ಬ್ಯಾಂಕ್ ಗಳು ಲಕ್ಷ್ಮೀ ಆರಾಧಕರು : ಶ್ರೀ ವೇದ ವರ್ಧನ ತೀರ್ಥ ಶ್ರೀಪಾದರು

Upayuktha
0


ಉಡುಪಿ: "ಬ್ಯಾಂಕ್ ಗಳು ಲಕ್ಷ್ಮೀ ಆರಾಧಕರು, ಲಕ್ಷ್ಮೀ ಅನುಗ್ರಹವಾಗಬೇಕಾದರೆ, ನಾರಾಯಣ ಅನುಗ್ರಹಿಸಬೇಕು. ಬ್ಯಾಂಕಿನ ಕೃಷ್ಣ ಸೇವೆಯಿಂದ ಖಂಡಿತ ಮುಂದಿನ ದಿನಗಳಲ್ಲಿ ಬ್ಯಾಂಕು, ಸಾಧನೆಯ ಉತ್ತುಂಗಕ್ಕೇರಲಿದೆ.  ಲಕ್ಷ್ಮಿ( L) GOD ಜತೆಗೆ ಸೇರಿದಾಗ ಮಾತ್ರ  GOLD ಆಗುತ್ತದೆ. ಬದುಕು ದೇವರ ಆರಾಧನೆಯಿಂದ ಬಂಗಾರವಾಗುತ್ತದೆ " ಎಂದು ಕರ್ಣಾಟಕ ಬ್ಯಾಂಕಿನ ಉಡುಪಿ ಪ್ರಾದೇಶಿಕ ಕಚೇರಿಯಲ್ಲಿ ಶ್ರೀ ವೇದ ವರ್ಧನ ತೀರ್ಥ ಶ್ರೀಪಾದರನ್ನು ಭಕ್ತ್ಯಾದರಗಳಿಂದ ಆಹ್ವಾನಿಸಿ, ಸ್ವಾಗತಿಸಿ ಪಾದ ಪೂಜೆಯನ್ನು ನೆರವೇರಿಸದ ಸಂದರ್ಭ ಆಶೀರ್ವಚನ ನೀಡಿದರು.


ಈ ಸಂದರ್ಭದಲ್ಲಿ ಮಾತನಾಡಿದ  ವ್ಯವಸ್ಥಾ ಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ  ರಾಘವೇಂದ್ರ ಶ್ರೀನಿವಾಸ್ ಭಟ್,  " ಶ್ರೀ ಕೃಷ್ಣ  ಮಠದೊಂದಿಗಿನ ಬ್ಯಾಂಕಿನ ಸಂಬಂಧ 102 ವರ್ಷಗಳಷ್ಟು ಪಕ್ವವಾದುದು. ಮೊದಲು ಉಡುಪಿ ರಥ ಬೀದಿ ಶಾಖೆಯಲ್ಲಿ ಪರ್ಯಾಯ ಸಂದರ್ಭದಲ್ಲಿ  ನೆರವೇರಿಸುತ್ತಿದ್ದ ಪಾದಪೂಜೆಯನ್ನು ಪ್ರಾದೇಶಿಕ ಕಚೇರಿ ಆರಂಭಗೊಂಡ ನಂತರ ಇಲ್ಲಿ ನಡೆಸುತ್ತಿದ್ದೇವೆ. ಬ್ಯಾಂಕಿನ ಸಮಸ್ತ ಸೇವೆಗಳೂ ಜನಪರವಾಗಿವೆ. ನಮ್ಮ ಎಲ್ಲ ಕಾರ್ಯಕ್ರಮಗಳಿಗೂ ದೇವರ ಅನುಗ್ರಹ ಬೇಕು ಎಂದರು.


ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷ ಪ್ರದೀಪ ಕುಮಾರ್ ಪಂಜ,   ಬ್ಯಾಂಕಿನ ನಿರ್ದೇಶಕರುಗಳಾದ,  ಬಾಲಕೃಷ್ಣ ಅಲ್ಸೆ, ಜೀವನ್ ದಾಸ್ ನಾರಾಯಣ್,  ಹರೀಶ್ ಎಚ್. ವಿ.,  ಬ್ಯಾಂಕಿನ ಸಿ. ಒ..ಒ  ರಾಜಾ ಬಿ‌ಎಸ್, ಸಿ. ಬಿ. ಒ.  ಚಂದ್ರಶೇಖರ್, ಬ್ಯಾಂಕಿನ ಕಂಪೆನಿ ಸೆಕ್ರೆಟರಿ ಶಾಮ್ ಕೆ ಮಹಾಪ್ರಬಂಧಕರುಗಳಾದ ಜಯನಾಗರಾಜ್ ರಾವ್,  ರಘುರಾಮ್ ಹೆಚ್. ಎಸ್,  ಶ್ರೀಧರ್ ಉಪ ಮಹಾಪ್ರಬಂಧಕರುಗಳಾದ  ಗೋಪಾಲ ಕೃಷ್ಣ ಸಾಮಗ,  ವಾದಿರಾಜ್ ಕೆ.  ಉಡುಪಿ ವಲಯದ ಸಹಾಯಕ ಮಹಾಪ್ರಬಂಧಕ ರಾದ  ರಮೇಶ್ ವೈದ್ಯ, ಬ್ಯಾಂಕಿನ  ಸಾರ್ವಜನಿಕ ಸಂಪರ್ಕ ಅಧಿಕಾರಿ ಪಲ್ಲಪಿ  ಟಿ. ಎಸ್, ಎಂಪ್ಲಾಯೀಸ್ ಅಸೋಸಿಯೇಷನ್ ನ ಜನರಲ್ ಸೆಕ್ರೆಟರಿ‌ ಫಣೀಂದ್ರ ಮುಂತಾದವರು ಸೇರಿದಂತೆ, ಉಡುಪಿ ನಗರದ ಶಾಖಾ ಸಿಬ್ಬಂದಿಗಳು, ನಿವೃತ್ತ ಅಧಿಕಾರಿಗಳು, ಉಡುಪಿಯ ಭಕ್ತ ಜನತೆಉಪಸ್ಥಿತರಿದ್ದರು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top