಕೊಳ್ಳಬೇಕು.
ಈ ವರ್ಷವಾದರು, ನಾವು “ಪಕ್ಷ ಅಥವಾ ನಾಯಕರ ಬೆಂಬಲಿಗರು” ಮಾತ್ರವಲ್ಲ, ವಿಚಾರವಂತ ನಾಗರಿಕರಾಗೋಣ. ನಮ್ಮ ಪ್ರಶ್ನೆಗಳಿಂದ ರಾಜಕೀಯ ನಾಯಕರು ಜನರ ಹಿತಕ್ಕಾಗಿ ಕೆಲಸ ಮಾಡುವಂತಾಗಲಿ, ದೇಶದ ಬೆಳವಣಿಗೆಯಾಗಲಿ.
ನಾವು ಪ್ರಶ್ನೆ ಕೇಳಿದಾಗ ಮಾತ್ರ ದೇಶ ಬದಲಾಗಲು ಮತ್ತು ಬೆಳವಣಿಗೆಯಾಗಲು ಸಾಧ್ಯ ಅದನ್ನು ಹೊರತು ನಮ್ಮ ಯೋಚನೆಯನ್ನು ಬದಿಗಿಟ್ಟು ಅಂದ ಭಕ್ತರಾದರೆ ನಾವು ಇದ್ದಲ್ಲೇ ಇದ್ದು ಬಿಡುತ್ತೇವೆ, ಬೆಳವಣಿಗೆ ದೇಶದ್ದಲ್ಲಾ ರಾಜಕಾರಣಿಗಳಾಗುತ್ತಾರೆ.
-ವೈಶಾಖ್ ರಾಜ್ ಜೈನ್
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


