ಬೆಂಗಳೂರು: ತ್ಯಾಗರಾಜನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಧ್ವ ನವಮಿ ಪ್ರಯುಕ್ತ ಜನವರಿ 27, ಮಂಗಳವಾರ ಬೆಳಗ್ಗೆ 8-00 ಗಂಟೆಯಿಂದ ಹಮ್ಮಿಕೊಂಡಿರುವ ಧಾರ್ಮಿಕ ಕಾರ್ಯಕ್ರಮಗಳು :
ಮಧ್ವಾಚಾರ್ಯರಿಗೆ ಹಾಗೂ ಗುರುರಾಯರಿಗೆ ಫಲ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಸಾಮೂಹಿಕ ಶ್ರೀ ವಾಯು ಸ್ತುತಿ ಮತ್ತು ಸಾಮೂಹಿಕ ಶ್ರೀ ಸುಮಧ್ವ ವಿಜಯ ಪಾರಾಯಣ, ನೂತನ ಪ್ರಾಣದೇವರ ಉತ್ಸವ ಮೂರ್ತಿ ಪ್ರಾಣಪ್ರತಿಷ್ಠಾಪನೆ ಮತ್ತು ರಜತ ಕವಚ ಸಮರ್ಪಣೆ, ವಿವಿಧ ಭಜನಾ ಮಂಡಳಿಗಳ ಗಾಯನದೊಂದಿಗೆ ಶ್ರೀ ಮಧ್ವಾಚಾರ್ಯರ ಹಾಗೂ ಶ್ರೀ ಪ್ರಾಣದೇವರ ರಾಜಬೀದಿ ಉತ್ಸವ, ಮಧ್ವಶಾಸ್ತ್ರಸಂಪನ್ನರಾದ ಶ್ರೀ ಕರ್ನೂಲು ಶ್ರೀನಿವಾಸಾಚಾರ್ ಮತ್ತು ಶ್ರೀ ಕಲ್ಲಾಪುರ ಪವಮಾನಾಚಾರ್ ಇವರಿಂದ "ಈಗಿನ ಪೀಳಿಗೆಗೆ ಮಧ್ವಾಚಾರ್ಯರ ಸಿದ್ಧಾಂತ" ಕುರಿತು ವಿಶೇಷ ಉಪನ್ಯಾಸ ಹಾಗೂ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿವೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 9900215389 / 080-41201274
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


