ಭರತಾಂಜಲಿ: ಸೈಬರ್ ಅಪರಾಧದ ಬಗ್ಗೆ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮ

Upayuktha
0


ಮಂಗಳೂರು: ಭರತಾಂಜಲಿ ನೃತ್ಯ ಸಂಸ್ಥೆ ಕೊಟ್ಟಾರ ಇವರು ಕಿಂಕಿಣಿ ತ್ರಿಂಶತ್ ಸಂಭ್ರಮಾಚರಣೆಯಲ್ಲಿ ಉರ್ವ ಪೊಲೀಸ್ ಠಾಣೆಯ ಸಹಕಾರದೊಂದಿಗೆ ಸೈಬರ್ ಅಪರಾಧದ ಬಗ್ಗೆ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮವು ಕೊಟ್ಟಾರದ ಭರತಾಂಜಲಿಯಲ್ಲಿ ಜರಗಿತು.


ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಉರ್ವ ಪೊಲೀಸ್ ಠಾಣೆಯ ರೈಟರ್ ಪ್ರಮೋದ್ ಕೆ ಮಾತನಾಡಿ, ಸೈಬರ್ ಅಪರಾಧವು ಕಣ್ಣಿಗೆ ಕಾಣದ ಜಾಗತಿಕ ಮಟ್ಟದಲ್ಲಿ ಮನುಷ್ಯನಿಗೆ ಮತ್ತು ರಾಷ್ಟ್ರಗಳಿಗೂ ಗಂಭೀರ ಹಾನಿ ತರಬಲ್ಲ ಒಂದು ಅಪರಾಧ. ತಂತ್ರಜ್ಞಾನ ಬೆಳೆದಂತೆ ಇಂತಹ ಅಪರಾಧ ಪ್ರಕರಣಗಳು ವಿಭಿನ್ನವಾಗಿ ಹೊರ ಬರುತ್ತಿವೆ. ನಾವುಗಳು ಮೊಬೈಲ್‌ಗಳ ಬಳಕೆ ಮಾಡುವಾಗ ವಿಶೇಷವಾಗಿ ಜಾಗರೂಕರಾಗಿರಬೇಕು. ದೇಶದ ಒಳಗಿನ ಅಪರಾಧಗಳನ್ನು ಪತ್ತೆ ಹಚ್ಚಬಹುದು. ಆದರೆ ದೇಶದ ಹೊರಗಿನಿಂದ ಕುಳಿತು ಮಾಡುವ ಅಪರಾಧಗಳನ್ನು ಪತ್ತೆ ಹಚ್ಚಲು ಕಷ್ಟ ಸಾಧ್ಯ. ಅನಕ್ಷರಸ್ಥರಿಗಿಂತ ಅಕ್ಷರಸ್ಥರೇ ಈ ಪಿಡುಗಿಗೆ ಬಲಿಯಾಗುತ್ತಿರುವುದು ವಿಷಾದನೀಯ ಎಂದರು.


ಡಿಜಿಟಲ್ ಎರೆಸ್ಟ್ ಎಂಬುದೇ ಒಂದು ಹಾಸ್ಯಾಸ್ಪದ ಇಂದು ಈ ಹೆಸರಿನಿಂದ ದುಡ್ಡು ಕಳಕೊಂಡವರೇ ಹೆಚ್ಚು.  ಮೊಬೈಲ್ಗಳಲ್ಲಿ ಬರುವ ಯಾವುದೇ ದರಕಡಿತ ಜಾಹೀರಾತು, ಬ್ಯಾಂಕ್ ಲೋನ್, ಶೇರ್ ವ್ಯವಹಾರ, ಹಣ ಡಬಲ್ ಮಾಡುವ ಬಗ್ಗೆ ಮಾಹಿತಿಗಳು ಬಂದರೆ ಉತ್ತರಿಸದಿರಿ ಮೊಬೈಲ್ ಒಟಿಪಿ ಶೇರ್ ಮಾಡದಿರಿ ಸೈಬರ್ ಅಪರಾಧಗಳಿಗೆ ಅಂಜದೆ ಅವುಗಳಿಂದ ಜಾಗೃತರಾಗಬೇಕು ಎಂದು ಉದಾಹರಣೆ ಸಹಿತ ಮಾಹಿತಿ ನೀಡಿದರು.


ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ವೇಣುಗೋಪಾಲ್ ರವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ಇಂದು ಡ್ರಗ್ಸ್ ಬೇರೆ ಬೇರೆ ರೀತಿಯಲ್ಲಿ ಬರುತ್ತಿವೆ. ಮನುಷ್ಯನ ಪ್ರತಿಯೊಂದು ಸೆಕೆಂಡು ಸಹ ಅಮೂಲ್ಯ. ಎಚ್ಚರ ತಪ್ಪಿದ್ರೆ ಅನಾಹುತ ತಪ್ಪಿದ್ದಲ್ಲ. ಅಪರಾಧ ಜಗತ್ತಿಗೆ ಪ್ರವೇಶಿಸಿದಂತೆ ಆಗುತ್ತದೆ. ಆದ್ದರಿಂದ ಕಾಲೇಜು ಜೀವನದಲ್ಲಿ ತಿನ್ನುವಾಗ ಗೆಳೆಯರೊಂದಿಗೆ ವ್ಯವಹರಿಸುವಾಗ, ಗೆಳೆತನವನ್ನು ಮಾಡುವಾಗ ಜಾಗರೂಕರಾಗಿರಬೇಕು. ಪೋಷಕರು ಸಹ ಮಕ್ಕಳ ಚಲನವಲನಗಳ ಬಗ್ಗೆ ಮೊಬೈಲ್ ಚಾಟಿಂಗ್ ಬಗ್ಗೆ ಸೂಕ್ಷ್ಮ ನಿಗಾ ವಹಿಸಬೇಕು. ಯಾವುದೇ ಅಹಿತಕರ ಘಟನೆ ಕಂಡು ಬಂದಲ್ಲಿ 1930 ಸಂಖ್ಯೆಗೆ ಮಾಹಿತಿ ನೀಡಿ ಎಂದರು.


ಉರ್ವ ಪೊಲೀಸ್ ಠಾಣೆಯ ಸೈಬರ್ ಕ್ರೈಂ ವಿಭಾಗದ ಚಂದ್ರಹಾಸರವರು ಮೊಬೈಲ್ ಮಾಹಿತಿಯನ್ನು ಹೇಗೆ ಗೌಪ್ಯವಾಗಿ ಇಡಬೇಕು ಹೊರಗಿನವರಿಗೆ ನಮ್ಮ ಮಾಹಿತಿ ಸಿಗದಂತೆ ಮಾಡಬಹುದಾದ ತಾಂತ್ರಿಕ ವಿಷಯಗಳನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಿದರು.


ಭರತಾಂಜಲಿ ಸಂಸ್ಥೆಯ ನೃತ್ಯ ಗುರು ಶ್ರೀಧರ ಹೊಳ್ಳ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ವಿದುಷಿ ಪ್ರತಿಮಾ ಶ್ರೀಧರ್ ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top